ಮುಸಲ್ಮಾನರ ವಿವಾಹದಲ್ಲಿ ನೃತ್ಯ, ಸಂಗೀತ ಮತ್ತು ಪಟಾಕಿ ಸಿಡಿಸುವುದರ ಮೇಲೆ ನಿಷೇಧ !

ಜಾರ್ಖಂಡಿನಲ್ಲಿ ಮೌಲ್ವಿಯಿಂದ (ಇಸ್ಲಾಮಿ ಧಾರ್ಮಿಕ ನಾಯಕ) ಫತ್ವಾ

ಧನಬಾದ್ (ಜಾರ್ಖಂಡ) – ಜಾರ್ಖಂಡನ ಧನಬಾದ ಜಿಲ್ಲೆಯ ನಿರಸಾ ತಾಲೂಕಿನ ಸಿಬಿಲಿಬಾರಿ ಇಲ್ಲಿಯ ಜಾಮಸಿದಿಯ ಮುಖ್ಯಸ್ಥ ಮೌಲಾನಾ ಮಸೂದ ಅಖ್ತರ ಇವರು ಮುಸಲ್ಮಾನರ ವಿವಾಹದ ಸಂಬಂಧಿಸಿದಂತೆ ಫತ್ವ ಹೊರಡಿಸಿದ್ದಾರೆ. ಅವರು ಮುಸಲ್ಮಾನರ ವಿವಾಹದಲ್ಲಿ ನೃತ್ಯ ಮಾಡುವುದು, ಸಂಗೀತ ಹಾಡುವುದು ಮತ್ತು ಪಟಾಕಿ ಸಿಡಿಸುವುದು ಇಸ್ಲಾಂನ ವಿರುದ್ಧ ಇರುವುದರಿಂದ ಇವುಗಳು ನಡೆಯಬಾರದು. ಈ ನಿಯಮದ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಅಖ್ತರ ಇವರು ನವೆಂಬರ್ ೨೮, ೨೦೨೨ ರಂದು ಈ ಆದೇಶ ಜಾರಿ ಮಾಡಿದ್ದಾರೆ. ಅವರು, ನಮ್ಮೆಲ್ಲರ ಅಭಿಪ್ರಾಯದಿಂದ ಇದನ್ನು ನಿಶ್ಚಯಿಸಲಾಗಿದೆ ಏನೆಂದರೆ ಇಸ್ಲಾಂ ಧರ್ಮದ ಪ್ರಕಾರ ವಿವಾಹ ನಡೆಯುವುದು. ಅದರಲ್ಲಿ ನೃತ್ಯ, ಡಿಜೆ ಸಂಗೀತ ಮತ್ತು ಪಟಾಕಿ ಸಿಡಿಸದಿರುವುದು, ಅಷ್ಟೇ ಅಲ್ಲದೆ ಈ ಆದೇಶದ ಉಲ್ಲಂಘನೆ ಮಾಡುವವರಿಗೆ ೫ ಸಾವಿರ ೧೦೦ ರೂಪಾಯಿ ದಂಡ ವಿಧಿಸಲಾಗುವುದು. ಡಿಸೆಂಬರ್ ೨, ೨೦೨೨ ರಿಂದ ಈ ಆದೇಶ ಜಾರಿ ಆಗುವುದು ಎಂಬ ಮಾಹಿತಿ ಅವರು ನೀಡಿದರು.

ಸಂಪಾದಕೀಯ ನಿಲುವು

ಪ್ರಸ್ತುತ ಬಹಳಷ್ಟು ಕಡೆ ಹಿಂದೂಗಳಲ್ಲಿ ನಡೆಯುವ ವಿವಾಹ ಸಮಾರಂಭ, ಇದು ಧಾರ್ಮಿಕ ವಿಧಿ ಉಳಿಯದೆ ಮನರಂಜನೆಯ ಕಾರ್ಯಕ್ರಮ ಅನಿಸುತ್ತದೆ. ಆದ್ದರಿಂದ ವಧು ವರರಿಗೆ ಮತ್ತು ಅವರ ಕುಟುಂಬದವರಿಗೆ ಅದರ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭ ಆಗುವುದಿಲ್ಲ. ವಿವಾಹದ ಬಗ್ಗೆ ಹಿಂದೂಗಳಿಗೆ ಧಾರ್ಮಿಕ ದೃಷ್ಟಿಕೋನ ನೀಡುವುದಕ್ಕಾಗಿ ಹಿಂದೂಗಳ ಧರ್ಮಾಧಿಕಾರಿ ಮುಂದೆ ಬರುವರೆ ?