ಹಿಜಾಬ್ ವಿರೋಧಿ ಆಂದೋಲನ ಪ್ರಕರಣ
( ಹಿಜಾಬ ಎಂದರೆ ಮುಸಲ್ಮಾನ ಹೆಣ್ಣು ಮಕ್ಕಳ ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ )
ದೋಹಾ (ಕತಾರ್) – ಇಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವ ಕಪ್ ಸ್ಪರ್ಧೆಯಲ್ಲಿ ಅಮೆರಿಕಾವು ಇರಾನ ಸಂಘವನ್ನು ಸೋಲಿಸಿದ ನಂತರ ಅಮೇರಿಕಾದಿಂದ ಮಾತ್ರವಲ್ಲ, ಇರಾನಿನ ನಾಗರೀಕರಿಂದ ತಮ್ಮ ದೇಶದಲ್ಲಿ ಆನಂದೋತ್ಸವ ಆಚರಿಸಲಾಯಿತು. ಅವರು ರಸ್ತೆಯಲ್ಲಿ ನೃತ್ಯ ಮಾಡುತ್ತಾ ಈ ಸೋಲಿನ ಆನಂದ ಆಚರಿಸಿದರು. ಕೆಲವು ಸ್ಥಳಗಳಲ್ಲಿ ಬೆಂಕಿಯ ಅನಾಹುತ ಮಾಡಲಾಯಿತು. ಕಳೆದ ಕೆಲವು ತಿಂಗಳಿಂದ ಇರಾನಿನಲ್ಲಿ ಹಿಜಾಬ ವಿರೋಧಿ ಆಂದೋಲನ ನಡೆಯುತ್ತಿದೆ. ಈ ಆಂದೋಲನದಲ್ಲಿ ಸಹಭಾಗಿಯಾಗಿರುವ ಜನರಿಂದ `ಈ ಸ್ಪರ್ಧೆಗಾಗಿ ಇರಾನ್ ಸಂಘ ಕಳಿಸಬಾರದು’, ಎಂದು ಒತ್ತಾಯಿಸಲಾಗಿತ್ತು. ಆದರೂ ಕೂಡ ಸರಕಾರವು ಸಂಘವನ್ನು ಕಳುಹಿಸಿತ್ತು.
WATCH: Protesters celebrate Iran’s defeat against US in FIFA World Cup https://t.co/rD3O4Qpn2b
— TOI Sports News (@TOISportsNews) November 30, 2022
ಈ ಸಂಘದಿಂದ ಮೊದಲ ಪಂದ್ಯದ ಸಮಯದಲ್ಲಿ ರಾಷ್ಟ್ರಗೀತೆ ಹಾಡದೆ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲ ಸೂಚಿಸಿತ್ತು; ಆದರೆ ನಂತರದ ಪಂದ್ಯಗಳಲ್ಲಿ ಈ ಸಂಘದಿಂದ ರಾಷ್ಟ್ರಗೀತೆ ಹಾಡಲಾಗಿರುವುದರಿಂದ ಇರಾನಿ ನಾಗರಿಕರು ಅಸಮಧಾನಗೊಂಡಿದ್ದರು. ಈಗ ಸಂಘದ ಸೋಲು ಆಗಿರುವುದರಿಂದ ಅವರು ಆನಂದ ವ್ಯಕ್ತಪಡಿಸಿದರು.
ಸಂಪಾದಕೀಯ ನಿಲುವುಇದರಿಂದ ಇರಾನಿನ ನಾಗರೀಕರಲ್ಲಿ ಹಿಜಾಬ್ ಗೆ ಎಷ್ಟು ವಿರೋಧವಿದೆ, ಇದರಿಂದ ಗಮನಕ್ಕೆ ಬರುತ್ತದೆ ! ಭಾರತದಲ್ಲಿನ ಹಿಜಾಬ್ ಪ್ರೇಮಿಗಳು ಇದರ ಬಗ್ಗೆ ಏನಾದರೂ ಮಾತನಾಡುವರೇ ? |