ರಾಹುಲ್ ಗಾಂಧಿ ಇವರನ್ನು ಜೈಲಿಗಟ್ಟಿ ! – ಅಖಿಲ ಭಾರತೀಯ ಹಿಂದೂ ಮಹಾಸಭಾ

ಸ್ವಾತಂತ್ರ್ಯವೀರ ಸಾವರ್ಕರ್ ಇವರ ಅಪಮಾನ ಮಾಡಿರುವ ಪ್ರಕರಣ

ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಅವರಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ

ನವದೆಹಲಿ – ಸ್ವಾತಂತ್ರ್ಯ ವೀರ ಸಾವರ್ಕರ್ ಇವರನ್ನು ಅಪಮಾನ ಮಾಡಿರುವ ಕಾಂಗ್ರೆಸ್ ನ ನಾಯಕ ರಾಹುಲ ಗಾಂಧಿ ಇವರನ್ನು ಅಖಿಲ ಭಾರತೀಯ ಹಿಂದೂ ಮಹಾಸಭೆಯು ಗುರಿ ಮಾಡಿದೆ. ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಅವರು ಪ್ರಧಾನಿ ನರೇಂದ್ರ ಮೋದಿ ಇವರಿಗೆ `ಸ್ವಾತಂತ್ರ್ಯ ಸೈನಿಕರ ಅಪಮಾನ ಮಾಡಿರುವ ರಾಹುಲ ಗಾಂಧಿಯವರಿಗೆ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಯಿಂದ ಅಮಾನತುಗೊಳಿಸಿ ಅವರನ್ನು ಜೈಲಿಗೆ ಹಾಕಬೇಕು’, ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಅ. ನವಂಬರ್ ೧೯ ರಂದು ಬರೆದಿರುವ ಪತ್ರದಲ್ಲಿ ಸ್ವಾಮೀ ಚಕ್ರಪಾಣಿ ಅವರು, ರಾಹುಲ್ ಗಾಂಧಿ ಮನೋರೋಗಿ ಆಗಿದ್ದು ಅವರನ್ನು ಆಗ್ರಾದಲ್ಲಿ ಚಿಕಿತ್ಸೆಗಾಗಿ ಇರಿಸಬೇಕು. ಒಂದುವೇಳೆ ಅವರು ಬ್ರಿಟಿಷರ ಸನ್ನೆಯಂತೆ ಭಾರತದ ಮಹಾನ ಸ್ವಾತಂತ್ರ್ಯ ಸೈನಿಕರ ಅಪಮಾನ ಮಾಡುತ್ತಿದ್ದರೆ, ಇದು ಒಂದು ದೊಡ್ಡ ಅಪರಾಧವಾಗಿದೆ, ಎಂದು ಹೇಳಿದರು.

ಆ. ಪತ್ರದಲ್ಲಿ ಅವರು ಮಾತು ಮುಂದುವರಿಸಿ, ಮುಂದಿನ ವರ್ಷ ಎಂದರೆ ಫೆಬ್ರವರಿ ೨೬, ೨೦೨೩ ರಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ೫೭ ನೇ ಪುಣ್ಯತಿಥಿಯ ಪ್ರಯುಕ್ತ ಹಿಂದೂ ಮಹಾಸಭೆ ದೆಹಲಿಯಲ್ಲಿನ ೨೪, ಅಕ್ಬರ್ ರೋಡಲ್ಲಿರುವ ಕಾಂಗ್ರೆಸ್ಸಿನ ಪ್ರಧಾನ ಕಚೇರಿಯ ಎದುರು ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಪ್ರತಿಮೆ ಸ್ಥಾಪನೆ ಮಾಡುವರು ಹಾಗೂ ಪ್ರಧಾನಿ ಮೋದಿ ಇವರು `ಅಕಬರ್ ರೋಡ್’ಅನ್ನು `ವೀರ ಸಾವರ್ಕರ್ ರೋಡ’ ಎಂದು ಬದಲಾಯಿಸುವಂತೆ ಒತ್ತಾಯಿಸಿದ್ದು ಅವರಿಗೆ `ಭಾರತ ರತ್ನ’ದಿಂದ ಗೌರವಿಸಬೇಕೆಂದು ಕೂಡ ಒತ್ತಾಯಿಸಿದ್ದಾರೆ.