ಮೌಲಾನ ಸಾಜಿದ ರಸೀದಿ ಇವರಿಂದ ಉತ್ತರಾಖಂಡನ ಭಾಜಪ ಸರಕಾರಕ್ಕೆ ಬೆದರಿಕೆ !
(ಮೌಲಾನ ಎಂದರೆ ಇಸ್ಲಾಮಿನ ಅಭ್ಯಾಸಕ)
ಡೆಹ್ರಾಡೂನ (ಉತ್ತರಾಖಂಡ) – ಉತ್ತರಾಖಂಡದಲ್ಲಿನ ಭಾಜಪ ಸರಕಾರವು ರಾಜ್ಯದಲ್ಲಿನ ವಕ್ಫ್ ಬೋರ್ಡ್ ನ ಅಡಿಯಲ್ಲಿ ಬರುವ ಎಲ್ಲಾ ಮದರಸಾಗಳ ಸಮವಸ್ತ್ರ ಕಡ್ಡಾಯಗೊಳಿಸುವುದರಜೊತೆ ಎನ್.ಸಿ.ಇ.ಆರ್.ಟಿ.ಯ ಪುಸ್ತಕಗಳನ್ನು ಪಠ್ಯಕ್ರಮದಲ್ಲಿ ತೆಗೆದುಕೊಳ್ಳುವ ನಿರ್ಣಯ ಕೈಗೊಂಡನಂತರ ಅದಕ್ಕೆ ಮುಸಲ್ಮಾನರಿಂದ ವಿರೋಧ ಮಾಡಲಾಗುತ್ತಿದೆ. ಮೌಲಾನ ಸಾಜಿದ ರಶಿದಿ ಇವರು, ಸರಕಾರ ಖಾಸಗಿ ಮದರಸಾಗಳಿಗೆ ಕೈ ಹಾಕುವ ಪ್ರಯತ್ನ ಮಾಡಿದರೆ, ದೇಶದಲ್ಲಿ ಅಲ್ಲೋಲಕಲ್ಲೋಲವಾಗುವುದು, ಎಂದು ಬೆದರಿಕೆ ಹಾಕಿದರು.
‘India will be on fire’: Maulana Sajid Rashidi threatens after Uttarakhand govt decides to modernise madarsashttps://t.co/uZwV3rbNJ7
— OpIndia.com (@OpIndia_com) November 25, 2022
ಮೌಲಾನ ಸಾಜಿದ ರಶಿದಿ ಇವರು, ಪ್ರತಿಯೊಂದು ರಾಜ್ಯದಲ್ಲಿ ಒಂದು ಮದರಸಾ ಬೋರ್ಡ್ ಇದೆ ಮತ್ತು ಅದು ಸರಕಾರದ ನಿಯಮದ ಪ್ರಕಾರ ಕೆಲಸ ಮಾಡುತ್ತದೆ. ಸರಕಾರ ಅವರಿಗೆ ಸಮವಸ್ತ್ರದ ಆದೇಶ ನೀಡಬಹುದು. ಇಲ್ಲಿ ಸರಕಾರ ಏನು ಬೇಕಾದರೂ ಮಾಡಬಹುದು ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ; ಆದರೆ ಖಾಸಗಿ ಮದರಸಾಗಳಲ್ಲಿ ಸರಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ; ಕಾರಣ ಭಾರತೀಯ ಮುಸಲ್ಮಾನರು ಶೇಕಡ ೪ ರಷ್ಟು ಮುಸಲ್ಮಾನರನ್ನು ಖಾಸಗಿ ಮದರಸಾಗಳಲ್ಲಿ ಮೌಲ್ವಿ ಮತ್ತು ಮೌಲಾನ ಆಗಲೂ ಕಳಿಸುತ್ತಾರೆ. ಸರಕಾರ ಈ ಮದರಸಾಗಳಲ್ಲಿ ಕೂಡ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಿದರೆ, ಆಗ ಎಲ್ಲಾ ಭಾರತೀಯ ಮುಸಲ್ಮಾನರು ಅವರ ವಿರುದ್ಧ ತಿರುಗಿ ಬೀಳುವರು ಮತ್ತು ಹೀಗೆ ಮಾಡಲು ಬಿಡುವುದಿಲ್ಲ. ನಾವು ಸರಕಾರದಿಂದ ಏನನ್ನು ಪಡೆಯುವುದಿಲ್ಲ. ಮೂರ್ಖ ಜನರು ಹಣಕ್ಕಾಗಿ ಅವರ ಮದರಸಾಗಳನ್ನು ಸರಕಾರಕ್ಕೆ ನೀಡಿದ್ದಾರೆ ಮತ್ತು ಅದರ ನಷ್ಟ ಅವರು ಭರಿಸುತ್ತಿದ್ದಾರೆ. ಆದ್ದರಿಂದ ನಮ್ಮ ಹಿರಿಯ ಮೌಲ್ವಿ (ಇಸ್ಲಾಮಿನ ಧಾರ್ಮಿಕ ಮುಖಂಡ) ಮತ್ತು ಉಲೇಮಾ (ಇಸ್ಲಾಂನ ಧರ್ಮದ ವಿಷಯದ ಜ್ಞಾನಿ) ಮದರಸಾಗಳಿಗಾಗಿ ಸರಕಾರದಿಂದ ಹಣ ಪಡೆಯಬಾರದೆಂದು ಹೇಳುತ್ತಿರುತ್ತಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|