‘ಹಿಂದೂಗಳ ಪ್ರದೇಶದಲ್ಲಿ ಅಲ್ಲ, ಮುಸಲ್ಮಾನ ಪ್ರದೇಶದಲ್ಲಿಯೇ ಆಸ್ಪತ್ರೆಯನ್ನು ಸ್ಥಾಪಿಸುವೆನು !’ (ಅಂತೆ)

ಗುಜರಾತ್‌ನ ಕಾಂಗ್ರೆಸ ಶಾಸಕ ಇಂದ್ರಜಿತ ಪರಮಾರ ಅವರ ಹೇಳಿಕೆಯ ವಿಡಿಯೋ ಪ್ರಸಾರ

  • ಈ ವಿಡಿಯೋ ೨೦೧೭ ರದ್ದು ಎಂದು ಪರಮಾರ ಅವರ ಹೇಳಿಕೆ

  • ಧಾರ್ಮಿಕ ತಾರತಮ್ಯದ ಆರೋಪವನ್ನು ತಳ್ಳಿ ಹಾಕಿದರು !

ಕರ್ಣಾವತಿ (ಗುಜರಾತ) – ಕೆಲವು ಮುಸಲ್ಮಾನ ಮತ್ತು ಮಹಿಳೆಯರು, ನಾನು ನಿಮ್ಮೊಂದಿಗೆ ಇಲ್ಲ ಎಂಬ ವದಂತಿಯನ್ನು ಹಬ್ಬಿಸಿದ್ದಾರೆ; ಆದರೆ ನನಗೆ ನೀವು ನನ್ನ ತಂದೆ ತಾಯಿಯಂತೆ ಮತ್ತು ಅಲ್ಲಾನಂತಿದ್ದೀರಿ. ಇಲ್ಲಿ ತೆರೆಯಲಿರುವ ಸರಕಾರಿ ಆಸ್ಪತ್ರೆಯನ್ನು ಆ ಪ್ರದೇಶದಲ್ಲಿ (ಹಿಂದೂ ಬಹುಸಂಖ್ಯಾತ ಪ್ರದೇಶ) ತೆರೆಯಲಾದರೆ ಅದರಿಂದ ಪ್ರಯೋಜನವಾಗದು; ಏಕೆಂದರೆ ಅವರು (ಹಿಂದೂಗಳು) ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಕೇವಲ ಮುಸಲ್ಮಾನರೇ ಸರಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ. (ಮುಸಲ್ಮಾನರಿಗೆ ಸರಕಾರದ ಯೋಜನೆಗಳ ಹೆಚ್ಚು ಲಾಭವಾಗುತ್ತದೆ ಮತ್ತೆ ಅವರೇ ಅದರ ಲಾಭ ಪಡೆದುಕೊಳ್ಳುತ್ತಾರೆ ಎಂದು ಸತ್ಯವನ್ನೇ ಪರಮಾರ ಅವರು ಹೇಳುತ್ತಿದ್ದಾರೆಂಬುದನ್ನು ಹಿಂದೂಗಳು ಅರಿತುಕೊಳ್ಳುವರೇ ? – ಸಂಪಾದಕರು) ಮುಸಲ್ಮಾನರು ನನಗೆ ಮತಗಳನ್ನು ನೀಡಿದ್ದಾರೆ. ನಿಮ್ಮಿಂದಾಗಿಯೇ ನಾನು ಶಾಸಕನಾಗಿದ್ದೇನೆ. ನಾನು ನಿಮಗೆ, ಅಲ್ಲಿ (ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ) ಚಿಕಿತ್ಸಾಲಯವನ್ನು ನಿರ್ಮಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ ಶಾಸಕ ಇಂದ್ರಜಿತ ಪರಮಾರ ಭರವಸೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುತ್ತಿದೆ.

ಕಾಂಗ್ರೆಸ ಪ್ರಧಾನ ಕಾರ್ಯದರ್ಶಿ ಪ್ರದೀಪಸಿಂಗ ವಾಘೇಲಾ ಇವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪ್ರಸ್ತುತ ಪರಮಾರ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ ಅಭ್ಯರ್ಥಿಯಾಗಿದ್ದಾರೆ. ಈ ವಿಡಿಯೋವನ್ನು ಕುರಿತು ಸ್ಪಷ್ಟೀಕರಣ ನೀಡುತ್ತಾ ಅವರು, ಈ ವಿಡಿಯೋ ೨೦೧೭ ರದ್ದಾಗಿದೆ. ನನ್ನ ಮೇಲಿನ ಧಾರ್ಮಿಕ ತಾರತಮ್ಯದ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ವೀಡಿಯೋ ಯಾವ ಕಾಲದ್ದಾಗಿದ್ದರೂ ಪರಮಾರ ಅವರು ಮತ ಪಡೆಯುವುದಕ್ಕಾಗಿ ಮುಸಲ್ಮಾನರನ್ನು ಓಲೈಸುತ್ತಾ ಹಿಂದೂಗಳನ್ನು ದ್ವೇಷಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !

ಮುಸಲ್ಮಾನರು ಮತ ನೀಡಿದ ನಂತರ ಅವರಿಗಾಗಿ ಕೆಲಸ ಮಾಡುವ ಕಾಂಗ್ರೆಸ್‌ನ ಹಿಂದೂ ಶಾಸಕರು ಎಲ್ಲಿ ಮತ್ತು ಹಿಂದೂಗಳು ‘ಹಿಂದೂ’ ಎಂದು ಮತ ನೀಡಿದರೂ ಅವರಿಗಾಗಿ ಕೆಲಸ ಮಾಡದಿರುವ ಹಿಂದೂ ಶಾಸಕರು ಎಲ್ಲಿ !