ಕೇರಳದ ಅಧಾನಿ ಬಂದರದ ಕಾಮಗಾರಿಗೆ ವಿರೋಧ

ಆಂದೋಲನಕಾರರಿಂದ ಪೊಲೀಸ ಠಾಣೆಯ ಮೇಲೆ ದಾಳಿ : ೩೬ ಪೊಲೀಸರಿಗೆ ಗಾಯ

ತಿರುವನಂತಪುರಂ (ಕೇರಳ) – ಕೇರಳದ ವಿಝಿಜಮ ಇಲ್ಲಿ ಅದಾನಿ ಬಂದರಿನ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಸ್ಥಳೀಯ ಜನರು ಕೆಲವು ತಿಂಗಳಿಂದ ವಿರೋಧಿಸುತ್ತಿದ್ದಾರೆ. ಅವರು ವಿವಿಧ ಮಾಧ್ಯಮದ ಮೂಲಕ ಆಂದೋಲನ ನಡೆಸುತ್ತಾ ಅದನ್ನು ವಿರೋಧಿಸುತ್ತಿದ್ದಾರೆ; ಆದರೆ ನವಂಬರ್ ೨೭ ರಂದು ನಡೆದ ಆಂದೋಲನ ಹಿಂಸಾಚಾರಕ್ಕೆ ತಿರುಗಿದೆ. ಈ ಸಮಯದಲ್ಲಿ ಆಂದೋಲನಕಾರರು ಇಲ್ಲಿಯ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ೩೬ ಪೊಲೀಸರು ಗಾಯಗೊಂಡಿದ್ದಾರೆ. ಇವರೆಲ್ಲರನ್ನು ಚಿಕಿತ್ಸೆಗಾಗಿ ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದೆ.

ಆಂದೋಲನಕಾರರಲ್ಲಿ ಸುಮಾರು ೫೦ ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಅದರಲ್ಲಿನ ೫ ಜನರಿಗೆ ವಶಕ್ಕೆ ಪಡೆಯಲಾಗಿದೆ. ಆಂದೋಲನಕಾರರು ಆಕ್ರೋಶಗೊಂಡು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಠಾಣೆಯಲ್ಲಿನ ಮಹತ್ವದ ಕಾಗದ ಪತ್ರಗಳು ನಷ್ಟವಾಗಿವೆ. ಹಾಗೂ ೪ ಜೀಪು ಮತ್ತು ೨೦ ದ್ವಿಚಕ್ರ ವಾಹನಗಳು ಹಾನಿಗೊಳಗೊಂಡಿವೆ. ಆಂದೋಲನಕಾರರು ಲಾಠಿಗಳು ಮತ್ತು ಕಲ್ಲುಗಳ ಮೂಲಕ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಈ ಪರಿಸರದಲ್ಲಿ ಬಿಗುವಿನ ವಾತಾವರಣವಿದ್ದು, ಈ ಪ್ರದೇಶದಲ್ಲಿ ೨೦೦ ಕ್ಕೂ ಹೆಚ್ಚು ಪೊಲೀಸರನ್ನು ನೇಮಕ ಮಾಡಲಾಗಿದೆ.

`ಲ್ಯಾಟಿನ್ ಕೆಥೋಲಿಕ್ ಡೈಯೋಜಿಸ್’ ಈ ಚರ್ಚ ಸಂಸ್ಥೆಯ ಮೂಲಕ ಆಂದೋಲನ ನಡೆಸಲಾಗುತ್ತಿದೆ !

ಆರ್ಚ್ ಬಿಷಪ್ ಥಾಮಸ್ ಜೆ ನೆಟ್ಟೋ ಹಾಗೂ ಇತರ ಪಾದ್ರಿಗಳ ವಿರುದ್ಧ ದೂರು ದಾಖಲು !

ಚರ್ಚ ಸಂಸ್ಥೆ ಮತ್ತು ಪಾದ್ರಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ ! ಯಾವಾಗಲೂ ಹಿಂದೂಗಳ ಸಂತರನ್ನು ಟೀಕಿಸುವ ಪ್ರಗತಿ(ಅಧೊಗತಿ)ಪರರು ಮತ್ತು ಸರ್ವಧರ್ಮ ಸಮಭಾವ ಇದರ ಬಗ್ಗೆ ಮಾತನಾಡುವವರು ಈ ಬಗ್ಗೆ ಮಾತನಾಡುವರೇ ? ಕ್ರೈಸ್ತರ `ಪಾದ್ರಿಗಳು ಎಂದರೆ ಶಾಂತಿಯ ಮೂರ್ತಿಗಳು’ ಎಂದು ಭಾರತದಲ್ಲಿ ಚಿತ್ರಿಸಿರುವ ಪ್ರತಿಮೆ ಸುಳ್ಳಾಗಿದೆ, ಈ ಮೊದಲು ಕೂಡ ಬೆಳಕಿಗೆ ಬಂದಿತ್ತು ಮತ್ತು ಈಗಲೂ ಬಂದಿದೆ. ಈ ವಿಷಯವಾಗಿ ಯಾರೂ ಏನು ಮಾತನಾಡುವುದಿಲ್ಲ !

ವಿಝಿಜಮನಲ್ಲಿ ಜನರು ಆದಾನಿ ಬಂದರಿನ ಕಾಮಗಾರಿ ನಿಲ್ಲಿಸಬೇಕು ಮತ್ತು ಕರಾವಳಿ ಸವೆತದ ಅಭ್ಯಾಸ ಮಾಡಲು ಒತ್ತಾಯಿಸುತ್ತಿದ್ದಾರೆ. ಇದರಲ್ಲಿ ಸ್ಥಳೀಯ ನಿವಾಸಿಗಳು, ಮೀನುಗಾರರು ಮತ್ತು `ಲ್ಯಾಟಿನ್ ಕೆಥೋಲಿಕ್ ಡೈಯೋಸೀಸ್’ ನ ಸದಸ್ಯರ ಸಮಾವೇಶವಿದೆ. ೧೨೦ ದಿನಗಳಿಂದ ನಡೆಯುತ್ತಿರುವ ಈ ಆಂದೋಲನದಲ್ಲಿ ಹಿಂಸಾಚಾರ ಕೂಡ ನಡೆದಿತ್ತು. ಇದಕ್ಕಾಗಿ ವಿಝಿಜಮ ಪೊಲೀಸರು ಲ್ಯಾಟಿನ್ ಆರ್ಚ್ ಬಿಷಪ್ ಥಾಮಸ್ ಜೆ ನೆಟ್ಟೋ ಮತ್ತು ಇತರ ಧರ್ಮ ಗುರುಗಳ ಸಹಿತ ೫೦ ಆಂದೋಲನಕಾರರ ವಿರುದ್ಧ ದೂರು ದಾಖಲಿಸಿದ್ದಾರೆ.