ಭಾಗ್ಯನಗರ (ತೆಲಂಗಾಣ) ಇಲ್ಲಿ ಭಾಜಪದ ಶಾಸಕನ ಮನೆ ಧ್ವಂಸ

  • ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಸಂಸದೆ ಇರುವ ಮಗಳ ಮೇಲೆ ದಾಳಿಯ ಆರೋಪ

  • ಮಗಳನಿಂದ ಭಾಜಪದ ಶಾಸಕರಿಗೆ ನಡುರಸ್ತೆಯಲ್ಲಿ ಚಪ್ಪಲಿನಿಂದ ಹೊಡೆಯುವ ಬೆದರಿಕೆ

ಭಾಗ್ಯನಗರ (ತೆಲಂಗಾಣ) – ಇಲ್ಲಿ ಒಂದು ಪತ್ರಕರ್ತರ ಪರಿಷತ್ತಿನಲ್ಲಿ ಭಾಜಪದ ಶಾಸಕ ಅರವಿಂದ ಧರ್ಮಾಪುರಿ ಇವರು ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಕುಟುಂಬದ ಬಗ್ಗೆ ಅಶ್ಲೀಲ ಟೀಕೆ ಮಾಡಿರುವ ಆರೋಪ ಮಾಡಲಾಗಿತ್ತು. ಅದರ ನಂತರ ನವಂಬರ್ ೧೮ ರಂದು ಕೆಲವು ಜನರು ಧರ್ಮಾಪುರಿ ಇವರ ಮನೆಯ ಮೇಲೆ ದಾಳಿ ನಡೆಸಿ ಮನೆಯನ್ನು ದ್ವಂಸ ಮಾಡಿದರು. ಹಾಗೂ ಅವರ ಪುತ್ತಳಿಯ ದಹನ ಮಾಡಿದರು. ಆ ಸಮಯದಲ್ಲಿ ಶಾಸಕರಾದ ಧರ್ಮಾಪುರಿ ಇವರು ಮನೆಯಲ್ಲಿ ಇರಲಿಲ್ಲ, ಈ ದಾಳಿಯ ಬಗ್ಗೆ ಧರ್ಮಾಪುರಿ ರಾವ ಇವರು ಕೆ. ಚಂದ್ರಶೇಖರರ ಇವರ ಮಗಳು ಹಾಗೂ ಸಂಸದೆ ಕವಿತಾ ಇವರನ್ನು ಉದ್ದೇಶಿಸಿ, ‘ಆ ದಿನ ಕೂಡ ಬರುವುದು, ಯಾವಾಗ ನಿಮ್ಮ ಅಧಿಕಾರಿಗಳೂ ಕೂಡ ಏನು ಮಾಡಲು ಸಾಧ್ಯವಿರುವುದಿಲ್ಲ. ನಾವು ನಿಮ್ಮ ತಂದೆಗೆ (ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರಿಗೆ) ಚಪ್ಪಲಿಯಿಂದ ಹೊಡೆಯುವೇವು ಮತ್ತು ಅವರ ಪಕ್ಷದ ಮಹಿಳಾ ಶಾಖೆಯವರು ಅವರ ಕಾಳಜಿ ವಹಿಸುವರು.’ ಈ ಸಮಯದಲ್ಲಿ ಅವರು ಕವಿತಾ ಇವರಿಗೆ ಅವರ ವಿರುದ್ಧ ಚುನಾವಣೆ ಸ್ಪರ್ಧಿಸಲು ಕರೆ ನೀಡಿದರು.

೧. ಶಾಸಕಾ ಧರ್ಮಾಪುರಿ ಇವರ ಹೇಳಿಕೆಯ ಬಗ್ಗೆ ಸಂಸದೆ ಕವಿತಾ ಇವರು, ಅರವಿಂದ ಹೊಲಸು ಮನುಷ್ಯ, ಅವ ಒಬ್ಬ ವಿಚಿತ್ರ ಮನುಷ್ಯರಾಗಿರುವನು. ಇಂತಹ ವ್ಯಕ್ತಿ ಭಾಜಪದಲ್ಲಿರುವುದು ದುರದೃಷ್ಟಕರವಾಗಿದೆ. ಆತ ಇಂತಹ ಭಾಷೆ ಮಾತನಾಡುತ್ತಿದ್ದರೆ ನಾನು ನಿಜಾಮಾಬಾದ ವೃತ್ತದಲ್ಲಿ ಅವರಿಗೆ ಚಪ್ಪಲಿಯಿಂದ ಹೊಡೆಯುವೆನು. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.

೨. ೨೦೧೪ ರಲ್ಲಿ ಸಂಸದೆ ಕವಿತಾ ಇವರು ಜಮ್ಮು ಕಾಶ್ಮೀರ ಮತ್ತು ತೆಲಂಗಾಣ ಇದು ಭಾರತದ ಭಾಗ ಅಲ್ಲ ಎಂದು ಹೇಳಿದ್ದರು. ‘ಜಮ್ಮು ಕಾಶ್ಮೀರದಲ್ಲಿನ ಕೆಲವು ಭಾಗ ನಮ್ಮದಲ್ಲ ಸ್ವಾತಂತ್ರ್ಯ ದೊರೆತನಂತರ ಬಲವಂತವಾಗಿ ಅದನ್ನು ನಾವು ನಮ್ಮಲ್ಲಿ ವಿಲೀನ ಮಾಡಿದ್ದೇವೆ. ನಾವು ಅಂತರಾಷ್ಟ್ರೀಯ ಗಡಿ ಮತ್ತೊಮ್ಮೆ ಸ್ಪಷ್ಟಪಡಿಸಲು ಮುಂದೆ ಬರಬೇಕು.’ ಎಂದು ಹೇಳಿದ್ದರು. ಇದರ ನಂತರ ಅವರ ಮೇಲೆ ದೇಶ ದ್ರೋಹದ ದೂರು ದಾಖಲಿಸಲಾಗಿತ್ತು.

ಸಂಪಾದಕೀಯ ನಿಲುವು

ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಭಾರತ ರಾಷ್ಟ್ರ ಸಮಿತಿ ಪಕ್ಷದ ಸರ್ವಾಧಿಕಾರತನ ಇದು !
ಈ ಘಟನೆಯಲ್ಲಿನ ತಪ್ಪಿತಸ್ಥರ ವಿರುದ್ಧ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಕೇಂದ್ರ ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇದೆ !