‘ದ ಕಶ್ಮೀರ ಫಾಯಿಲ್ಸ್‌’ನ ಮೇಲೆ ಟೀಕಿಸಿದ ಇಸ್ರೇಲಿನ ನಿರ್ದೇಶಕರಾದ ನದಾವ ಲಪಿಡರವರ ಕ್ಷಮಾಯಾಚನೆ

ಪಣಜಿ (ಗೋವಾ) – ಇಲ್ಲಿನ ೫೩ನೇ ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದ ಸಮಾರೋಪದ ಸಮಯದಲ್ಲಿ ‘ದ ಕಶ್ಮೀರ ಫಾಯಿಲ್ಸ್‌’ ಚಲನಚಿತ್ರವನ್ನು ‘ಅಶ್ಲಾಘ್ಯ’ ಎಂದು ಹೇಳಿದ ಇಸ್ರೇಲಿನ ನಿರ್ದೇಶಕರಾದ ನದಾವ ಲಪಿಡರವರ ಮೇಲೆ ದೇಶದಾದ್ಯಂತ ಟೀಕೆಗಳ ಸುರಿಮಳೆ ಆಗತೊಡಗಿದ ನಂತರ ಅವರು ಕೊನೆಯಲ್ಲಿ ‘ನನ್ನ ಉದ್ದೇಶವು ಯಾರದ್ದೇ ಭಾವನೆಗಳನ್ನು ನೋಯಿಸುವುದಾಗಿರಲಿಲ್ಲ’ ಎಂದು ಹೇಳುತ್ತ ಕ್ಷಮೆ ಯಾಚಿಸಿದರು. ಲಪಿಡರವರು ಮಾತನಾಡುತ್ತ, ನನಗೆ ಯಾರದ್ದೇ ಅಪಮಾನ ಮಾಡಲಿಕ್ಕಿರಲಿಲ್ಲ. ನನಗೆ ಸಂತ್ರಸ್ಥರ ಹಾಗೂ ಅವರ ಸಮೀಪದ ವ್ಯಕ್ತಿಗಳಿಗೆ ಅಪಮಾನ ಮಾಡುವ ಉದ್ದೇಶವಿರಲಿಲ್ಲ. ನಾನು ಅವರಲ್ಲಿ ಕ್ಷಮೆ ಯಾಚಿಸಲು ಇಚ್ಛಿಸುತ್ತೇನೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಎರಡು ದಿನ ದೇಶದಾದ್ಯಂತ, ಹಾಗೆಯೇ ಇಸ್ರೇಲಿನ ಭಾರತೀಯ ರಾಜದೂತರಿಂದಲೂ ವಿರೋಧವಾದ ನಂತರ ಕ್ಷಮಾಯಾಚನೆ ಮಾಡುವ ನದಾವರವರ ಮೇಲೆ ಕಾರ್ಯಾಚರಣೆಯಾಗುವುದು ಆವಶ್ಯಕವಾಗಿದೆ ! ಇಂತಹ ಹೇಳಿಕೆಗಳನ್ನು ನೀಡಿ ನಂತರ ಕ್ಷಮಾಯಾಚನೆ ಮಾಡಿ ಬಿಡುಗಡೆಯಾಗುತ್ತಿದ್ದರೆ ಇಂತಹ ರೂಡಿಗಳು ನಡೆಯುತ್ತಲೇ ಇರುವುವು. ಆದುದರಿಂದ ಇಂತಹವರಿಗೆ ಶಿಕ್ಷಯಾಗಲೇ ಬೇಕು !