ಕಾರವಾರದ ಪಂಚಶಿಲ್ಪಕಾರ ನಂದಾ ಆಚಾರಿ (ಗುರೂಜಿ) ಸಂತ ಪದವಿಯಲ್ಲಿ ವಿರಾಜಮಾನ !

ರಾಮನಾಥಿ (ಗೋವಾ) ಇಲ್ಲಿನ ಸನಾತನದ ಆಶ್ರಮದಲ್ಲಿ ನೆರವೇರಿದ ಭಾವಸಮಾರಂಭದಲ್ಲಿ ಘೋಷಣೆಯಾದ ಆನಂದವಾರ್ತೆ

ಪೂ. ನಂದಾ ಆಚಾರಿ (ಗುರೂಜಿ)

ರಾಮನಾಥಿ (ಗೋವಾ) – ಅನಾಸಕ್ತ, ದೇಹಬುದ್ಧಿ ಮರೆತು ಮೂರ್ತಿ ತಯಾರಿಸುವ ಸೇವೆ ಮಾಡುವ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಅಪಾರ ಭಾವವಿರುವ ಹಾಗೂ ಕರ್ನಾಟಕ ಸರಕಾರದ ‘ಜಕಣಾಚಾರ್ಯ ಪುರಸ್ಕಾರ ಪಡೆದಿರುವ ಕಾರವಾರದ ಶಿಲ್ಪಕಾರರಾದ ಶ್ರೀ. ನಂದಾ ಆಚಾರಿ (ಗುರೂಜಿ) ಇವರು ಸಂತ ಪದವಿಯಲ್ಲಿ ವಿರಾಜಮಾನರಾಗಿರುವ ಆನಂದದ ವಾರ್ತೆಯನ್ನು ೩ ನವೆಂಬರ್ ೨೦೨೨ ರಂದು ಘೋಷಿಸಲಾಯಿತು. ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ನಡೆದ ಒಂದು ಭಾವಸಮಾರಂಭದಲ್ಲಿ ಸನಾತನದ ಸಾಧಕಿ ಸೌ. ವಿದ್ಯಾ ವಿನಾಯಕ ಶಾನಭಾಗ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ ಓದಿ ಹೇಳುತ್ತ ಈ ಆನಂದವಾರ್ತೆ ಘೋಷಿಸಿದರು. ಸನಾತನದ ಸಂತರಾದ ಪೂ. ಪೃಥ್ವಿರಾಜ ಹಜಾರೆ ಇವರ ಹಸ್ತದಿಂದ ಪೂ. ನಂದಾ ಆಚಾರಿ ಇವರಿಗೆ ಶಾಲು, ಶ್ರೀಫಲ, ಪುಷ್ಪಹಾರ ಮತ್ತು ಉಡುಗೊರೆ ನೀಡಿ ಅವರನ್ನು ಸನ್ಮಾನಿಸಲಾಯಿತು.

