ಮಂಗಳೂರು ಬಾಂಬ್ ಸ್ಫೋಟದಲ್ಲಿನ ಜಿಹಾದಿ ಉಗ್ರನು ಈ ಮೊದಲು ಹಿಂದೂಗಳ ಮೇಲೆ ದಾಳಿ ಮಾಡಿದ್ದನು !

ಮಂಗಳೂರು – ಇಲ್ಲಿಯ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಂಧಿಸಲಾಗಿರುವ ಜಿಹಾದಿ ಉಗ್ರ ಶಾರಿಕ್ ಈ ಮೊದಲು ಕೂಡ ಜಿಹಾದಿ ಚಟುವಟಿಕೆಗಳಲ್ಲಿ ಸಹಭಾಗಿ ಆಗಿದ್ದನು, ಎಂಬ ಮಾಹಿತಿ ಬಹಿರಂಗವಾಗಿದೆ. ಆಗಸ್ಟ್ ೧೫, ೨೦೨೦ ರಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಛಾಯಾಚಿತ್ರ ಇರುವ ಫ್ಲೆಕ್ಸ್ ಫಲಕ ಹಾಕುವುದರ ಬಗ್ಗೆ ನಡೆದಿರುವ ವಿವಾದದ ಸಮಯದಲ್ಲಿ ಅವನು ಇಬ್ಬರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಶಾರಿಕ್‌ನು ಸಹಭಾಗಿಯಾಗಿದ್ದನು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು ಹಾಗೂ ಶಾರಿಕ್ ಫರಾರಿ ಆಗಿದ್ದನು. ೨೬/೧೧ ರ ಮುಂಬಯಿನಲ್ಲಿನ ಜಿಹಾದಿ ಉಗ್ರರ ದಾಳಿಗೆ ೯ ವರ್ಷ ಪೂರ್ಣವಾದ ಒಂದು ದಿನದ ನಂತರ ನವಂಬರ್ ೨೭, ೨೦೨೦ ರಂದು ಮಂಗಳೂರಿನ ಒಂದು ಗೋಡೆಯ ಮೇಲೆ ನಮಗೆ ‘ಎಲ್‌ಇಟಿಗೆ (ಲಷ್ಕರ್ ಎ ತೊಯ್ಬ ) ಕರೆಸಿಕೊಳ್ಳಲು ಅನಿವಾರ್ಯಗೊಳಿಸಬೇಡಿ’ ಎಂದು ಶಾರಿಕ್ ಇವನು ಬರೆದಿದ್ದನು. ಈ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು.

ಹಿಂದೂ ವ್ಯಕ್ತಿಯ ಹೆಸರಿನ ನಕಲಿ ಆಧಾರಕಾರ್ಡ ತಯಾರಿಸಿಕೊಂಡು ಬಾಡಿಗೆ ಮನೆ ಪಡೆದಿದ್ದನು !

ಕರ್ನಾಟಕದ ಆರೋಗ್ಯ ಸಚಿವರು ಸುಧಾಕರ್ ಇವರು, ‘ಶಾರಿಕ್ ರಿಕ್ಷಾದಲ್ಲಿ ಕುಳಿತ ನಂತರ ಚಾಲಕನಿಗೆ ಅವನು ಹಿಂದೂ ಎಂದು ಹೇಳಿದ್ದನು. ಅವನ ಹತ್ತಿರ ಇರುವ ಅವನ ಆಧಾರ ಕಾರ್ಡ ಕೂಡ ತೋರಿಸಿದ್ದನ್ನು. ಈ ಆಧಾರ್ ಕಾರ್ಡ್ ಒಂದು ರೈಲ್ವೆ ಸಿಬ್ಬಂದಿಯದಾಗಿತ್ತು. ಅದು ಕಳೆದು ಹೋಗಿತ್ತು ಅವರ ಹೆಸರಿನ ಸುಳ್ಳು ಆಧಾರ ಕಾರ್ಡ್ ಇವನು ತಯಾರಿಸಿಕೊಂಡಿದ್ದನು.’ ಈ ಆಧಾರ ಕಾರ್ಡ್ ದ ಆಧಾರದಲ್ಲಿ ಅವನು ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಮನೆ ಬಾಡಿಗೆಗೆ ಪಡೆದಿದ್ದನು ಎಂದು ಹೇಳಿದರು.