ಓವೈಸಿ ಮತ್ತು ಅಖಿಲೇಶ ಯಾದವ್ ಇವರ ವಿರುದ್ಧ ದೂರು ದಾಖಲಿಸಲು ಮಾರ್ಗ ಸುಲಭ

ಜ್ಞಾನವ್ಯಾಪಿ ಪ್ರಕರಣದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣ

ವಾರಣಾಸಿ (ಉತ್ತರಪ್ರದೇಶ) – ಜ್ಞಾನವ್ಯಾಪಿ ಪ್ರಕರಣದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿದ ಪ್ರಕರಣದಲ್ಲಿ ಸಂಸದ ಅಸುದ್ದೀನ್ ಓವೈಸಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ ಇವರ ವಿರುದ್ಧ ದೂರ ದಾಖಲಿಸಲು ಒತ್ತಾಯಿಸಿರುವ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿದೆ. ಆದ್ದರಿಂದ ಈ ಇಬ್ಬರ ವಿರುದ್ಧ ದೂರು ದಾಖಲಿಸುವ ಮಾರ್ಗ ಈಗ ಸುಲಭವಾಗಿದೆ. ಈ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ಹರಿಶಂಕರ್ ಪಾಂಡೆಯ ಇವರು ಒಂದು ಅರ್ಜಿಯ ಮೂಲಕ ನ್ಯಾಯಾಲಯದಲ್ಲಿ, ಓವೈಸಿ ಮತ್ತು ಯಾದವ ಇವರು ಒಂದು ಕಾರ್ಯಕ್ರಮದಲ್ಲಿ ಜ್ಞಾನವ್ಯಾಪಿ ಪ್ರಕರಣದ ಬಗ್ಗೆ ಹಿಂದೂಗಳ ಧಾರ್ಮಿಕ ಭಾವನೆಗೆ ನೋವು ಉಂಟಾಗುವ ಹೇಳಿಕೆ ನೀಡಿದ್ದರು. ಆದ್ದರಿಂದ ಅವರ ವಿರುದ್ಧ ದೂರ ದಾಖಲಿಸಬೇಕು ಎಂದು ಹೇಳಿದ್ದರು, ಇದಕ್ಕೆ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.