ಪೂ. ನಂದಾ ಆಚಾರಿ (ಗುರೂಜಿ) (ಕುಳಿತಿರುವ) ಇವರನ್ನು ಸನ್ಮಾನಿಸುತ್ತಿರುವ ಪೂ. ಪೃಥ್ವಿರಾಜ ಹಜಾರೆ

ಈ ಭಾವಸಮಾರಂಭದ ಆರಂಭದಲ್ಲಿ ಸಾಧಕರು ಪೂ. ನಂದಾ ಆಚಾರಿ ಇವರು ತಯಾರಿಸಿದ ಶ್ರೀ ಸಿದ್ಧಿವಿನಾಯಕ ಮೂರ್ತಿಯ ಬಗ್ಗೆ ಹಾಗೂ ಅದರ ದರ್ಶನ ಪಡೆಯುವಾಗ ಬಂದಿರುವ ಅನುಭೂತಿ ಬಗ್ಗೆ ಹೇಳಿದರು. ಅನಂತರ ಪೂ. ನಂದಾ ಗುರೂಜಿಯವರು ಮೂರ್ತಿ ತಯಾರಿಸುವಾಗ ಅವರು ಅನುಭವಿಸಿರುವ ಆನಂದ ಮತ್ತು ಭಾವಾವಸ್ಥೆದ ಬಗ್ಗೆ ಹೇಳಿದರು. ಈ ಸಮಯದಲ್ಲಿ ಪೂ. ನಂದಾ ಆಚಾರಿಯವರ ಧರ್ಮಪತ್ನಿ ಸೌ. ಮಂದಾ ನಂದಾ ಆಚಾರಿ ಇವರು ಕೂಡ ಉಪಸ್ಥಿತರಿದ್ದರು. ಈ ಪ್ರಸಂಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರು ಉಪಸ್ಥಿತರಿದ್ದರು. ‘ಪೂ. ನಂದಾ ಆಚಾರಿ ಇವರಿಗೆ ಶಿಲೆಯನ್ನು ಸ್ಪರ್ಶಿಸಿದೊಡನೆ ಯಾವ ಮತ್ತು ಎಷ್ಟು ಅಡಿ ಎತ್ತರದ ಮೂರ್ತಿ ತಯಾರಿಸಬಹುದೆಂದು ತಿಳಿಯುತ್ತದೆ. ಅವರು ಮೂರ್ತಿ ಸೇವೆಯನ್ನು ತಲ್ಲೀನರಾಗಿ ಮಾಡುತ್ತಾರೆ. ಅದರಿಂದ ಅವರಿಗೆ ಒಳಗಿನಿಂದ ಆನಂದ ದೊರೆತು ಹಸಿವೆ-ಬಾಯಾರಿಕೆ ಆಗುವುದಿಲ್ಲ. ಹಾಗಾಗಿ ಆ ಮೂರ್ತಿಯಲ್ಲಿ ಬಹಳಷ್ಟು ಚೈತನ್ಯ ಮತ್ತು ಸಕಾರಾತ್ಮಕತೆ ಇರುತ್ತದೆ, ಎಂದು ಉಪಸ್ಥಿತ ಸಾಧಕರು ಅವರ ಗುಣವೈಶಿಷ್ಟ್ಯಗಳನ್ನು ಹೇಳಿದರು.

ಪೂ. ನಂದಾ ಆಚಾರಿ ಇವರ ಮನೋಗತ

ಎಲ್ಲವೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕೃಪೆಯಿಂದ ಸಾಧ್ಯವಾಗಿದೆ !

ಇದೆಲ್ಲವೂ ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆ ಇವರ ಕೃಪೆಯಿಂದ ಸಾಧ್ಯವಾಗಿದೆ. ಏನೆಲ್ಲ ನಡೆಯುತ್ತದೆ, ಇದನ್ನು ಮೊದಲೇ ಬರೆದಿಡಲಾಗಿದೆ. ನಾನು ಕೇವಲ ನಿಮಿತ್ತಮಾತ್ರನಾಗಿರುವೆ.

ಪೂ. ಬಾಬಾ ಅವರು ಮೂರ್ತಿ ಹೇಗೆ ತಯಾರಿಸುವುದು, ಇದನ್ನು ಕಲಿಸಿರುವುದರಿಂದ ನನಗೆ ಅದರಲ್ಲಿ ಆನಂದ ಪಡೆಯಲು ಸಾಧ್ಯವಾಗಿದೆ ! – ಗಜಾನನ ನಂದಾ ಆಚಾರಿ (ಪೂ. ನಂದಾ ಆಚಾರಿ ಇವರ ಹಿರಿಯ ಮಗ)

ನಾನು ಚಿಕ್ಕವನಿರುವಾಗ ಬಾಬಾರವರು (ಪೂ. ನಂದಾ ಆಚಾರಿ ಇವರು) ಮೂರ್ತಿ ಹೇಗೆ ತಯಾರಿಸುವುದು ಇದನ್ನು ನನಗೆ ಕಲಿಸಿದರು. ಆದ್ದರಿಂದ ನನಗೂ ಮೂರ್ತಿ ತಯಾರಿಸುವಾಗ ಆನಂದ ಅನುಭವಿಸಲು ಸಾಧ್ಯವಾಗುತ್ತದೆ. ಇದೆಲ್ಲವೂ ಬಾಬಾ ಅವರಿಂದ ಸಾಧ್ಯವಾಗಿದೆ. ಸನಾತನದ ಆಶ್ರಮಕ್ಕೆ ಬಂದ ನಂತರ ಶ್ರೀ ಸಿದ್ಧಿವಿನಾಯಕನ ಮೂರ್ತಿ ನೋಡಿ, ‘ಅದನ್ನು ನಾವು ತಯಾರಿಸಿಲ್ಲ, ಅದು ಸ್ವಯಂಭೂ ಆಗಿದೆ, ಎಂದು ಅನಿಸಿ ಕಣ್ಣುಗಳು ತುಂಬಿ ಬಂದವು. (ಭಾವಾಶ್ರು ಬಂದವು) (ಶ್ರೀ ಗಜಾನನ ನಂದಾ ಆಚಾರಿಯವರು ಇದನ್ನು ಹೇಳುವಾಗ ಅವರ ಭಾವಜಾಗೃತವಾಗಿತ್ತು. – ಸಂಕಲನಕಾರರು)

