ಹತ್ಯೆಯ ನಂತರ ಅಫತಾಬ್ ಇಡಿ ರಾತ್ರಿ ಶ್ರದ್ಧಾಳ ಮೃತ ದೇಹದ ಪಕ್ಕದಲ್ಲಿ ಕುಳಿತು ಗಾಂಜಾ ಸೆದಿದ !

ಶ್ರದ್ಧಾ ವಾಲಕರ ಹತ್ಯೆ ಪ್ರಕರಣ

ನವ ದೆಹಲಿ – ಶ್ರದ್ಧಾ ವಾಲಕರ್ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿರುವ ಆಫತಾಬ ಪೂನಾವಾಲಾ ಈ ನಾರಾಧಮನ ವಿಚಾರಣೆಯಲ್ಲಿ ಪೊಲೀಸರಿಗೆ ಪ್ರತಿದಿನ ಹೊಸ ಹೊಸ ವಿಷಯ ಹೊರಬರುತ್ತಿದೆ. ದೆಹಲಿ ಪೋಲಿಸರ ಮೂಲಗಳಿಂದ ಸಿಕ್ಕಿದ ಮಾಹಿತಿಯ ಪ್ರಕಾರ ಆಫತಾಬ್ ಮೆ ೧೮ ರ ರಾತ್ರಿ ೯ ರಿಂದ ೧೦ ಗಂಟೆಯ ಸಮಯದಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಅದರ ನಂತರ ಅವನು ಇಡೀ ರಾತ್ರಿ ಶ್ರದ್ದಾಳ ಶವದ ಪಕ್ಕದಲ್ಲಿ ಕುಳಿತು ಗಾಂಜಾ ಸೇದಿದ್ದಾನೆ.

ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಆಫತಾಬ್ ಗಾಂಜಾದ ಮತ್ತಿನಲ್ಲಿರುವಾಗ ಶ್ರದ್ದಾಳ ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಆ ಸಮಯದಲ್ಲಿ ಅವನು, ಗಾಂಜಾದ ವ್ಯಸನದಿಂದ ಶ್ರದ್ಧಾ ಯಾವಾಗಲೂ ಆತನಿಗೆ ಬಯ್ಯುತ್ತಿದ್ದಳು. ಹತ್ಯೆಯ ದಿನದಂದು ಮನೆಯ ಖರ್ಚು ಹಾಗೂ ಮುಂಬಯಿಯಿಂದ ದೆಹಲಿಗೆ ಸಮಾನು ಯಾರು ತೆಗೆದುಕೊಂಡು ಬರುವುದು ? ಇದರ ಬಗ್ಗೆ ದಿನವಿಡಿ ಜಗಳ ನಡೆಯುತ್ತಿತ್ತು. ಈ ಜಗಳದ ನಂತರ ಅಫತಾಬ್ ಮನೆಯಿಂದ ಹೊರಗೆ ಹೋಗಿ ಗಾಂಜಾ ಸೇದಿಕೊಂಡು ಮನೆಗೆ ಹಿಂತಿರುಗಿದ್ದಾನೆ. ನಂತರ ಶ್ರದ್ಧಾಳ ಹತ್ಯೆ ಮಾಡುವ ಯಾವುದೇ ಯೋಚನೆ ಇರಲಿಲ್ಲ, ಆದರೆ ಗಾಂಜಾದ ನಶೆಯಲ್ಲಿ ಆಕೆಯ ಹತ್ಯೆ ಮಾಡಿದ್ದೇನೆ. ಆಫತಾಬ್ ಶೌಚಾಲಯದಲ್ಲಿ ಶ್ರದ್ಧಾಳ ಮೃತ ದೇಹದ ತುಂಡುಗಳಾಗಿ ಮಾಡಿದನು. ರಕ್ತ ಹರಿದು ಹೋಗಲೆಂದು ಅವನು ಶವವನ್ನು ತುಂಡು ಮಾಡುವಾಗ ನೀರಿನ ನಲ್ಲಿ ತೆರೆದಿದ್ದನು. ನೀರಿನ ಬಿಲ್ಲು ಹೆಚ್ಚು ಬಂದಿರುವುದರಿಂದ ಪೊಲೀಸರಿಗೆ ಅನುಮಾನ ಬಂದಿದೆ. ಈಗ ಅದೇ ಬಿಲ್ಲು ಈ ಪ್ರಕರಣದ ಮಹತ್ವದ ಸಾಕ್ಷಿ ಆಗಲಿದೆ. ಇದರ ಜೊತೆಗೆ ‘ಫಾರೆನ್ಸಿಕ’ ತಜ್ಞರಿಗೆ ಅಡುಗೆ ಮನೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ಶವದ ತುಂಡುಗಳು ಇಡಲು ಆತ ೩೦೦ ಲೀಟರ್ ಫ್ರಿಡ್ಜ್ ಖರೀದಿಸಿದ್ದನು. ನಂತರ ಪ್ರತಿ ದಿನ ರಾತ್ರಿ ಮನೆಯಿಂದ ಹೊರಗೆ ಹೋಗಿ ಬೇರೆ ಬೇರೆ ಸ್ಥಳಗಳಲ್ಲಿ ಮೃತ ದೇಹದ ತುಂಡುಗಳು ಎಸೆದು ಬರುತ್ತಿದ್ದನು.

