ಮುಸಲ್ಮಾನ ಹುಡುಗಿಯು ತನ್ನ ೧೫ನೇ ವಯಸ್ಸಿನಲ್ಲಿ ಸ್ವೇಚ್ಛೆಯಿಂದ ವಿವಾಹ ಮಾಡಿಕೊಳ್ಳಬಹುದು ! – ಝಾರಖಂಡ ಉಚ್ಚ ನ್ಯಾಯಾಲಯ

ರಾಂಚಿ (ಝಾರಖಂಡ) – ಝಾರಖಂಡ ಉಚ್ಚ ನ್ಯಾಯಾಲಯವು ಒಂದು ಮಹತ್ವಪೂರ್ಣ ತೀರ್ಪಿನಲ್ಲಿ, ಮುಸಲ್ಮಾನ ಯುವತಿಗೆ ತನ್ನ ೧೫ನೇ ವಯಸ್ಸಿನಲ್ಲಿ ಸ್ವೇಚ್ಛೆಯಂತೆ ಯಾವುದೇ ಪುರುಷನೊಂದಿಗೆ ವಿವಾಹ ಮಾಡಿಕೊಳ್ಳುವ ಸ್ವಾತಂತ್ರ‍್ಯವಿದೆ. ಮುಸ್ಲೀಂ ಕಾನೂನಿನ ಅನುಸಾರ ಮುಸಲ್ಮಾನ ಹೆಣ್ಣು ಮಕ್ಕಳು ೧೫ನೇ ವಯಸ್ಸಿನಲ್ಲಿ ತಾರುಣ್ಯಕ್ಕೆ ಬರುತ್ತಾರೆ. ಆದುದರಿಂದ ಈ ಕಾನೂನಿನ ಅನುಸಾರ ಅವರು ೧೫ನೇ ವಯಸ್ಸಿನಲ್ಲಿ ವಿವಾಹ ಮಾಡಿಕೊಳ್ಳುವುದು ಕಾನೂನುಬದ್ಧವಾಗಿದೆ, ಎಂದು ಹೇಳಿದೆ.

೧. ಬಿಹಾರದಲ್ಲಿನ ನವಾದಾದಲ್ಲಿ ವಾಸಿಸುವ ೨೪ ವರ್ಷದ ಮಹಂಮದ ಸೋನು ಎಂಬುವವನು ಝಾರಖಂಡದಲ್ಲಿನ ಜಮಶೇದಪುರದಲ್ಲಿನ ೧೫ ವರ್ಷ ವಯಸ್ಸಿನ ಮುಸಲ್ಮಾನ ಯುವತಿಗೆ ಮದುವೆ ಆಮಿಷ ನೀಡಿ ಓಡಿಸಿಕೊಂಡು ಹೋಗಿದ್ದನು.

೨. ಅನಂತರ ಯುವತಿಯ ತಂದೆಯು ತಮ್ಮ ಮಗಳನ್ನು ಅಪಹರಿಸಲಾಗಿರುವ ಬಗ್ಗೆ ಪೊಲೀಸ ಠಾಣೆಯಲ್ಲಿ ದೂರನ್ನು ನೋಂದಾಯಿಸಿದ್ದರು.

೩. ಈ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯ ವಿರು‌ದ್ಧ ಅಪರಾಧವನ್ನು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಝಾರಖಂಡ ಉಚ್ಚ ನ್ಯಾಯಾಲಯದಲ್ಲಿ ಆಲಿಕೆ ನಡೆದಿತ್ತು.

೪. ಹುಡುಗಿಯ ನ್ಯಾಯವಾದಿಯು ನ್ಯಾಯಾಲಯಕ್ಕೆ, ಮಹಂಮದ ಸೋನು ಇವನು ಹುಡುಗಿಯೊಂದಿಗೆ ವಿವಾಹವಾಗಿದ್ದಾನೆ. ಈಗ ಇಬ್ಬರೂ ಕುಟುಂಬದ ಸದಸ್ಯರಾಗಿದ್ದಾರೆ. ಆದುದರಿಂದ ಈ ಪ್ರಕರಣದಲ್ಲಿನ ಕ್ರಿಮಿನಲ್ ಕಾರ್ಯಾಚರಣೆಯ ಪ್ರಕ್ರಿಯೆಯನ್ನು ತಡೆಯಬೇಕು ಎಂದು ಹೇಳಿದ್ದರು.

೫. ಹಾಗೆಯೇ ಹುಡುಗಿಯ ತಂದೆಯು ನ್ಯಾಯಾಲಯಕ್ಕೆ, ತಾನು ‘ತಪ್ಪು ತಿಳುವಳಿಕೆ’ಯಿಂದಾಗಿ ಮಹಂಮದ ಸೋನುವಿನ ವಿರುದ್ಧ ದೂರನ್ನು ದಾಖಲಿಸಿದ್ದೆನು, ಎಂದು ಹೇಳಿದರು.

೬. ಅನಂತರ ಉಚ್ಚ ನ್ಯಾಯಾಲಯವು ೧೫ ವರ್ಷ ವಯಸ್ಸಿನ ಹುಡುಗಿಯೊಂದಿಗೆ ವಿವಾಹವಾದ ಮಹಂಮದ ಸೋನುವಿನ ಮೇಲೆ ಇದ್ದ ಕ್ರಿಮಿನಲ್‌ ಕಾರ್ಯಾಚರಣೆಯನ್ನು ರದ್ದುಗೊಳಿಸಿತು.