ಮನೆತನವನ್ನೇ ನಾಶಮಾಡುವ ಪಿತೃದೋಷ

೧೦೦ ರಲ್ಲಿ ೯೯ ಜನರು ಇಚ್ಛೆ- ಆಕಾಂಕ್ಷೆಯನ್ನು ಹಿಂದಕ್ಕೆ ಇಟ್ಟು ಮರಣ ಹೊಂದುತ್ತಾರೆ. ಯಾವುದೇ ವ್ಯಕ್ತಿಯು ಹೋಗುವ ಮೊದಲು ಅವನ ಎಲ್ಲಾ ಇಚ್ಛೆಯು ಪೂರ್ಣವಾಗುತ್ತದೆ ಎಂದಿರುವುದಿಲ್ಲ. ಅದರಿಂದಲೆ ನಂತರ ಪಿತೃದೋಷ ಉಂಟಾಗುತ್ತದೆ. ಅತೃಪ್ತ ಆತ್ಮವು ತನ್ನ ಯಾವ ಇಚ್ಛೆ ಉಳಿದಿದೆ, ಎಂದು ತೋರಿಸಲು ಸಾಧ್ಯವಿಲ್ಲ ಅಥವಾ ಹೇಳಲು ಸಾಧ್ಯವಿಲ್ಲ ಅಥವಾ ಅಂತಹ ಸಂಕೇತವನ್ನು ನೀಡಲು ಸಾಧ್ಯವಿಲ್ಲ ಸ್ವಪ್ನದಲ್ಲಿ ಬರುವ ಅರ್ಹತೆಯು ಇರುವುದಿಲ್ಲ. ಅವರು ಕೇವಲ ಕಷ್ಟಕೊಡುವುದಷ್ಟೆ ಮಾಡುತ್ತಾರೆ. ಒಂದು ವೇಳೆ ಮನೆಯ ತಂದೆ-ತಾಯಿ, ಅಜ್ಜನು ಹೋದರೆ ಅವರಿಗೆ ಮಕ್ಕಳ ಬಗ್ಗೆ ಅವರ ಪೌತ್ರರ ಬಗ್ಗೆ ಅರಿವು ಉಳಿದಿರುವುದಿಲ್ಲ. ತಾವು ಮಕ್ಕಳಿಗೆ, ಮೊಮ್ಮಗನಿಗೆ ಕಷ್ಟವನ್ನು ನೀಡುತ್ತಿದ್ದೇವೆಯೋ ಎಂಬುದು ಅವರಿಗೆ ತಿಳಿಯುವುದಿಲ್ಲ. ಕೇವಲ ಆ ಮನೆತನದಿಂದ, ವಿಶೇಷವಾಗಿ ಕರ್ತಾ ಮಗನಿಂದ ಸ್ವತಃದ ಇಚ್ಛೆಯನ್ನು ಪೂರ್ಣಗೊಳಿಸುವುದಷ್ಟೆ ಅವರಿಗೆ ತಿಳಿದಿರುತ್ತದೆ. ಪಿತೃದೋಷದಿಂದ ದೊಡ್ಡದೊಡ್ಡ ಮನೆತನವೇ ನಾಶವಾಗಿರುವ ಉದಾಹರಣೆಗಳಿವೆ.

(ಆದರಪೂರ್ವಕ : ಮನೆತನದ ದೋಷ, ಪ.ಪೂ.ರಾಮಕೃಷ್ಣ ಕ್ಷೀರಸಾಗರ ಮಹಾರಾಜ ಇವರ ಗುರುವಾಣಿ, ಪುಷ್ಪ ೧೦)