ಇಸ್ರೋ ಆಕಾಶಕ್ಕೆ 9 ಉಪಗ್ರಹಗಳನ್ನು ಕಳುಹಿಸಿತು !

ಶ್ರೀಹರಿಕೋಟಾ(ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಲ್ಲಿಯ ಸತೀಶ ಧವನ ಉಪಗ್ರಹ ಉಡಾವಣೆ ಕೇಂದ್ರದಿಂದ ಮಧ್ಯಾಹ್ನ 12 ಗಂಟೆಯ ಸುಮಾರಿಗೆ `ಪಿ.ಎಸ್.ಎಲ್.ವಿ.(ಪೋಲರ ಸೆಟಲೈಟ್ ಲಾಂಚ ವ್ಹೆಹಿಕಲ್) – ಸಿ 54’ ಈ ಯೋಜನೆಯ ಅಡಿಯಲ್ಲಿ 9 ಉಪಗ್ರಹಗಳ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು. ಇದರಲ್ಲಿ `ಓಶನಸ್ಯಾಟ-3’ ಉಪಗ್ರಹದ ಸಮಾವೇಶವಿದೆ. ಈ ಉಪಗ್ರಹ ಮಹಾಸಾಗರದ ಪರಿಸರದ ಅಧ್ಯಯನ ನಡೆಸಲಿದೆ.