ವಿವಾಹಿತ ಮುಸಲ್ಮಾನನ ಜೊತೆಗೆ ಓಡಿ ಹೋಗಿದ್ದ ವಿವಾಹಿತ ಹಿಂದೂ ಶಿಕ್ಷಕಿಯನ್ನು ಪೊಲೀಸರು ೧ ತಿಂಗಳ ನಂತರ ಪತ್ತೆ ಹಚ್ಚಿದರು !

ರಾಯಚೂರಿನಲ್ಲಿ ‘ಲವ್ ಜಿಹಾದ್’ !

ರಾಯಚೂರಿ – ಸಲೀಮ್ ಎಂಬ ವಿವಾಹಿತ ಮುಸಲ್ಮಾನ ಯುವಕನು ಸುಹಾಸಿನಿ ಎಂಬ ವಿವಾಹಿತ ಶಿಕ್ಷಕಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು. ನಂತರ ಸುಹಾಸಿನಿಯು ಸಲೀಮನ ಜೊತೆಗೆ ಮನೆಯಿಂದ ಓಡಿ ಹೋದಳು. ಸಲೀಮ್ ಮತ್ತು ಸುಹಾಸಿನಿ ಇವರಿಬ್ಬರೂ ಒಂದೊಂದು ಮಕ್ಕಳನ್ನು ಹೊಂದಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರಲ್ಲಿ ದೂರು ನೀಡಿ ಸುಮಾರು ಒಂದು ತಿಂಗಳ ನಂತರ ಪೊಲೀಸರು ಸುಹಾಸಿನಿಯನ್ನು ಆಂದ್ರಪ್ರದೇಶದ ಮಂತ್ರಾಲಯದಲ್ಲಿ ಪತ್ತೆಹಚ್ಚಿದರು. ‘ಸುಹಾಸಿನಿ ‘ನಾನು ಸಲೀಮನೊಂದಿಗೆ ವಿವಾಹವಾಗುತ್ತೇನೆ’, ಎಂದು ಎಂದು ಹಟ ಹಿಡಿದಿದ್ದಳು’, ಎಂದು ಹೇಳಲಾಗುತ್ತದೆ. ‘ಸಲೀಮನ ವಿರುದ್ಧ ದೂರು ನೀಡಿಯೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ’, ಎಂದು ಸುಹಾಸಿನಿಯ ಮನೆಯವರು ಆರೋಪ ಮಾಡಿದ್ದರು. (ದೂರನ್ನು ದಾಖಲಿಸಿಕೊಳ್ಳದಿರುವ ಪೊಲೀಸರು ಜನತಾದ್ರೋಹಿಗಳೆ ಆಗಿದ್ದಾರೆ ! – ಸಂಪಾದಕರು)

ಹಿಂದೂ ಸಂಘಟನೆಗಳು ಸುಹಾಸಿನಿಯ ಮನೆಗೆ ಭೇಟಿ !

ಈ ಪ್ರಕರಣದ ಮಾಹಿತಿ ಸಿಕ್ಕಿದ ತಕ್ಷಣ ಹಿಂದುತ್ವನಿಷ್ಠ ಸಂಘಟನೆಗಳು ಶಿಕ್ಷಕಿಯ ಮನೆಗೆ ಹೋಗಿ ಅವಳ ಮನಃಪರಿವರ್ತನೆ ಮಾಡಲು, ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿದರು. ಈ ಭೇಟಿಯ ನಂತರ ಪ್ರಸಾರಮಾಧ್ಯಮಗಳೊಂದಿಗೆ ಮಾತನಾಡುವಾಗ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತೆ ಸುವರ್ಣಾ ಇವರು, “ಸಂಚಾರಿವಾಣಿಯಿಂದಾಗಿ ಹಾಗೂ ಗೆಳೆತನದ ನೆಪದಲ್ಲಿ ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಲಾಗುತ್ತದೆ. ಈ ಕೃತ್ಯವನ್ನು ಪೂರ್ಣಗೊಳಿಸಲು ಒಂದು ತಂಡವನ್ನು ನಿರ್ಮಿಸಲಾಗುತ್ತದೆ. ಮಹಿಳೆಯ ದೌರ್ಬಲ್ಯ, ಕೊರತೆಯನ್ನು ಕಂಡು ಹಿಡಿಯಲಾಗುತ್ತದೆ. ‘ಮಹಿಳೆ ಆರ್ಥಿಕದೃಷ್ಟಿಯಲ್ಲಿ, ಮಾನಸಿಕ ದೃಷ್ಟಿಯಲ್ಲಿ ದುರ್ಬಲವಾಗಿದ್ದಾಳೆಯೆ ?’, ಎಂಬುದನ್ನು ಕಂಡು ಹಿಡಿದು ಅವಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಲಾಗುತ್ತದೆ. ಈ ವಿಷಯದಲ್ಲಿ ಹಿಂದೂ ಹುಡುಗಿಯರು ಜಾಗರೂಕರಾಗಿರಬೇಕು.”

ಸಂಪಾದಕೀಯ ನಿಲುವು

ಹಿಂದೂ ಮಹಿಳೆಯರಿಗೆ ಧರ್ಮಶಿಕ್ಷಣವನ್ನು ನೀಡುವುದು ಎಷ್ಟು ಆವಶ್ಯಕವಾಗಿದೆ ಎಂಬುದು ಇಂತಹ ಪ್ರಕರಣಗಳಿಂದ ಅರಿವಾಗುತ್ತದೆ !