ಅಂಡಮಾನಿನ ‘ಸೆಲ್ಯುಲಾರ್’ ಜೈಲಿಗೆ ‘ಜಿ 20’ ದೇಶಗಳ ನಿಯೋಗದ ಭೇಟಿ !

ಅಂಡಮಾನ – ‘ಜಿ 2’ ದೇಶಗಳ ನಿಯೋಗವು ಭಾರತಕ್ಕೆ ಬಂದ ನಂತರ ನೇರವಾಗಿ ಅಂಡಮಾನನಲ್ಲಿರುವ ‘ಸೆಲ್ಯುಲಾರ್’ ಜೈಲಿಗೆ ಇತ್ತೀಚಿಗೆ ಭೇಟಿ ನೀಡಿತು. ಈ ಜೈಲಿನಲ್ಲಿಯೇ ಮಹಾನ ದೇಶಭಕ್ತ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ ಅವರನ್ನು ಬ್ರಿಟಿಷರು ಇರಿಸಿದ್ದರು. ಈ ನಿಯೋಗದಲ್ಲಿ ಭಾರತದಲ್ಲಿನ ಬ್ರಿಟಿಷ್ ಉಚ್ಚಾಯುಕ್ತ ಅಲೆಕ್ಸ್ ಅಲಿಸ್, ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್, ಜರ್ಮನಿಯ ರಾಯಭಾರಿ ಡಾ. ಪಿ. ಅಕರ್ಮನ್, ಭಾರತದಲ್ಲಿನ ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಓಫಾರೆಲ್ ಮತ್ತು ಇತರರು ಸೇರಿದ್ದರು. ಅಂಡಮಾನ ಮತ್ತು ನಿಕೋಬಾರ ದ್ವೀಪಸಮೂಹದಲ್ಲಿರುವ ಹ್ಯಾವಲಾಕ ದ್ವೀಪದಲ್ಲಿ ನವೆಂಬರ್ 26 ರಂದು ‘ಜಿ-20’ ಸಭೆಯನ್ನು ಆಯೋಜಿಸಲಾಗಿತ್ತು. ಅದರ ಹಿಂದಿನ ದಿನ ಅಂದರೆ ನವೆಂಬರ್ 25 ರಂದು ಮೇಲಿನ ಪ್ರತಿನಿಧಿಗಳು ‘ಸೆಲ್ಯುಲಾರ್’ ಜೈಲಿಗೆ ಭೇಟಿ ನೀಡಿದರು. ಭಾರತದಲ್ಲಿ ಬ್ರಿಟಿಷರು ಆಳ್ವಿಕೆಯಿದ್ದ ಕಾಲದಲ್ಲಿ, ಯಾರಿಂದ ಬ್ರಿಟಿಷರ ಆಳ್ವಿಕೆಗೆ ಅಪಾಯವಿತ್ತೋ ಅಂತಹವರನ್ನು ಈ ಜೈಲಿನಲ್ಲಿ ಇರಿಸಲಾಗುತ್ತಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಕುಲದೀಪ ರಾಯ ಶರ್ಮಾ ಇವರು, “ಈ ಸಮಾವೇಶದ ಒಂದು ಸಭೆಯನ್ನಾದರೂ ಅಂಡಮಾನಿನಲ್ಲಿ ನಡೆಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೆವು ಮತ್ತು ಇಂದು ಅದರಂತೆ ನಡೆಯುತ್ತಿರುವುದು ನಿಜಕ್ಕೂ ಖುಷಿ ತಂದಿದೆ” ಎಂದರು.

ಮುಂದಿನ ವರ್ಷ ಭಾರತದಿಂದ ‘ಜಿ-20’ ದೇಶಗಳ 200 ಸಭೆಗಳ ನೇತೃತ್ವ !

ಇಂಡೋನೇಷ್ಯಾದ ಬಾಲಿಯಲ್ಲಿ ಇತ್ತೀಚೆಗೆ ನಡೆದ ‘ಜಿ-20’ ಶೃಂಗಸಭೆಯಲ್ಲಿ, ಮುಂದಿನ ವರ್ಷಕ್ಕೆ ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತಕ್ಕೆ ವಹಿಸಲಾಯಿತು. ಆದ್ದರಿಂದ, ಮುಂಬರುವ ವರ್ಷದಲ್ಲಿ ಭಾರತವು ಈ ಪರಿಷತ್ತಿನ 200 ಸಭೆಗಳ ಅಧ್ಯಕ್ಷತೆ ವಹಿಸಲಿದೆ.

ಸಂಪಾದಕೀಯ ನಿಲುವು

ಸ್ವಾತಂತ್ರ್ಯವೀರ ಸಾವರಕರ ಅವರನ್ನು ಇರಿಸಿದ್ದ ಈ ನರಕಸದೃಶ ಸೆರೆಮನೆಗೆ ಒಂದು ಬಾರಿ ಕೂಡ ಭೇಟಿ ನೀಡದೆ ಅವರ ಮೇಲೆ ಕೆಸರು ಎರಚುವುದರಲ್ಲಿಯೇ ಧನ್ಯಾತಾಭಾವವನ್ನು ಕಂಡುಕೊಳುವ ಕಾಂಗ್ರೆಸ್ಸಿಗರು, ಕೋಮುವಾದಿಗಳು, ಪ್ರಗತಿಪರರು ಇವರೆಲ್ಲರೂ ವಿದೇಷಿಯರಿಂದ ಏನಾದರೂ ಕಲಿಯುವರೇ ?