‘ಇಸ್ರೋ’ನಿಂದ ಪ್ರಪ್ರಥಮ ಬಾರಿ ಖಾಸಗಿ ರಾಕೆಟ್ ನ ಯಶಸ್ವಿ ಉಡಾವಣೆ !

ಶ್ರೀಹರಿಕೋಟಾ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ನವೆಂಬರ್ ೧೮ ರಂದು ಪ್ರಥಮ ಖಾಸಗಿ ರಾಕೆಟ್‌ಅನ್ನು ಬೆಳಿಗ್ಗೆ ೧೧.೩೦ ಕ್ಕೆ ಇಲ್ಲಿನ ‘ಸತೀಶ ಭವನ ಬಾಹ್ಯಾಕಾಶ ಕೇಂದ್ರ’ದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಈ ರಾಕೆಟ್ ಭಾಗ್ಯನಗರದ ‘ಸ್ಕೈರೂಟ ಏರೋಸ್ಪೇಸ’ ಕಂಪನಿಗೆ ಸೇರಿದೆ. ಈ ರಾಕೆಟ್‌ನ ಹೆಸರು ‘ವಿಕ್ರಮ ಸಬ್ ಆರ್ಬಿಟಲ್’ ಎಂದು ಇದೆ.

(ಸೌಜನ್ಯ : MONEYCONTROL)

ನಿರ್ಧರಿಸಿದ ಗುರಿಯ ಪ್ರಕಾರ, ರಾಕೆಟ್ ಬಾಹ್ಯಾಕಾಶದಲ್ಲಿ ೧೦೦ ಕಿಲೋಮೀಟರ್ ಪ್ರಯಾಣಿಸಲಿದೆ ಮತ್ತು ನಂತರ ಅದು ಸಮುದ್ರದೊಳಗೆ ಬೀಳಲಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಸಂಸ್ಥಾಪಕ ವಿಕ್ರಮ ಸಾರಾಭಾಯಿ ಇವರ ಹೆಸರಿನ ಆಧಾರದ ಮೇಲೆ ಇದಕ್ಕೆ ‘ವಿಕ್ರಮ ಎಸ್’ ಎಂಬ ಹೆಸರನ್ನು ಕೊಡಲಾಗಿದೆ. ‘ಸ್ಕೈರೂಟ ಏರೋಸ್ಪೇಸ’ ೨೦೨೦ ರಲ್ಲಿ ಈ ರಾಕೆಟನ್ನು ನಿಇಸಲು ಪ್ರಾರಂಭಿಸಿತು. ಈ ಕಂಪನಿಗೆ ಇಸ್ರೋ ಮತ್ತು ಇನ್ ಸ್ಪೇಸ್ ಇವರೂ ಸಹಾಯ ಮಾಡಿದರು.