ಬಂಗಾಲದಲ್ಲಿ ತೃಣ ಮೂಲ ಕಾಂಗ್ರೆಸ್ಸಿನ ಸ್ಥಳೀಯ ಪದಾಧಿಕಾರಿಗಳ ಮನೆಯಲ್ಲಿ ನಾಡಬಾಂಬ್ ತಯಾರಿಸುವಾಗ ಸ್ಫೋಟ !- ೩ ಕಾರ್ಯಕರ್ತರ ಮೃತ್ಯು

ಮೇದನಾಪುರ್ (ಬಂಗಾಲ ) : ಇಲ್ಲಿಯ ಅರ್ಜುನನಗರ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸ್ಥಳೀಯ ಪದಾಧಿಕಾರಿ ರಾಜಕುಮಾರ ಮನ್ನಾ ಇವರ ಮನೆಯಲ್ಲಿ ನಡೆದಿರುವ ಬಾಂಬ್ ಸ್ಫೋಟದಲ್ಲಿ ಪಕ್ಷದ ೩ ಕಾರ್ಯಕರ್ತರ ಮೃತರಾಗಿದ್ದಾರೆ ಹಾಗೂ ಕೆಲವು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದಲ್ಲಿ ಮನ್ನಾ ಅವರ ಮನೆ ಸಂಪೂರ್ಣವಾಗಿ  ಸುಟ್ಟುಹೋಗಿದೆ. ಮನ್ನಾ ಇವರ ಮನೆಯಲ್ಲಿ ನಾಡ ಬಾಂಬ್ ತಯಾರಿಸುವಾಗ ಈ ಸ್ಫೋಟ ನಡೆದಿದೆ. ಇಲ್ಲಿಯ ಕಾಂಥಿ ಪ್ರದೇಶದಲ್ಲಿ ಪಕ್ಷದ ನಾಯಕ ಅಭಿಷೇಕ ಬ್ಯಾನರ್ಜಿ ಇವರ ಸಭೆ ನಡೆಯಲಿತ್ತು.

ಈ ಸಂದರ್ಭದಲ್ಲಿ ಈ ಸ್ಫೋಟ ಆಗಿರುವುದರಿಂದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಮೊದಲು ನವೆಂಬರ್ ೬ ರಂದು ಕೂಡ ರಾಜ್ಯದ ಡೆಗಾಂಗ್  ಪ್ರದೇಶದಲ್ಲಿ ತರುಣ ಮೂಲಕ ಕಾಂಗ್ರೆಸ್ಸಿನ ಕಾರ್ಯಕರ್ತನ ಮನೆಯಲ್ಲಿ ನಡೆದಿರುವ ನಾಡ ಬಾಂಬ್ ಸ್ಪೋಟದಲ್ಲಿ  ಇಬ್ಬರು ಗಾಯಗೊಂಡಿದ್ದರು .