ಹುಬ್ಬಳ್ಳಿಯಲ್ಲಿ ಬಲವಂತದ ಮತಾಂತರದ ಪ್ರಕರಣದಲ್ಲಿ ೧೫ ಜನರ ವಿರುದ್ಧ ದೂರು ದಾಖಲು

ಹುಬ್ಬಳ್ಳಿ (ಕರ್ನಾಟಕ) – ಕರ್ನಾಟಕ ಪೋಲೀಸರು ನಗರದಲ್ಲಿ ಬಲವಂತವಾಗಿ ಮತಾಂತರಿಸಲು ಪ್ರಯತ್ನಿಸಿದ ೧೫ ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಕ್ರೈಸ್ತ ಧರ್ಮ ಪ್ರಚಾರಕರು ಹಿಂದೂ ಧರ್ಮದಲ್ಲಿನ ಚಿಕ್ಕಲಿಗ ಸಮುದಾಯವನ್ನು ಗುರಿ ಮಾಡಿ ಸಂಪೂರ್ಣ ಸಮಾಜವನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ. ಜನರ ಮೇಲೆ ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಪಂಥ ಸ್ವೀಕರಿಸಲು ಒತ್ತಡ ಹೇರಲು ಕ್ರೈಸ್ತ ಧರ್ಮ ಪ್ರಚಾರಕ ಮದನ ಬುಗುಡಿ ಸ್ಥಳೀಯನ ಸಹಾಯ ಪಡೆದಿರುವುದು ಆರೋಪಿಸಲಾಗಿದೆ. ಬಲವಂತವಾಗಿ ಮತಾಂತರಗೊಳಿಸುವ ಪ್ರಕರಣದಲ್ಲಿ ಪೊಲೀಸರು ಮದನ ಬುಗುಡಿ ಮತ್ತು ಇತರ ೧೪ ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣದ ಮುಂದಿನ ಅನ್ವೇಷಣೆ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಕ್ರೈಸ್ತ ಧರ್ಮ ಪ್ರಚಾರಕರಿಗೆ ಯಾರ ಭಯ ಇಲ್ಲದಿರುವುದರಿಂದ ಅವರು ಹಿಂದುತ್ವನಿಷ್ಠ ಭಾಜಪ ಆಡಳಿತದ ರಾಜ್ಯದಲ್ಲಿ ಕೂಡ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಾರೆ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !