ವಿಶ್ವ ಹಿಂದೂ ಪರಿಷತ್ ದೇಶದಲ್ಲಿ `ಲವ್ ಜಿಹಾದ್’ ಮತ್ತು ಮತಾಂತರದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಆಂದೋಲನ ನಡೆಸಲಿದೆ

ಲವ್ ಜಿಹಾದ್ ನ ೪೦೦ ಪ್ರಕರಣಗಳ ಪಟ್ಟಿ ಬಿಡುಗಡೆಗೊಳಿಸಿದರು !

ನವದೆಹಲಿ – ವಿಶ್ವ ಹಿಂದೂ ಪರಿಷತ್ ದಿಂದ `ಲವ್ ಜಿಹಾದ್’ ಮತ್ತು ಮತಾಂತರದ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸುವ ಘೋಷಣೆ ನೀಡಿದೆ. ಇದರ ಜೊತೆ ಪರಿಷತ್ತವು ಈ ಸಂದರ್ಭದಲ್ಲಿ ಕೇಂದ್ರ ಸರಕಾರವು ಕಠಿಣ ಕಾನೂನು ಜಾರಿ ಮಾಡಲು ಒತ್ತಾಯಿಸಿದೆ. ವಿಶ್ವ ಹಿಂದೂ ಪರಿಷತ್ತಿನಿಂದ ಈ ಸಮಯದಲ್ಲಿ ದೇಶದಲ್ಲಿನ `ಲವ್ ಜಿಹಾದ್ ನ ೪೦೦ ಕ್ಕೂ ಹೆಚ್ಚಿನ ಪ್ರಕರಣದ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವ ಹಿಂದೂ ಪರಿಷತ್ತಿನ ಸಯುಕ್ತ ಮಹಾಮಂತ್ರಿ ಡಾ. ಸುರೇಂದ್ರ ಜೈನ ಇವರು, ಸಾಮಾಜಿಕ ಅಸಂತೋಷ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಲವ್ ಜಿಹಾದ್ ಒಂದು ದೊಡ್ಡ ಸಂಕಟವಾಗಿದೆ.

ಕಾನೂನುಬಾಹಿರ ಮತಾಂತರ ತಡೆಯುವದಕ್ಕಾಗಿ ಸಕ್ಷಮ ಕಾನೂನಿನ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಬಜರಂಗದಳದಿಂದ ಡಿಸೆಂಬರ್ ೧ ರಿಂದ ೧೦ ರ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ `ಶೌರ್ಯ ಯಾತ್ರೆ’ ನಡೆಸಲಾಗುವುದು. ವಿಶ್ವ ಹಿಂದೂ ಪರಿಷತ್ತಿನಿಂದ ಡಿಸೆಂಬರ್ ೨೧ ರಿಂದ ೩೧ ರ ಸಮಯದಲ್ಲಿ `ಧರ್ಮರಕ್ಷಾ’ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.