ಮಧ್ಯಪ್ರದೇಶದಲ್ಲಿ ಏಕರೂಪ ನಾಗರೀಕ ಕಾನೂನಿಗಾಗಿ ಸಮಿತಿಯ ಸ್ಥಾಪನೆ ಆಗಲಿದೆ

ಭೋಪಾಲ್ (ಮಧ್ಯಪ್ರದೇಶ) – ಉತ್ತರಾಖಂಡ ಮತ್ತು ಗುಜರಾತ ಈ ರಾಜ್ಯಗಳ ನಂತರ ಈಗ ಭಾಜಪ ಆಡಳಿತ ಇರುವ ಮಧ್ಯಪ್ರದೇಶದಲ್ಲಿ ಕೂಡ ಏಕರೂಪ ನಾಗರೀಕ ಕಾನೂನು ಜಾರಿ ಮಾಡುವ ಘೋಷಣೆ ಮಾಡಲಾಯಿತು. ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್ ಇವರು ಇದಕ್ಕೆ ಸಂಬಂಧ ಪಟ್ಟ ಒಂದು ಸಮಿತಿಯ ಸ್ಥಾಪನೆ ಮಾಡಲಾಗುವುದೆಂದು ಹೇಳಿದ್ದಾರೆ. ಬಡವಾಣಿ ಇಲ್ಲಿಯ ಒಂದು ಸಭೆಯಲ್ಲಿ ಶಿವರಾಜ ಸಿಂಹ ಚೌಹಾನ್, ಒಂದು ದೇಶದಲ್ಲಿ ಎರಡು ಕಾನೂನು ಏತಕ್ಕಾಗಿ ? ಒಂದೇ ಕಾನೂನು ಇರುವುದು ಅವಶ್ಯಕ. ದೇಶದಲ್ಲಿ ಈಗ ಏಕರೂಪ ನಾಗರೀಕ ಕಾನೂನು ಜಾರಿಯಾಗಬೇಕು ಎಂದು ಹೇಳಿದರು.