2002 ರಲ್ಲಿ ‘ಪಾಠ’ ಕಲಿಸಿದಾಗಿನಿಂದ ಗುಜರಾತದಲ್ಲಿ ಶಾಂತಿ ನೆಲೆಸಿದೆ ! – ಕೇಂದ್ರ ಗೃಹ ಸಚಿವ ಅಮಿತ ಶಾ

ಕೇಂದ್ರ ಗೃಹ ಸಚಿವ ಅಮಿತ ಶಾ

ಕರ್ಣಾವತಿ (ಗುಜರಾತ) – ಹಿಂದೆ ಸಮಾಜವಿರೋಧಿ ಶಕ್ತಿಗಳು ಹಿಂಸಾಚಾರದಲ್ಲಿ ತೊಡಗಿರುವುದು ಕಂಡುಬಂದ ನಂತರ ಕಾಂಗ್ರೆಸ ಅವರನ್ನು ಬೆಂಬಲಿಸುತ್ತಿತ್ತು; ಆದರೆ 2002 ರಲ್ಲಿ ‘ಪಾಠ’ ಕಲಿಸಿದ ನಂತರ ಅಪರಾಧಿಗಳು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿದರು. ಆ ನಂತರ ಭಾಜಪವು ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಮಹುಧಾ ಎಂಬಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು. 2002 ರಲ್ಲಿ, ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ರೈಲಿನಲ್ಲಿ ಕಾರ ಸೇವಕರನ್ನು ಜೀವಂತವಾಗಿ ಸುಟ್ಟುಹಾಕಲಾದ ನಂತರ ರಾಜ್ಯದಲ್ಲಿ ಗಲಭೆಗಳು ಭುಗಿಲೆದ್ದಿದ್ದವು.

ಅಮಿತ ಶಾ ತಮ್ಮ ಮಾತನ್ನು ಮುಂದುವರೆಸುತ್ತಾ, ಕಾಂಗ್ರೆಸ ಆಡಳಿತದಲ್ಲಿ ಗುಜರಾತದಲ್ಲಿ ಯಾವಾಗಲೂ ಗಲಭೆಗಳು ನಡೆಯುತ್ತಿದ್ದವು. ಕಾಂಗ್ರೆಸ್ ವಿವಿಧ ಧರ್ಮ ಮತ್ತು ಜಾತಿಗಳನ್ನು ಪರಸ್ಪರರ ವಿರುದ್ಧ ಕೆರಳಿಸುತ್ತಿತ್ತು. ಇಂತಹ ಮಾರ್ಗಗಳ ಮೂಲಕ ಕಾಂಗ್ರೆಸ ತನ್ನ ವೊಟಬ್ಯಾಂಕನ್ನು ಬಲಪಡಿಸಿಕೊಂಡು ಸಮಾಜದ ದೊಡ್ಡ ವರ್ಗಕ್ಕೆ ಅನ್ಯಾಯ ಮಾಡಿತ್ತು. ಕಾಂಗ್ರೆಸನ ನಿರಂತರ ಬೆಂಬಲ ದೊರೆಯುತ್ತಾ ಹೋದ ಕಾರಣ ಅಪರಾಧಿಗಳಿಗೆ ಅಭ್ಯಾಸವಾಗಿಬಿಟ್ಟಿತ್ತು. ಆದ್ದರಿಂದಲೇ 2002 ರಲ್ಲಿ ಗಲಭೆಗಳಾದವು; ಆದರೆ ಅವರಿಗೆ ಪಾಠ ಕಲಿಸಿದ ನಂತರ ಅವರು ಹಿಂಸೆಯ ಹಾದಿಯನ್ನು ತೊರೆದರು. ಇಲ್ಲಿಯವರೆಗೆ ಅವರು ಹಿಂಸೆಯಿಂದ ದೂರವಿದ್ದಾರೆ.