ಅಮರಶಿಲ್ಪಿ ಜಕಣಾಚಾರ್ಯರ ಹಾಗೆ ನಮ್ಮ ಮಾವ ! – ಸೌ. ಗಾಯತ್ರಿ ಗಜಾನನ ಆಚಾರಿ (ಸೊಸೆ)

ಹಿಂದಿನ ಕಾಲದಲ್ಲಿ ಪ್ರಸಿದ್ಧ ಮತ್ತು ಋಷಿ ಸಮಾನ ಅಮರಶಿಲ್ಪಿ ಜಕಣಾಚಾರ್ಯರು ಮೂರ್ತಿ ತಯಾರಿಸುತ್ತಿದ್ದರು, ಅಂತಹ ಮೂರ್ತಿಗಳನ್ನು ಈಗ ನಮ್ಮ ಮಾವನವರು ತಯಾರಿಸುತ್ತಾರೆ. ಮಾವನವರಿಗೆ ಕರ್ನಾಟಕ ಸರಕಾರದಿಂದ ‘ಜಕಣಾಚಾರ್ಯ ಪ್ರಶಸ್ತಿ ನೀಡಲಾಗಿದೆ. ಅವರು ತಯಾರಿಸಿರುವ ಮೂರ್ತಿಗಳಲ್ಲಿ ವಿಭಿನ್ನತೆ ಕಾಣುತ್ತದೆ. ಅವರು ಹೇಗೆ ಮೂರ್ತಿ ತಯಾರಿಸುತ್ತಾರೆ, ಹಾಗೆ ಅವರು ಕುಟುಂಬವನ್ನು ಸಿದ್ಧಗೊಳಿಸಿದ್ದಾರೆ. ಈಗ ನನ್ನ ಪತಿ ಸಹ ಅದೇ ರೀತಿಯ ಮೂರ್ತಿ ತಯಾರಿಸುತ್ತಾರೆ ಮತ್ತು ನನ್ನ ಇಬ್ಬರು ಮಕ್ಕಳು ಕೂಡ ಶಾಲೆಗೆ ಹೋಗುವುದರ ಜೊತೆಗೆ ಮೂರ್ತಿ ತಯಾರಿಸುವುದನ್ನು ಕಲಿಯುತ್ತಿದ್ದಾರೆ. ಮಕ್ಕಳಿಗೂ ಮೂರ್ತಿ ತಯಾರಿಸುವಲ್ಲಿ ಆಸಕ್ತಿ ನಿರ್ಮಾಣವಾಗಿದೆ.

ಆನಂದಿ, ಉತ್ಸಾಹಿ ಮತ್ತು ಹಸಿವು-ಬಾಯಾರಿಕೆಯನ್ನು ಮರೆತು ಮೂರ್ತಿಕಲೆಯೊಂದಿಗೆ ಏಕರೂಪವಾಗುವ ಶ್ರೀ ಸಿದ್ಧಿವಿನಾಯಕ ಮೂರ್ತಿಯ ಶಿಲ್ಪಿಗಳಾದ ಶ್ರೀ. ನಂದಾ ಆಚಾರಿ ಗುರೂಜಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಕಾರವಾರದ ಸಮೀಪವಿರುವ ಶಿರವಾಡ (ಉತ್ತರಕನ್ನಡ ಜಿಲ್ಲೆ) ದಲ್ಲಿನ ಶಿಲ್ಪಕಾರ ಶ್ರೀ. ನಂದಾ ಆಚಾರಿ ಗುರೂಜಿ (೮೨ ವರ್ಷ) ಯವರು ಇಲ್ಲಿಯವರೆಗೆ ದೇವತೆಗಳ ಸಾವಿರಾರು ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಅವರ ವೈಶಿಷ್ಟ್ಯ ವೆಂದರೆ ಅವರು ಯಾವುದಾದರೊಂದು ಶಿಲೆಯನ್ನು ಮುಟ್ಟಿದರೆ ‘ಅದರಿಂದ ಯಾವ ಮೂರ್ತಿ ನಿರ್ಮಿಸಬಹುದು ?, ಎಂಬು ದನ್ನು ಅರಿತುಕೊಳ್ಳುವ ಆಧ್ಯಾತ್ಮಿಕ ಸಾಮರ್ಥ್ಯ ಅವರಿಗೆ ಪ್ರಾಪ್ತವಾಗಿದೆ.

