(ನಾರ್ಕೊ ಪರೀಕ್ಷೆ ಎಂದರೆ ಆರೋಪಿಗೆ ವಿಶೇಷ ಔಷಧಿಯನ್ನು ನೀಡಿ ಮಂಪರು ಬರಿಸಿ ಅವನಿಂದ ಮಾಹಿತಿಯನ್ನು ಪಡೆಯುವುದು)
ನವದೆಹಲಿ- ಶ್ರದ್ಧಾ ವಾಲಕರ ಹತ್ಯೆಯ ಪ್ರಕರಣದಲ್ಲಿ ಸತ್ರ ನ್ಯಾಯಾಲಯವು ಆರೋಪಿ ಅಫ್ತಾಬ ಪೂನಾವಾಲಾನ ನಾರ್ಕೊ ಪರೀಕ್ಷೆ ನಡೆಸಲು ಪೊಲೀಸರಿಗೆ ಪರವಾನಿಗೆ ನೀಡಿದೆ. ನಾರ್ಕೊ ಪರೀಕ್ಷೆಯ ವರದಿಯನ್ನು ನ್ಯಾಯಾಲಯ ಒಪ್ಪಿಕೊಳ್ಳದಿದ್ದರೂ, ಇಲ್ಲಿಯವರೆಗೆ ಸಿಕ್ಕಿರುವ ದಾಖಲೆಗಳನ್ನು ಪರಿಶೀಲಿಸಲು ಪೊಲೀಸರಿಗೆ ಈ ಪರೀಕ್ಷೆಯಿಂದ ಸಹಾಯವಾಗಲಿದೆ. ಬಂಧನದ ಬಳಿಕ ಅಫ್ತಾಬನು ನಿರಂತರವಾಗಿ ಪೊಲೀಸರ ಹಾದಿ ತಪ್ಪಿಸುತ್ತಿದ್ದು, ಇಲ್ಲಿಯವರೆಗೂ ಅವನು ಶ್ರದ್ಧಾಳ ಸಂಚಾರವಾಣಿ ಮತ್ತು ಅವಳ ಹತ್ಯೆ ಮಾಡಲು ಉಪಯೋಗಿಸಿದ್ದ ಗರಗಸದ ಮಾಹಿತಿಯನ್ನು ನೀಡಿಲ್ಲ.
#AftabAminPoonawalla may undergo narco test for #ShraddhaWalkar‘s murder#Shraddha By @Pritam_Journo
Read the shocking story here:https://t.co/XG4dAdZC2W
— Zee News English (@ZeeNewsEnglish) November 16, 2022