‘ಭಾರತವನ್ನು ಕೇವಲ ಮುಸಲ್ಮಾನರು ಹಾಗೂ ಕಾಂಗ್ರೆಸ್‌ನವರು ಮಾತ್ರ ಉಳಿಸಬಹುದು !’ (ಅಂತೆ)

  • ಗುಜರಾತನ ಕಾಂಗ್ರೆಸ್ ಅಭ್ಯರ್ಥಿ ಚಂದನ ಠಾಕೋರರವರ ಹೇಳಿಕೆಯ ವಿಡಿಯೊ

  • ವಿರೋಧಿಗಳು ಮೂರು ವರ್ಷಗಳ ಹಿಂದಿನ ಹೇಳಿಕೆ ಇರುವ ವಿಡಿಯೋದಲ್ಲಿ ಉದ್ದೇಶಪೂರ್ವಕವಾಗಿ ಬದಲಾವಣೆಗಳನ್ನು ಮಾಡಿ ಅದನ್ನು ಪ್ರಸಾರ ಮಾಡಿದ್ದಾರೆ ಎಂದು ಕಾಂಗ್ರೆಸ್‌ನ ಹೇಳಿಕೆ

 

ಗುಜರಾತನ ಕಾಂಗ್ರೆಸ್ ಅಭ್ಯರ್ಥಿ ಚಂದನ ಠಾಕೋರ

ಕರ್ಣಾವತಿ (ಗುಜರಾತ) – ನಾವು ಏನಾದರೂ ಹೊಸತನ್ನು ಮಾಡಲು ಅವರಿಗೆ (ಭಾಜಪಕ್ಕೆ) ಮತ ನೀಡಿದ್ದೆವು; ಆದರೆ ಅವರು ರಾಜ್ಯದ ಜನತೆಗೆ ಮೋಸ ಮಾಡಿದರು. ಒಬ್ಬರಿಗೆ ಮೋಸ ಮಾಡಿದ್ದರೆ ಆಗಬಹುದು ಆದರೆ ಅವರು ಸಂಪೂರ್ಣ ದೇಶವನ್ನೇ ಕಂದಕಕ್ಕೆ ತಳ್ಳಿದ್ದಾರೆ. ಈಗ ದೇಶವನ್ನು ಉಳಿಸುವುದಾದರೆ ಅದು ಕೇವಲ ಮುಸಲ್ಮಾನರು ಹಾಗೂ ಕಾಂಗ್ರೆಸ್ಸಿನಿಂದಲೇ ಸಾಧ್ಯ, ಎಂದು ಸಿದ್ಧಪುರ ವಿಧಾನಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಚಂದನ ಠಾಕೋರರವರು ಹೇಳಿಕೆ ನೀಡಿದ್ದಾರೆ. ಇದರ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಇದರಿಂದ ಭಾಜಪದಿಂದ ಠಾಕೋರರವರ ಮೇಲೆ ಟೀಕೆಯಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ.

೧. ಚಂದನ ಠಾಕೋರರವರು ಈ ವಿಡಿಯೋದಲ್ಲಿ, ಈ ದೇಶದಲ್ಲಿ ಮುಸಲ್ಮಾನರ ಬಗ್ಗೆ ಮಾತನಾಡುವ ಅನೇಕ ಪಕ್ಷಗಳಿವೆ; ಆದರೆ ಮುಸಲ್ಮಾನರ ಪರವಾಗಿ ಕಾಂಗ್ರೆಸ್ ಅಲ್ಲದೇ ಬೇರೆ ಯಾರೂ ಬಂದಿಲ್ಲ. ಇದರಿಂದಲೇ ಕಾಂಗ್ರೆಸ್ ಮುಸಲ್ಮಾನರ ರಕ್ಷಣೆ ಮಾಡಬಹುದು ಎಂಬುದನ್ನು ಗಮನದಲ್ಲಿಡಬಹುದು. ಭಾಜಪವು ಮುಸಲ್ಮಾನರಿಗೆ ಎಲ್ಲಾ ರೀತಿಯ ತೊಂದರೆಗಳನ್ನು ನೀಡಲು ಪ್ರಯತ್ನಿಸಿದರು. ತ್ರಿವಳಿ ತಲಾಕ, ‘ಹಜ’ನ ಅನುದಾನ ಮತ್ತು ಮುಸಲ್ಮಾನ ವಿದ್ಯಾರ್ಥಿಗಳ ಶಿಷ್ಯವೃತ್ತಿಯ ಮೇಲೆ ಭಾಜಪವು ನಿರ್ಬಂಧ ಹೇರಿದೆ. (ಕಾಂಗ್ರೆಸ್ ಹಿಂದೂಗಳ ಪಕ್ಷದಲ್ಲಿಲ್ಲ, ಎಂಬುದನ್ನು ಠಾಕೊರವರು ಸ್ಪಷ್ಟಪಡಿಸುತ್ತಿದ್ದಾರೆ, ಎಂಬುದನ್ನು ಹಿಂದೂಗಳು ಗಮನದಲ್ಲಿಟ್ಟುಕೊಳ್ಳಬೇಕು ! ಕಾಂಗ್ರೆಸ್ ಅಂದರೆ ಇನ್ನೊಂದು ಮುಸ್ಲೀಂ ಲೀಗ್ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)

