ತೃಣಮೂಲ ಕಾಂಗ್ರೆಸನ ಶಾಸಕನ ಕಾರ್ಯಕರ್ತರಿಗೆ ಬಾಂಗ್ಲಾದೇಶದಿಂದ ಬಂದಿರುವ ಹಿಂದೂಗಳ ಬಗೆಗಿನ ದ್ವೇಷಾಧಾರಿತ ಸಂದೇಶ
ಬರ್ಧಮಾನ (ಬಂಗಾಳ) – ಇಲ್ಲಿನ ತೃಣಮೂಲ ಕಾಂಗ್ರೆಸನ ಶಾಸಕ ಖೋಕನ ದಾಸ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಅವರು, ‘ಹಲವು ಹೊಸ ಜನರು ಬರುತ್ತಿದ್ದಾರೆ, ಅವರು ಬಾಂಗ್ಲಾದೇಶಿಗಳಾಗಿದ್ದಾರೆ. ಇವುಗಳ ಪೈಕಿ ಅನೇಕ ಹಿಂದೂಗಳು ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಭಾಜಪಗೆ ಮತ ಹಾಕುತ್ತಾರೆ. ಆದ್ದರಿಂದ ನಾವು, ನಮ್ಮ ಪಕ್ಷವನ್ನು ಬೆಂಬಲಿಸುವವರಿಗೆ ಮಾತ್ರ ಮತದಾರರ ಪಟ್ಟಿಯಲ್ಲಿ ಸ್ಥಾನ ಸಿಗುವಂತೆ ನೋಡಿಕೊಳ್ಳಬೇಕು.” ಎಂದು ಹೇಳುತ್ತಿದ್ದಾರೆ. ಈ ವಿಡಿಯೋ ನವೆಂಬರ್ ೧೫ ರಂದು ಇಲ್ಲಿ ನಡೆದ ಸಭೆಯದ್ದು ಎನ್ನಲಾಗುತ್ತಿದೆ.
ದಾಸ ಇವರ ಹೇಳಿಕೆ ಕುರಿತು ಭಾಜಪದ ಬರ್ಧಮಾನ ಜಿಲ್ಲಾ ವಕ್ತಾರ ಸೌಮ್ಯರಾಜ ಮುಖೋಪಾಧ್ಯಾಯ ಇವರು ಮಾತನಾಡಿ, ದಾಸ ಅವರು ಈ ವಿಚಾರದಲ್ಲಿ ರಾಜಕೀಯ ಮಾಡುವ ಬದಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಈ ನುಸುಳುಕೋರರ ಮಾಹಿತಿ ನೀಡಬೇಕು. ಈ ಕಾರಣಕ್ಕಾಗಿಯೇ ನಾವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.
WB | Many new people are coming to the state from Bangladesh…Many of these people vote for BJP based on Hindu sentiments. Please ensure only those who support our party get a place in the voters’ list: TMC MLA Khokan Das (12.11) pic.twitter.com/QbRRIsvjpI
— ANI (@ANI) November 17, 2022
ಖೋಕನ ದಾಸ ಅವರಿಂದ ಹೇಳಿಕೆಯಲ್ಲಿ ತಿರುವು !
ಈ ವಿಡಿಯೋದಲ್ಲಿನ ಹೇಳಿಕೆಯ ಬಗ್ಗೆ ಪತ್ರಕರ್ತರು ಖೋಕನ ದಾಸರಲ್ಲಿ ಕೇಳಿದಾಗ, ಬಾಂಗ್ಲಾದೇಶಿ ನುಸುಳುಕೋರರು ಪ್ರತಿದಿನ ನಮ್ಮ ಪ್ರದೇಶವನ್ನು ಪ್ರವೇಶಿಸುತ್ತಿದ್ದಾರೆ; ಅವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬಾರದೆಂದು ನಾನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಉತ್ತರಿಸಿದರು.
ಸಂಪಾದಕೀಯ ನಿಲುವು
|