ಮುಸಲ್ಮಾನ ಯುವಕನಿಂದ ಹಿಂದೂ ಯುವತಿಗೆ ಮತಾಂತರ ಮತ್ತು ವಿವಾಹ ಮಾಡಿಕೊಳ್ಳದೆ ಇದ್ದರೆ ಶ್ರದ್ಧಾಳ ಹಾಗೆ ೩೫ ತುಂಡುಗಳಾಗಿ ಕತ್ತರಿಸುವ ಬೆದರಿಕೆ

ಮೇರಠ (ಉತ್ತರಪ್ರದೇಶ) – ಇಲ್ಲಿಯ ಬ್ರಹ್ಮಪುರಿ ಪ್ರದೇಶದಲ್ಲಿರುವ ಹಿಂದೂ ಯುವತಿಯನ್ನು ಕಮರ ಎಂಬ ಮುಸಲ್ಮಾನ ಯುವಕನು ಸಂಚಾರವಾಣಿಯ ಮೂಲಕ ಸಂಪರ್ಕಿಸಿ ಕಮಲ ಎಂದು ಹಿಂದೂ ಹೆಸರು ಹೇಳಿ ಆಕೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.

ನಂತರ ಆಕೆಯನ್ನು ಭೇಟಿಗಾಗಿ ಕರೆದು ತಂಪು ಪಾನಿಯದಲ್ಲಿ ಮತ್ತು ಬರುವ ಔಷಧಿ ನೀಡಿದನು. ಯುವತಿ ಪ್ರಜ್ಞೆ ತಪ್ಪಿದ ನಂತರ ಆಕೆಯ ಮೇಲೆ ಬಲಾತ್ಕಾರ ಮಾಡಿ ಆ ಘಟನೆಯನ್ನು ಚಿತ್ರೀಕರಿಸಿದನು. ಅದರ ನಂತರ ಅವನು ಯುವತಿಗೆ ತಾನು ಮುಸಲ್ಮಾನ ಎಂದು ಹೇಳುತ್ತಾ ಯುವತಿಯನ್ನ ಮತಾಂತರಗೊಳ್ಳಲು ಮತ್ತು ಆತನ ಜೊತೆ ವಿವಾಹ ಮಾಡಿಕೊಳ್ಳುವುದಾಗಿ ಹೇಳಿದನು. ಒಂದು ವೇಳೆ ಹೀಗೆ ಮಾಡದಿದ್ದರೆ ಶ್ರದ್ಧ ವಾಲಕರನ ಹಾಗೆ ೩೫ ತುಂಡುಗಳಾಗಿ ಕತ್ತರಿಸುವೆ ಎಂದು ಬೆದರಿಕೆ ನೀಡಿದನು. ಈ ಪ್ರಕರಣದಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ ನಂತರ ಕಮರ ವಿರುದ್ಧ ದೂರು ದಾಖಲಿಸಲಾಯಿತು.