ಅಕ್ರಮ ಕಾಗದ ಪತ್ರಗಳ ಮೇಲೆ ಸಹಿ ಮಾಡುವುದಕ್ಕಾಗಿ ನನ್ನ ಮೇಲೆ ಒತ್ತಡ !
ನವದೆಹಲಿ – ಕೇರಳ ಸರಕಾರದ ಕಾರ್ಯಕಲಾಪದಲ್ಲಿ ನಾನು ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂದು ಆರೋಪ ಮಾಡಲಾಗುತ್ತಿದೆ; ಆದರೆ ನಾನು ಪಿನರಾಯಿ ವಿಜಯನ್ ಇವರಿಗೆ, ಅವರು ನನ್ನ ವಿರುದ್ಧ ಒಂದಾದರೂ ಸಾಕ್ಷಿ ತೋರಿಸಬೇಕು, ಯಾವುದರಲ್ಲಿ ನಾನು ಸಂವಿಧಾನದ ವಿರುದ್ಧವಾಗಿ ಒಬ್ಬ ರಾಜ್ಯಪಾಲನಾಗಿ ಸರಕಾರಿ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದೇನೆ ಹಾಗೆ ಸಾಕ್ಷಿ ನೀಡಿದರೆ ನಾನು ತಕ್ಷಣ ತ್ಯಾಗ ಪತ್ರ ನೀಡುವೆ, ಎಂದು ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಇವರು ಸರಕಾರಕ್ಕೆ ಸವಾಲು ಹಾಕಿದ್ದಾರೆ. ಅವರು ಒಂದು ಆಂಗ್ಲ ವೃತ್ತಪತ್ರಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರು ಕೇರಳ ಸರಕಾರದ ಮೇಲೆ ಗಂಭೀರ ಆರೋಪ ಮಾಡುತ್ತಾ, ಅಕ್ರಮ ಕಾಗದಪತ್ರಗಳ ಮೇಲೆ ಸಹಿ ಮಾಡುವುದಕ್ಕೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ರಾಜ್ಯಪಾಲ ಖಾನ್ ಇವರು ರಾಜ್ಯದಲ್ಲಿನ ವಿದ್ಯಾ ಪೀಠದಲ್ಲಿ ಕುಲಗುರುಗಳ ನೇಮಕಾತಿಯ ಬಗ್ಗೆ ಎಲ್ಲಾ ೧೧ ಕುಲಗುರುಗಳ ತ್ಯಾಗ ಪತ್ರಕ್ಕೆ ಒತ್ತಾಯಿಸಿದರು ಎಂದು ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.
#TNS2022: केरल वीसी विवाद की पूरी कहानी राज्यपाल आरिफ मोहम्मद खान की जुबानी सुनिए@RShivshankar के सवाल, @KeralaGovernor के जवाब LIVE#TimesNowSummit2022 LIVE👉https://t.co/7S15exY5cv@Herbalifeindia @GEIndia pic.twitter.com/PUx82rYQv1
— Times Now Navbharat (@TNNavbharat) November 25, 2022
ರಾಜ್ಯದಲ್ಲಿನ ಸರಕಾರಿ ಸ್ಥಾನಕ್ಕೆ ನೇಮಕಾತಿಯಲ್ಲಿ ಮನೆತನಕ್ಕೆ ಪ್ರೋತ್ಸಾಹ !
ಈ ಸಮಯದಲ್ಲಿ ಖಾನ್ ಇವರು, ಕೇರಳದಲ್ಲಿ ಸರಕಾರಿ ಸ್ಥಾನದ ನೇಮಕಾತಿ ಮಾಡುವಾಗ ಅಧಿಕಾರದಲ್ಲಿರುವ ಮಾರ್ಕ್ಸ್ ವಾದಿ ಪಕ್ಷದ ಜನರಿಗೆ ಅಥವಾ ಅವರ ಸಂಬಂಧಿಕರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುರಾಜ್ಯಪಾಲರು ಮಾಡಿರುವ ಆರೋಪ ಗಂಭೀರವಾಗಿರುವುದರಿಂದ ಕೇಂದ್ರ ಸರಕಾರ ಈ ವಿಷಯದ ಬಗ್ಗೆ ವಿಚಾರಣೆ ನಡೆಸುವುದು ಅವಶ್ಯಕ ! |