೨. ಕಾಂಗ್ರೆಸ್ ಇದಕ್ಕೆ ಸ್ಪಷ್ಟೀಕರಣ ನೀಡುತ್ತ, ಈ ವಿಡಿಯೋ ೩ ವರ್ಷ ಹಳೆಯದಾಗಿದೆ. ಸಿದ್ಧಪುರದ ಒಂದು ಸಭೆಯಲ್ಲಿ ಠಾಕೋರರವರು ದೇಶದ ಪ್ರಗತಿಗಾಗಿ ಹಿಂದೂ ಮತ್ತು ಮುಸಲ್ಮಾನರ ಐಕ್ಯತೆಗಾಗಿ ಮಾತನಾಡುತ್ತಿದ್ದರು. ವಿಡಿಯೋದಿಂದ ಈ ಭಾಗವನ್ನು ತೆಗೆದು ಹಾಕಿ ಅದನ್ನು ಪ್ರಸಾರ ಮಾಡಲಾಗಿದೆ, ಎಂದು ಹೇಳಿದೆ.

೩. ಈ ವಿಡಿಯೋದ ಮೇಲೆ ಭಾಜಪ ಸರಕಾರವು ಮುಖ್ಯಮಂತ್ರಿ ಭೂಪೇಂದ್ರ ಪಟೇಲರವರು ಟ್ವೀಟ್ ಮಾಡಿ, ಚುನಾವಣೆಯಲ್ಲಿ ಸೋತಿದ್ದರಿಂದ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಯ ತುಚ್ಛ ರಾಜಕಾರಣ ಮಾಡುತ್ತಿದೆ; ಆದರೆ ಕಾಂಗ್ರೆಸ್ ಈಗ ತನ್ನನ್ನು ಸೋಲುವುದರಿಂದ ಯಾರೂ ಉಳಿಸಲಾರರು ಎಂಬುದನ್ನು ಗಮನದಲ್ಲಿಡಬೇಕು, ಎಂದು ಹೇಳಿದರು.

  • ‘ಭಾರತದ ಸಂಪನ್ಮೂಲಗಳ ಮೇಲಿನ ಮೊದಲ ಅಧಿಕಾರ ಮುಸಲ್ಮಾನರದ್ದು’, ಎಂಬ ಹೇಳಿಕೆಯನ್ನು ಕಾಂಗ್ರೆಸ್‌ನ ಆಗಿನ ಪ್ರಧಾನಮಂತ್ರಿ ಮನಮೋಹನ ಸಿಂಗರವರು ನೀಡಿದ್ದರು. ಇದೇ ಅದರ ಎರಡನೇ ಭಾಗವಾಗಿದೆ !
  • ಕಾಂಗ್ರೆಸ್‌ನಲ್ಲಿ ಮೋಹನದಾಸ ಗಾಂಧಿಯವರ ಉದಯವಾದಾಗಿನಿಂದ ಅದರ ಮಾನಸಿಕತೆಯು ಹೀಗೆಯೇ ಇರುವುದರಿಂದ ಭಾರತದ ವಿಭಜನೆ ಮಾಡಿ ಮುಸಲ್ಮಾನರಿಗೆ ಪಾಕಿಸ್ತಾನವನ್ನು ನೀಡಿದ ನಂತರವೂ ಉಳಿದ ಭಾರತವನ್ನೂ ಅವರಿಗೆ ಧಾರೆ ಎರೆಯುವ ಪ್ರಯತ್ನಗಳು ಕಾಂಗ್ರೆಸ್ಸಿನಿಂದ ನಡೆಯುತ್ತಲೇ ಇವೆ. ಇದರಿಂದಾಗಿಯೇ ಹಿಂದೂಗಳು ಕಾಂಗ್ರೆಸ್‌ಅನ್ನು ಅಧಿಕಾರದಿಂದ ದೂರ ಸರಿಸಿದ ನಂತರವೂ ಇಲ್ಲಿಯ ವರೆಗೂ ಅದಕ್ಕೆ ಸದ್ಬುದ್ಧಿ ಬಂದಿಲ್ಲ. ಇದರಿಂದ ಅದರ ವಿನಾಶಕಾಲವು ಸಮೀಪಿಸಿರುವುದು ಗಮನಕ್ಕೆ ಬರುತ್ತದೆ !