ಭೋಪಾಲ್ (ಮಧ್ಯಪ್ರದೇಶ) – ಕಾಂಗ್ರೆಸ್ಸಿನ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥರು ಮಂದಿರದ ಆಕಾರದಲ್ಲಿರುವ ಕೇಕ್ ಕತ್ತರಿಸಿ ಸಂತಾಪಜನಕ ಕೃತ್ಯ ಮಾಡಿದ್ದಾರೆ. ಇದರ ಬಗೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಕಮಲನಾಥರು ಮಂದಿರದ ಆಕಾರದಲ್ಲಿರುವ ಕೇಕ್ ಕತ್ತರಿಸುವುದು ಕಾಣುತ್ತಿದೆ. ಈ ಕೇಕ್ ಮೇಲೆ ಕೇಸರಿ ಬಾವುಟ ಮತ್ತು ಹನುಮಂತನ ಫೋಟೋ ಕೂಡ ಕಾಣುತ್ತಿದೆ. ನವಂಬರ್ ೧೮ ರಂದು ಕಮಲನಾಥ ಇವರ ಹುಟ್ಟುಹಬ್ಬವಿತ್ತು. ಛಿಂದವಾಡದ ೩ ದಿನದ ಪ್ರವಾಸದಲ್ಲಿರುವಾಗ ಅವರ ಬೆಂಬಲಿಗರಿಂದ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಆ ಸಮಯದಲ್ಲಿ ಈ ಘಟನೆ ನಡೆದಿದೆ.
Former MP CM and senior Congress leader Kamalnath, runs a knife through a four tiered, temple shaped cake, with a saffron flag and image of lord Hanuman on top. During elections he had claimed to be Hanuman bhakt and is now insulting crores of Hindus by denigrating their deity… pic.twitter.com/s4hNMII0iV
— Amit Malviya (@amitmalviya) November 17, 2022
ಇದು ಹಿಂದೂ ಧರ್ಮದ ಅಪಮಾನ ! ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನ್ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನ್, ಕಮಲನಾಥ ಮತ್ತು ಅವರ ಕಾಂಗ್ರೆಸ್ ಪಕ್ಷ ಇದು ನಕಲಿ ಭಕ್ತರಾಗಿದ್ದಾರೆ. ದೇವರ ಜೊತೆ ಅವರಿಗೆ ಯಾವುದೇ ಸಂಬಂಧವಿಲ್ಲ. ಶ್ರೀರಾಮ ಮಂದಿರಕ್ಕೆ ವಿರೋಧ ವ್ಯಕ್ತಪಡಿಸುವ ಪಕ್ಷದ ಪ್ರತಿನಿಧಿಯಾಗಿದ್ದಾರೆ. ಈ ರೀತಿಯ ವರ್ತನೆಯಿಂದ ಚುನಾವಣೆಯಲ್ಲಿ ಸೋಲುವ ಭಯ ಕಾಣುವ ಅವರು ಹನುಮಂತನ ಭಕ್ತರಾದರು. ಕಮಲನಾಥ ಇವರು ಹನುಮಂತನ ಫೋಟೋ ಇರುವ ಕೇಕ್ ಕತ್ತರಿಸಿ, ಹಿಂದೂ ಧರ್ಮದ ಜೊತೆಗೆ ಸನಾತನ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ ಎಂದು ಹೇಳಿದರು. |
ಸಂಪಾದಕೀಯ ನಿಲುವು
|