ಇಸ್ಲಾಮಿಕ ರೇಜಿಸ್ಟನ್ಸ್ ಕೌನ್ಸಿಲ್ ಈ ಭಯೋತ್ಪಾದಕ ಸಂಘಟನೆಯಿಂದ ಮಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಫೋಟದ ಹೊಣೆ ಹೊತ್ತಿಕೊಂಡಿದೆ !

ಭಯೋತ್ಪಾದಕ ಶಾರಿಕ ಇವನ ಬಂಧನದ ಸೇಡು ತೀರಿಸಿಕೊಳ್ಳುವ ಬೆದರಿಕೆ !

ಇಸ್ಲಾಮಿಕ ರೇಜಿಸ್ಟನ್ಸ್ ಕೌನ್ಸಿಲ್ ಮಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಫೋಟದ ಹೊಣೆ ಹೊತ್ತಿಕೊಂಡಿದೆ !

ಮಂಗಳೂರು – ಇಲ್ಲಿ ಕೆಲವು ದಿನಗಳ ಹಿಂದೆ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು `ಇಸ್ಲಾಮಿಕ್ ರಿಜಿಸ್ಟನ್ಸ್ ಕೌನ್ಸಿಲ್ (ಐ.ಆರ್.ಸಿ.) ಈ ಜಿಹಾದಿ ಭಯೋತ್ಪಾದಕ ಸಂಘಟನೆ ತೆಗೆದುಕೊಂಡಿದೆ. ಹೆಚ್ಚುವರಿ ಪೊಲೀಸ್ ಸಂಚಾಲಕ ಅಲೋಕ ಕುಮಾರ ಇವರು, ನಾವು ಅದರ ಸತ್ಯಾಂಶವನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.

೧. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಸಾರಗೊಳಿಸಿ ಈ ಭಯೋತ್ಪಾದಕ ಸಂಘಟನೆಯು, `ನಾವು ಇಸ್ಲಾಮಿಕ್ ರಿಜಿಸ್ಟರ್ ಕೌನ್ಸಿಲ್ ಸಂದೇಶ ನೀಡಲು ಬಯಸುತ್ತೇವೆ, ನಮ್ಮ ಸಹೋದರ ಮಹಮದ್ ಶಾರಿಕ್ ಇವನು ಮಂಗಳೂರಿನಲ್ಲಿ ಕೇಸರಿ ಭಯೋತ್ಪಾದನೆಯ ಕೋಟೆಯಲ್ಲಿ ಹಿಂದುತ್ವ ದೇವಸ್ಥಾನದ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದ್ದಾನೆ. ಪ್ರತ್ಯಕ್ಷದಲ್ಲಿ ಅವನಿಗೆ ಗುರಿ ಸಾಧಿಸುವಲ್ಲಿ ಯಶಸ್ವಿ ಆಗಲು ಸಾಧ್ಯವಾಗಲಿಲ್ಲ. ಆದರೂ ಕೂಡ ನಾವು ಅವನ ಪ್ರಯತ್ನ ಮತ್ತು ರಣತಂತ್ರದ ದೃಷ್ಟಿಯಿಂದ ಇದು ಒಂದು ಯಶಸ್ಸು ಎಂದು ಭಾವಿಸುತ್ತೇವೆ. ಕಾರಣ ನಮ್ಮ ಸಹೋದರ ಪರಾರಿಯಾಗಿರುವಾಗ ಕೇಂದ್ರೀಯ ಗುಪ್ತಚರ ಇಲಾಖೆ ಅವನನ್ನು ಹುಡುಕಲು ಸಾಧ್ಯವಾಗಲಿಲ್ಲ.’

೨. ಅದರ ಮುಂದೆ ಆಲೋಕ ಕುಮಾರ ಇವರನ್ನು ಉದ್ದೇಶಿಸಿ, ನಿಮಗೆ ನಮ್ಮ ಸಹೋದರನನ್ನು ಬಂಧಿಸಿರುವ ಆನಂದ ಸ್ವಲ್ಪ ದಿನವೇ ಸಿಗುವುದು. ಆದಷ್ಟು ಬೇಗನೆ ನಿಮಗೆ ಇದರ ಫಲ ಸಿಗುವುದು. ನಾವು ಅದಕ್ಕಾಗಿ ಸೇಡು ತೀರಿಸಿಕೊಳ್ಳುತ್ತಿದ್ದೇವೆ; ಕಾರಣ ನಮ್ಮ ಧರ್ಮದ ವಿರುದ್ಧ ಬಹಿರಂಗ ಯುದ್ಧ ಘೋಷಿಸಿದ್ದಿರಿ. ದಮನ ಮಾಡುವ ಕಾನೂನು ನಮ್ಮನ್ನು ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದಕ್ಕಾಗಿ ಅನುಮೋದಿಸಲಾಗುತ್ತಿದೆ.

ಶಾರಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಸ್ಪೋಟ ಮಾಡುವವನಿದ್ದ !

ಶಾರಿಕನು ನವೆಂಬರ್ ೧೯ ರಂದು ಸಂಘಕ್ಕೆ ಸಂಬಂಧಪಟ್ಟ ಕೇಶವ ಸ್ಮೃತಿ ಸಂವರ್ಧನ ಸಮಿತಿಯು ಆಯೋಜಿಸಿರುವ ರಾಜ್ಯಮಟ್ಟದ ಬಾಲ ಉತ್ಸವದ ಕಾರ್ಯಕ್ರಮದಲ್ಲಿ ಸ್ಫೋಟ ಮಾಡುವುದಿತ್ತು. ವಿದ್ಯಾರ್ಥಿ ಎಂದು ಹೇಳುತ್ತಾ ಕಾರ್ಯಕ್ರಮದಲ್ಲಿ ಪ್ರವೇಶ ಪಡೆಯುವ ನಿಯೋಜನೆ ಮಾಡಲಾಗಿತ್ತು; ಆದರೆ ನಂತರ ಅವನು ಯೋಜನೆ ಬದಲಾಯಿಸಬೇಕಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು ೧೦ ಸಾವಿರ ಮಕ್ಕಳು ಭಾಗವಹಿಸಿದ್ದರು. ಶಾರಿಕ ಇವನು ಹಿಂದೂ ಎಂದು ತಿಳಿಸಲು ಸುಳ್ಳು ಆಧಾರ ಕಾರ್ಡ ಮತ್ತು ಓರ್ವ ಹಿಂದೂನ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿದ್ದನು.

ಸಂಪಾದಕೀಯ ನಿಲುವು

`ದೇಶದಲ್ಲಿನ ಮುಸಲ್ಮಾನರು ಅಸರಕ್ಷಿತವಾಗಿರುವರು’, ಎಂದು ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಹೇಳುತ್ತಾರೆ; ಆದರೆ ಪ್ರತ್ಯಕ್ಷದಲ್ಲಿ ಅವರು ಜಿಹಾದಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಾರೆ, ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವರ ಹತ್ಯೆ ಮಾಡುತ್ತಾರೆ, ಹಿಂದೂಗಳ ಶಿರಚ್ಚೆದ ಮಾಡುತ್ತಾರೆ, ಇದರ ಬಗ್ಗೆ ಅವರು ಯಾವಾಗ ಮಾತನಾಡುವರು ?