`ರಾ’ ದ ಮುಖ್ಯಸ್ಥರಿಂದ ರಾಷ್ಟ್ರಪತಿ ವಿಕ್ರಮಸಿಂಘೆ ಇವರ ಭೇಟಿ
ಕೊಲಂಬೋ (ಶ್ರೀಲಂಕಾ) – ಬೇಗೂರಿಕೆ ಮಾಡುವ ಚೀನಾದ ಹಡಗು `ಯುಗಾನ್ ವಾಂಗ್ ೫’ ಇದು ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾದ ತ್ರಿನಕೋಮಾಲಿ ಬಂದರಿನಲ್ಲಿ ಕೆಲವು ದಿನ ನಿಂತಿತ್ತು. ಈ ವಿಷಯವಾಗಿ ಭಾರತವು ಶ್ರೀಲಂಕಾದ ಬಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಡಗು ಶ್ರೀಲಂಕಾಗೆ ಬಂದಾಗಿನಿಂದ ಮತ್ತು ಇಲ್ಲಿಯವರೆಗೆ ಭಾರತದ ಗೂಡಾಚಾರ ಸಂಸ್ಥೆ `ರಾ’ ಇಲ್ಲಿಯ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ. ಇತ್ತಿಚೆಗೆ `ರಾ’ದ ಪ್ರಮುಖ ಸುಮಂತ ಕುಮಾರ ಗೋಯಲ ಇವರು ಶ್ರೀಲಂಕಾಗೆ ಭೇಟಿ ನೀಡಿದರು. ಅವರು ಶ್ರೀಲಂಕಾದ ರಾಷ್ಟ್ರಪತಿ ರಾನಿಲ ವಿಕ್ರಮಸಿಂಘೆ ಮತ್ತು ಶ್ರೀಲಂಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸಾಗಲಾ ರತ್ನಾಯಕೆ ಇವರನ್ನು ಭೇಟಿ ನಡೆಸಿ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿನ ವಿಷಯ ಬಹಿರಂಗವಾಗಿಲ್ಲ.
ಸೂತ್ರಗಳು ನೀಡಿರುವ ಮಾಹಿತಿಯ ಪ್ರಕಾರ ಚೀನಾವು ಹಡಗು ಶ್ರೀಲಂಕಾಗೆ ಬರುವ ಮೊದಲು ಭಾರತವು ಶ್ರೀಲಂಕಾದ ಬಳಿ ಕೆಲವು ದಾಖಲೆಗಳನ್ನು ಪ್ರಸ್ತುತಪಡಿಸಿದೆ. ಅದರಲ್ಲಿ ಚೀನಾದ ಹಡಗು ಭಾರತದ ಸಂರಕ್ಷಣಾ ವಿಷಯದ ಮಾಹಿತಿಯ ಬೆಹುಗಾರಿಕೆ ಮಾಡುವುದಕ್ಕಾಗಿ ಶ್ರೀಲಂಕಾಗೆ ಬರುತ್ತಿದೆ ಎಂದು ನಮೂದಿಸಿದ್ದಾರೆ. ಆದರೂ ಕೂಡ ಶ್ರೀಲಂಕಾ ಚೀನಾದ ಒತ್ತಡದಿಂದ ಹಡಗು ಆದರ ಬಂದರಿಗೆ ಬರಲು ಅನುಮತಿ ನೀಡಿತ್ತು.
ಸಂಪಾದಕೀಯ ನಿಲುವುಶ್ರೀಲಂಕಾಗೆ ಸಾಲ ನೀಡಿ ಚೀನಾ ಅದನ್ನು ತನ್ನ ಕಡೆಗೆ ತಿರುಗಿಸಿಕೊಂಡಿದೆ. ಆದ್ದರಿಂದ ಚೀನಾ ಹೇಳಿದಂತೆ ಶ್ರೀಲಂಕಾ ವರ್ತಿಸುವುದು. ಇದನ್ನು ತಿಳಿದುಕೊಂಡು ಭಾರತ ಶ್ರೀಲಂಕಾದ ಜೊತೆ ಚರ್ಚೆ ಮಾಡುವ ಬದಲು ಚೀನಾದ ವಿರುದ್ಧ ಆಕ್ರಮಣಕಾರಿ ನೀತಿ ಅವಲಂಬಿಸುವುದು ಅವಶ್ಯಕ ! |