(ಸೌಜನ್ಯ : News24)

ಆಫತಾಬ್ ಶ್ರದ್ಧಾಳಿಗೆ ಸಿಗರೇಟಿನಿಂದ ಸುಡುತ್ತಿದ್ದನು ! – ಶ್ರದ್ಧಾಳ ಸ್ನೇಹಿತರು ನೀಡಿರುವ ಮಾಹಿತಿ

ಶ್ರದ್ಧಾ ವಾಲಕರ್ ಆಕೆಯ ಸ್ನೇಹಿತ ರಜತ ಶುಕ್ಲ ಇವನು ವಾರ್ತಾವಾಹಿನಿಗೆ, ಆಪತಾಬ್ ಇವನು ರಾಕ್ಷಸನಾಗಿದ್ದಾನೆ. ಆಫತಾಬ್ ಮತ್ತು ಶ್ರದ್ಧಾ ಮುಂಬಯಿಯಲ್ಲಿ ವಾಸವಾಗಿ ಇರುವಾಗಲೂ ಕೂಡ ಆಫತಾಬ್ ಆಕೆಗೆ ಹಿಂಸಿದುತ್ತಿದ್ದನು ಹಾಗೂ ಆಕೆಗೆ ಸಿಗರೇಟ್‌ನಿಂದ ಬರೆ ಇಡುತ್ತಿದ್ದನು. ಈ ಬರೆಯ ಗಾಯ ಶ್ರದ್ಧಾ ಆಕೆಯ ಸ್ನೇಹಿತರಿಗೆ ತೋರಿಸಿದ್ದಳು. ಅದೇ ಸಮಯದಲ್ಲಿ ಆಕೆಯ ಸ್ನೇಹಿತರು ಆಫತಾಬ್ ವಿರುದ್ಧ ಪೊಲೀಸರಿಗೆ ದೂರು ನೀಡಬೇಕಾಗಿತ್ತು; ಆದರೆ ಶ್ರದ್ಧಾಗೆ ಆಫತಾಬ್‌ಗೆ ಸುಧಾರಿಸಲು ಅವಕಾಶ ನೀಡುತ್ತಿದ್ದಳು.

ಸಂಪಾದಕೀಯ ನಿಲುವು

ಮಾನವೀಯತೆಗೆ ಮಸಿ ಬಳಿಯುವಂತಹ ನಾರಾಧಮರಿಗೆ ಸರಕಾರ ಸಾಕುವ ಬದಲು ತಕ್ಷಣ ಗಲ್ಲಿಗೇರಿಸಲು ಪ್ರಯತ್ನಿಸಬೇಕು !

ಕ್ರೂರಿ ಅಫತಾಬನ್ ಅಮಾನವೀಯ ಕೃತ್ಯದ ಬಗ್ಗೆ ಮುಸಲ್ಮಾನರು, ಅವರ ಸಂಘಟನೆಗಳು, ಅವರ ಪಕ್ಷ, ಹಾಗೂ ಅವರ ಓವೈಸಿ, ಅಬು ಆಝಮಿ ಇಂತಹ ನಾಯಕರು ಒಂದೇ ಒಂದು ಶಬ್ದ ಮಾತನಾಡುವುದಿಲ್ಲ, ಇದನ್ನು ಗಮನದಲ್ಲಿಟ್ಟುಕೊಳ್ಳಿ !