ಶಿವಮೊಗ್ಗದಲ್ಲಿ ರಾಷ್ಟ್ರಧ್ವಜವನ್ನು ಸುಟ್ಟಿದವರ ವಿರುದ್ಧ ದೂರು ದಾಖಲು !

ಬೆಂಗಳೂರು – ಸೆಪ್ಟೆಂಬರ್ 19 ರಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಮೂವರು ಮುಸ್ಲಿಂ ಮತಾಂಧರು ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (‘ಎನ್‌.ಐ.ಎ.’) ಇತ್ತೀಚೆಗೆ ದೂರು ದಾಖಲಿಸಿದೆ. ರಾಷ್ಟ್ರಧ್ವಜ ಸುಟ್ಟ ಮುನೀರ್ ಹಾಗೂ ಯಾಸಿನ್ ಇವರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಮುಖ ಆರೋಪಿಯ ಹುಡುಕಾಟ ನಡೆಯುತ್ತಿದೆ. ಈ ಮೂವರೂ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ಗೆ ಸಂಬಂಧಿಸಿರುವುದು ಕೂಡ ಬೆಳಕಿಗೆ ಬಂದಿದೆ. ‘ಎನ್‌.ಐ.ಎ.’ ಪ್ರಕಾರ, ಮೂವರೂ ಶಿವಮೊಗ್ಗದಲ್ಲಿ ತಂಗಿದ್ದು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದರು. ಈ ಪ್ರಕರಣದ ಎಳೆಗಳಿಗೂ ಮಂಗಳೂರು ಸ್ಫೋಟಕ್ಕೂ ನಂಟು ಇರಬಹುದು ಎಂದು ಹೇಳಲಾಗುತ್ತಿದೆ. ಮುನೀರ್ ಮತ್ತು ಯಾಸಿನ್ ಅವರನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗುತ್ತಿದೆ.