ಬಲವಂತದ ಮತಾಂತರದ ವಿರುದ್ಧ ರಾಜ್ಯಗಳು ಕಾಯ್ದೆ ರೂಪಿಸಬೇಕು!

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರಮಾಣ ಪತ್ರ !

ನವ ದೆಹಲಿ – ಬಲವಂತದ ಮತಾಂತರದ ವಿರುದ್ಧ ರಾಜ್ಯ ಸರಕಾರಗಳು ಕಾನೂನು ರೂಪಿಸಬೇಕು ಎಂದು ಕೇಂದ್ರ ಸರಕಾರವು ಸರ್ವೊಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದೆ. ಈ ವಿಚಾರದಲ್ಲಿ ಕೇಂದ್ರವು ತನ್ನ ಅಭಿಪ್ರಾಯವನ್ನು ಮಂಡಿಸುವಂತೆ ಕೋರ್ಟ್ ಹೇಳಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಉತ್ತರಾಖಂಡ, ಉತ್ತರಪ್ರದೇಶ, ಹರಿಯಾಣ, ಝಾರ್ಖಂಡ, ಛತ್ತೀಸಗಢ, ಒಡಿಶಾ, ಮಧ್ಯಪ್ರದೇಶ, ಗುಜರಾತ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರಕಾರವು ಈ ಸಮಯದಲ್ಲಿ ಮಾಹಿತಿ ನೀಡಿತು. ಹಿಂದಿನ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯವು `’ಬಲವಂತದ ಮತಾಂತರವು ಒಂದು ಗಂಭೀರ ವಿಚಾರವಾಗಿದೆ. ಇದು ದೇಶದ ಭದ್ರತೆಯ ಜೊತೆಗೆ ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿವೇಕದ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಕೇಂದ್ರ ಸರಕಾರವು ಈ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸುವುದು ಸೂಕ್ತ. ಈ ನಿಟ್ಟಿನಲ್ಲಿ ನೀವು ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಹೇಳಬೇಕು’ ಎಂದು ಕೇಂದ್ರ ಸರಕಾರಕ್ಕೆ ಹೇಳಿತ್ತು. ಭಾಜಪದ ನಾಯಕ ಮತ್ತು ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಅವರು ಮತಾಂತರ ತಡೆಯ ಕುರಿತು ಅರ್ಜಿ ಸಲ್ಲಿಸಿದ್ದಾರೆ.

೧. ಕೇಂದ್ರ ಸರಕಾರವು, ಬಲವಂತದ ಮತಾಂತರ ಗಂಭೀರ ವಿಷಯವಾಗಿದ್ದು, ಇದನ್ನು ತಡೆಯಲು ಕಠಿಣ ಕ್ರಮಗಳ ಅಗತ್ಯವಿದೆ ಎಂದು ಹೇಳಿತು. ಈ ಘಟನೆಗಳನ್ನು ತಡೆಯಲು ರಾಜ್ಯಗಳಲ್ಲಿಯೇ ಸೂಕ್ತ ಕಾನೂನುಗಳನ್ನು ರಚಿಸುವ ಅಗತ್ಯವಿದೆ. ಮಹಿಳೆಯರು, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಈ ನಿಟ್ಟಿನಲ್ಲಿಯೂ ಕಾನೂನುಗಳನ್ನು ರಚಿಸುವ ಅವಶ್ಯಕತೆಯಿದೆ ಎಂದು ಹೇಳಿತು.

೨. ಕೇಂದ್ರವು, ಆಮಿಷವನ್ನು ಒಡ್ಡಿ, ಮೋಸ ಮಾಡಿ ಮತ್ತು ವಂಚನೆ ಮಾಡಿ ಯಾರನ್ನೂ ಮತಾಂತರ ಮಾಡುವುದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಡಿಯಲ್ಲಿ ಬರುವುದಿಲ್ಲ ಎಂದು ಹೇಳಿದೆ.

ಮಂಗಳೂರಿನಲ್ಲಿ ಮತಾಂತರದ ಪ್ರಯತ್ನ ಬಹಿರಂಗ !

ಮಂಗಳೂರಿನಲ್ಲಿ ಮಹಿಳಾ ವೈದ್ಯೆಯೊಬ್ಬರು ಸೇರಿದಂತೆ ಇತರ ಇಬ್ಬರ ಮೇಲೆ, ಬಲವಂತವಾಗಿ ಮತಾಂತರಿಸಲು ಪ್ರಯಯತ್ನಿಸಿದ ಪ್ರಕರಣ ದಾಖಲಾಗಿದೆ. ಖಲೀಲ, ಡಾ. ಜಮೀಲಾ ಮತ್ತು ಐಮನ ಎಂದು ಹೆಸರುಗಳಾಗಿವೆ. ಸಂತ್ರಸ್ತೆ ಶಿವಾನಿಯ ತಾಯಿ ದೂರು ದಾಖಲಿಸಿದ್ದರು. ಶಿವಾನಿಗೆ ಒಳ್ಳೆಯ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಲೈಂಗಿಕ ಶೋಷಣೆಗೊಳಪಡಿಸಿ ವಮತಾಂತರ ಮಾಡುವಂತೆ ಒತ್ತಡ ಹೇರಲಾಗಿತ್ತು.

ಸಂಪಾದಕೀಯ ನಿಲುವು

  • ‘ಬಲವಂತದ ಮತಾಂತರದ ವಿರುದ್ಧ ರಾಜ್ಯಗಳ ಬದಲಾಗಿ, ಕೇಂದ್ರ ಮಟ್ಟದಲ್ಲಿಯೇ ದೇಶದಾದ್ಯಂತ ಅನ್ವಯವಾಗುವ ಕಾನೂನು ರೂಪಿಸುವುದು ಅವಶ್ಯಕವಾಗಿದೆ’, ಎಂದು ಹಿಂದೂಗಳಿಗೆ ಅನಿಸುತ್ತದೆ !
  • ಭಾಜಪ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮಾತ್ರ ಒಂದು ವೇಳೆ ಇಂತಹ ಕಾನೂನು ಜಾರಿಗೆ ಬರಬಹುದು; ಆದರೆ, ಎಲ್ಲಿ ಭಾಜಪ ಸರಕಾರವಿಲ್ಲವೋ ಅಲ್ಲಿ ಇತರ ರಾಜಕೀಯ ಪಕ್ಷಗಳು ಇಂತಹ ಕಾನೂನುಗಳನ್ನು ರೂಪಿಸುವುದು ಮತ್ತು ಅಲ್ಲಿ ಹಿಂದೂಗಳು ಮತಾಂತರ ಮುಂದುವರೆಯುತ್ತಲೇ ಇರುವುದು ಎಂಬ ವಾಸ್ತವವನ್ನು ಕೇಂದ್ರ ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು !