ವಿದ್ಯಾರ್ಥಿಗಳಿಂದ ಸ್ವಾಗತ ಗೀತೆಯ ಹೆಸರಿನಲ್ಲಿ ಅಜಾನ್ : ಹಿಂದುತ್ವನಿಷ್ಠರಿಂದ ಪ್ರತಿಭಟನೆ

  • ಉಡುಪಿ (ಕರ್ನಾಟಕ) ಇಲ್ಲಿಯ ಕ್ರೀಡಾ ಸ್ಪರ್ಧೆಯ ಸಮಯದಲ್ಲಿ ಅಹಿತಕರ ಘಟನೆ

  • ಶಾಲೆಯ ಆಡಳಿತದಿಂದ ಕ್ಷಮೆಯಾಚನೆ

(ಅಜಾನ್ ಎಂದರೆ ನಮಾಜಿಗಾಗಿ ನೀಡಲಾಗುವ ಆಮಂತ್ರಣ )

ಉಡುಪಿ (ಕರ್ನಾಟಕ) – ಇಲ್ಲಿಯ ಮದರ ತೆರೆಸಾ ಮೆಮೋರಿಯಲ್ ಶಾಲೆಯಲ್ಲಿನ ಕ್ರೀಡಾಸ್ಪರ್ಧೆಯ ಸಮಯದಲ್ಲಿ ವಿದ್ಯಾರ್ಥಿಗಳು ಸ್ವಾಗತ ಗೀತೆ ಹೇಳುವ ಹೆಸರಿನಲ್ಲಿ ಧ್ವನಿವರ್ಧಕದಲ್ಲಿ ಅಜಾನ ನೀಡಿರುವುದರಿಂದ ಭಿಗುವಿನ ವಾತಾವರಣ ನಿರ್ಮಾಣವಾಯಿತು. ಈ ಮಾಹಿತಿ ದೊರೆಯುತ್ತಲೆ ಹಿಂದುತ್ವನಿಷ್ಠ ಸಂಘಟನೆಗಳಿಂದ ಶಾಲೆಯ ಎದುರು ಪ್ರತಿಭಟನೆ ನಡೆಸಿ ಘೋಷಣೆ ಕೂಗಲಾಯಿತು. ಅಜಾನ ನೀಡುವ ಅನುಮತಿ ನೀಡಿರುವ ಶಾಲೆಯ ಆಡಳಿತ ಮತ್ತು ಅನ್ಯ ಪದಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಿಂದುತ್ವ ನಿಷ್ಠ ಸಂಘಟನೆಗಳು ಒತ್ತಾಯಿಸಿದರು. ಇದರ ನಂತರ ಶಾಲೆಯ ಆಡಳಿತದಿಂದ ಕ್ಷಮೆಯಾಚನೆ ಮಾಡಿಸಿ ಘಟನೆಯ ಮೇಲೆ ತೆರೆ ಎಳೆಯುವ ಪ್ರಯತ್ನ ಮಾಡಲಾಯಿತು.

ಮೇಲಿನ ಕಾರ್ಯಕ್ರಮದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಗೀತೆ ಎಂದು ಹಿಂದೂ, ಮುಸಲ್ಮಾನ ಮತ್ತು ಕ್ರೈಸ್ತ ಈ ಮೂರು ಧರ್ಮದ ಗೀತೆ ಹೇಳಲು ಹೇಳಲಾಗಿತ್ತು. ಆ ಸಮಯದಲ್ಲಿ ಈ ರೀತಿಯ ಘಟನೆ ನಡೆದಿದೆ.

ಸಂಪಾದಕೀಯ ನಿಲುವು

  • ಹಿಜಾಬ ಪ್ರಕರಣದ ನಂತರ ಈಗ ಅಜಾನ ಪ್ರಕರಣದಿಂದ ಕರ್ನಾಟಕದ ಶಾಲೆಗಳಲ್ಲಿ ಎಷ್ಟರಮಟ್ಟಿಗೆ ಮತಾಂಧತೆ ಜೋಪಾಸನೆ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ !
  • ಶಾಲೆಯಲ್ಲಿ ಭಗವದ್ಗೀತೆ ಕಲಿಸುವುದರ ಬಗ್ಗೆ ಶಾಲೆಯ ಕೇಸರೀಕರಣವಾಗುತ್ತಿದೆ ಎಂದು ಕಿರಿಚಾಡುವವರು ಈಗ ಶಾಲೆಯ ಇಸ್ಲಾಮಿಕರಣವಾಗುತ್ತಿದೆ ಎಂದು ಹೇಳುವವರೇ ?
  • ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !