ಉತ್ತರಪ್ರದೇಶದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ೨ ಸಾಧೂಗಳ ಹತ್ಯೆ !

ರಾಜ್ಯದಲ್ಲಿ ಕಳೆದ ೨ ವರ್ಷಗಳಲ್ಲಿ ೨೦ ಕ್ಕೂ ಹೆಚ್ಚು ಸಾಧುಗಳ ಹತ್ಯೆ!

ಅಲಿಗಡ (ಉತ್ತರಪ್ರದೇಶ)  – ಉತ್ತರಪ್ರದೇಶದಲ್ಲಿ ಇಬ್ಬರ ಸಾಧುಗಳ ಹತ್ಯೆಯ ಘಟನೆಯಾಗಿದೆ. ಅಲಿಗಡ  ಇಲ್ಲಿಯ ನಗಲಾ ಗ್ರಾಮದಲ್ಲಿ ೭೦ ವರ್ಷದ ಸಾಧು ಬುದ್ಧಸೇನ ಇವರು ರಾತ್ರಿ ಮಲಗಿರುವಾಗ ದುಷ್ಕರ್ಮಿಗಳು ಕಲ್ಲು ಇಟ್ಟಿಗೆಯ ಮೂಲಕ ಜಜ್ಜಿ ಹತ್ಯೆ ಮಾಡಿದ್ದಾರೆ. ಕಳೆದ ೭ ವರ್ಷಗಳಿಂದ ಅವರು ಇಲ್ಲಿ ವಾಸವಾಗಿದ್ದರು. ಈ ಹತ್ಯೆಯ ಕಾರಣ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಇನ್ನೊಂದು ಘಟನೆಯಲ್ಲಿ ಬರೆಲಾ ಪ್ರದೇಶದಲ್ಲಿ ಪರೋರ ಗ್ರಾಮದ ಸಾಧು ಕುವರಪಾಲ ಇವರ ಹತ್ಯೆ  ಮಾಡಲಾಗಿದೆ. ಅವರ ಮೃತದೇಹ ಇಲ್ಲಿಯ ಹೊಲದಲ್ಲಿ ಸಿಕ್ಕಿದೆ. ಈ ಹತ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ.

ಉತ್ತರಪ್ರದೇಶದಲ್ಲಿ ಕಳೆದ ೨ ವರ್ಷದಲ್ಲಿ ೨೦ ಕ್ಕೂ ಹೆಚ್ಚಿನ ಸಾಧುಗಳ ಹತ್ಯೆಯಾಗಿದೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಒಂದೇ ಕಡೆಗೆ ಕಳೆದ ಆರು ತಿಂಗಳಲ್ಲಿ ೮ ಸಾಧುಗಳ ಹತ್ಯೆ ನಡೆದಿದೆ. ಈ ಘಟನೆಗಳಿಂದ ಸಾಧು ಸಮಾಜದಲ್ಲಿ ಭಯದ ವಾತಾವರಣ ಇದೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಸಾಧುಗಳ ಹತ್ಯೆ ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ . ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆಯೇನು ? ಇದನ್ನು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕಂಡುಹಿಡಿಯಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !