ಗುಜರಾತ್ ನಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆಯ ಮತದಾನದ ಪೂರ್ಣ
ಕರ್ಣಾವತಿ (ಗುಜರಾತ) – ಗುಜರಾತ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕಾಗಿ ಡಿಸೆಂಬರ್ ೧ ರಂದು ಮತದಾನ ನಡೆದಿದೆ. ಈ ಮತದಾನದ ಮೊದಲು ರಾಜ್ಯಾದ್ಯಂತ ಚುನಾವಣೆ ಆಯೋಗದ ಮಾಧ್ಯಮದಿಂದ ನಡೆಸಲಾದ ಕಾರ್ಯಾಚರಣೆಯಲ್ಲಿ ೨೯೦ ಕೋಟಿ ರೂಪಾಯಿ ನಗದು, ಮಾದಕ ವಸ್ತುಗಳು, ಸಾರಾಯಿ ಸಂಗ್ರಹ ಮತ್ತು ಉಡುಗೊರೆ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.
#Gujarat : Cash, Drugs, Liquor Worth Rs 290 Crore Seized, Recoveries Over 10 Times Made In 2017https://t.co/tHp13FRGPl
— ABP LIVE (@abplive) November 30, 2022
ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ೨೦೧೭ ರಲ್ಲಿನ ವಿಧಾನಸಭಾ ಚುನಾವಣೆಯ ತುಲನೆಯಲ್ಲಿ ಈ ಸಾರಿ ವಶಪಡಿಸ ಕೊಳ್ಳಲಾಗಿರುವ ಹಣದಲ್ಲಿ ಶೇಕಡಾ ೧೦ ರಷ್ಟು ಹೆಚ್ಚಳವಾಗಿದೆ. ಬೇರೆ ಬೇರೆ ಇಲಾಖೆಯ ಸಹಾಯದಿಂದ ಚುನಾವಣೆ ಆಯೋಗ ಈ ಕಾರ್ಯಾಚರಣೆ ಮಾಡಿದೆ. ಉಗ್ರ ನಿಗ್ರಹ ದಳದ ಸಹಾಯದಿಂದ ವಡೋದರಾ (ಗ್ರಾಮೀಣ) ಮತ್ತು ವಡೋದರಾ (ನಗರ) ಮತದಾರ ಕ್ಷೇತ್ರದಲ್ಲಿ ನಡೆಸಿರುವ ದಾಳಿಯಲ್ಲಿ ೪೭೮ ಕೋಟಿ ರೂಪಾಯಿ ೧೪೩ ಕೇಜಿ ಮೆಫೆಡ್ರೋನ್ ಈ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿದೆ. ಇದರ ಜೊತೆಗೆ ೬೧ ಕೋಟಿ ೯೬ ಲಕ್ಷ ರೂಪಾಯಿಯ ಬೇರೆ ಮಾದಕ ವಸ್ತುಗಳ ಜೊತೆಗೆ, ೧೪ ಕೋಟೆ ೮೮ ಲಕ್ಷ ರೂಪಾಯಿಯ ೪ ಲಕ್ಷ ಲೀಟರ್ ಸಾರಾಯಿ ಕೂಡಾ ವಶಪಡಿಸಿಕೊಳ್ಳಲಾಗಿದೆ.
ಸಂಪಾದಕೀಯ ನಿಲುವು
|