ಸಾಮಾಜಿಕ ಮಾಧ್ಯಮದಿಂದ ಟೀಕೆಗಳಾದಾಗ ಪೊಲೀಸರ ಸ್ಪಷ್ಟೀಕರ
ಅಮರಾವತಿ (ಆಂಧ್ರಪ್ರದೇಶ) – ಸಾಮಾಜಿಕ ಮಾಧ್ಯಮದಿಂದ ಒಂದು ಪಾವತಿಯ ಛಾಯಾಚಿತ್ರ ಪ್ರಸಾರವಾಗುತ್ತಿದೆ. ಈ ಪಾವತಿ ವಿಶಾಖಪಟ್ಟಣಂನ ಸಾರಿಗೆ ಪೊಲೀಸರದ್ದಾಗಿದೆ. ಈ ಪಾವತಿಯ ಮೇಲೆ ಏಸು ಕ್ರಿಸ್ತನ ಚಿತ್ರ ಮತ್ತು ಬೈಬಲ್ ನ ವಾಕ್ಯವನ್ನು ಬರೆಯಲಾಗಿದೆ. ತೆಲುಗು ದೇಸಂ ಪಕ್ಷದ ಮುಖಂಡ ಅಮನ ವೆಂಕಟ ರಮಣ ರೆಡ್ಡಿಯವರು ಈ ಪಾವತಿಯನ್ನು ಟ್ವೀಟ ಮಾಡಿದ್ದಾರೆ. ಈ ಪಾವತಿಯಲ್ಲಿ ಒಬ್ಬ ವ್ಯಕ್ತಿಯಿಂದ 80 ರೂಪಾಯಿ ಶುಲ್ಕವನ್ನು ಪಡೆಯಲಾಗಿದೆಯೆಂದು ನಮೂದಿಸಲಾಗಿದೆ.
Amen pic.twitter.com/5kYWo1aHrv
— anam venkata ramana reddy (@anamramana) November 25, 2022
1. ಸಾಮಾಜಿಕ ಮಾಧ್ಯಮದಿಂದ ಇದರ ಮೇಲೆ ಟೀಕೆಗಳು ಆಗತೊಡಗಿದ ಬಳಿಕ ವಿಶಾಖಪಟ್ಟಣಂ ಸಾರಿಗೆ ಇಲಾಖೆ ಪೊಲೀಸರು, ಒಬ್ಬ ರಿಕ್ಷಾವಾಲಾನಿಂದ ಪೊಲೀಸ ಹವಾಲದಾರನಿಗೆ ಇಂತಹ ಪಾವತಿ ನೀಡಲಾಗಿತ್ತು. ದುರಾದೃಷ್ಟಕರದಿಂದ ತುರ್ತುಪರಿಸ್ಥಿತಿಯ ಕಾಲದಲ್ಲಿ ಅವನು ಇದನ್ನು ಉಪಯೋಗಿಸಿ ತಪ್ಪು ಮಾಡಿದ್ದಾನೆ. ಇದರ ಮಾಹಿತಿ ಸಿಕ್ಕ ಬಳಿಕ ಈ ಪಾವತಿಯನ್ನು ನಿರ್ಬಂಧಿಸಲಾಗಿದೆ. ಈ ಪಾವತಿಯನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
2. ಪೊಲೀಸರ ಈ ಸ್ಪಷ್ಟೀಕರಣದ ಬಳಿಕವೂ ಸಾಮಾಜಿಕ ಮಾಧ್ಯಮಗಳಿಂದ ಟೀಕೆಗಳು ಆಗುತ್ತಲೇ ಇವೆ. `ದಮಚೆರಲಾ ಹರಿ ಬಾಬು’ ಹೆಸರಿನ ಟ್ವಿಟರ ಖಾತೆದಾರನು ಇದರ ಬಗ್ಗೆ, ಇದು ಒಂದು ಒಳ್ಳೆಯ ಕಥೆಯಾಗಿದೆ. ಚಲನಚಿತ್ರ ನಿರ್ದೇಶಕ ರಾಜಮೌಳಿಯವರಿಗೆ ಇದನ್ನು ಕೊಡಬೇಕು. ಆಂಧ್ರಪ್ರದೇಶ ಪೊಲೀಸರಿಗೆ ನಾಚಿಕೆಯಾಗಬೇಕು. ಯಾರು ಇದನ್ನು ಮಾಡಿದ್ದಾರೆಯೋ, ಅವರು ರಾಜೀನಾಮೆ ನೀಡಿ ಚರ್ಚಗಳ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|