ಸನಾತನ ಸಂಸ್ಥೆಯು ೨೦೨೦ ರಲ್ಲಿ ಆಚಾರಿ ಗುರೂಜಿ ಯವರಿಂದ ಋದ್ಧಿ-ಸಿದ್ಧಿಸಹಿತ ಶ್ರೀ ಸಿದ್ಧಿವಿನಾಯಕನ ಮೂರ್ತಿ ಯನ್ನು ನಿರ್ಮಿಸಿಕೊಂಡಿತ್ತು. ಈ ಮೂರ್ತಿಯನ್ನು ನಿರ್ಮಿಸುವಾಗ ಶ್ರೀ ಗಣಪತಿಯು ಗುರೂಜಿಯವರಿಗೆ ಕನಸಿನಲ್ಲಿ ಹಲವಾರು ಬಾರಿ ದರ್ಶನ ನೀಡಿ ‘ಮೂರ್ತಿಯಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು, ಎಂಬ ಬಗ್ಗೆ ಹೇಳಿದ್ದಾರೆ. ಗುರೂಜಿಯವರು ನಿರಂತರ ಪರಿಶ್ರಮಪಟ್ಟು ಭಾವಪೂರ್ಣವಾಗಿ ಈ ಸುಂದರ ಮೂರ್ತಿಯನ್ನು ನಿರ್ಮಿಸಿದ್ದರಿಂದ ಈ ಮೂರ್ತಿಯಲ್ಲಿ ಶಕ್ತಿ ಹಾಗೂ ಚೈತನ್ಯವು ಬಹಳ ಹೆಚ್ಚು ಪ್ರಮಾಣದಲ್ಲಿದೆ. ಸಾಧಕರಿಗೆ ಈ ಮೂರ್ತಿಯ ದರ್ಶನವನ್ನು ಪಡೆಯುವಾಗ ಅನೇಕ ಅನುಭೂತಿಗಳು ಬರುತ್ತವೆ ಹಾಗೂ ಶ್ರೀ ಗಣಪತಿಯ ಅಸ್ತಿತ್ವದ ಅರಿವಾಗುತ್ತದೆ. ಗುರೂಜಿಯವರು ಸನಾತನದ ರಾಮನಾಥಿ ಆಶ್ರಮದ ಇಬ್ಬರು ಸಾಧಕರಿಗೆ ಮೂರ್ತಿಕಲೆಯ ಶಿಕ್ಷಣ ಹಾಗೂ ಆಶೀರ್ವಾದವನ್ನೂ ನೀಡಿ ದ್ದಾರೆ. ಗುರೂಜಿಯವರ ಜೊತೆಯಲ್ಲಿದ್ದಾಗ ಈ ಸಾಧಕರು ಗುರೂಜಿ ಯವರಲ್ಲಿನ ಪ್ರೇಮಭಾವ, ಮೈಮರೆತು ಸೇವೆ ಮಾಡುವ ತಳಮಳ, ಅಹಂಶೂನ್ಯ ಹಾಗೂ ದೇವರ ಮೇಲಿನ ದೃಢವಾದ ಶ್ರದ್ಧೆಯನ್ನು ಅನುಭವಿಸಿದ್ದಾರೆ. ಹಾಗೂ ಅವರ ಜೊತೆ ಯಲ್ಲಿರುವಾಗ ‘ತಾವು ಸಂತರೊಂದಿಗೆ ಇದ್ದೇವೆ ಎಂದೆನಿಸುತ್ತಿತ್ತು. ಗುರೂಜಿಯವರು ಮೂರ್ತಿಗಳನ್ನು ನಿರ್ಮಿಸುವ ಜಾಗವು ಈಗ ಅತ್ಯಂತ ಪವಿತ್ರವಾಗಿದ್ದು ‘ಅಲ್ಲಿ ದೇವತೆಗಳ ವಾಸವಿದೆ, ಎಂಬ ಅನುಭೂತಿಗಳು ಬರುತ್ತವೆ. ಗುರೂಜಿಯವರಲ್ಲಿರುವ ನಿಷ್ಕಾಮ ಭಾವ, ಮೈಮರೆತು ಸೇವೆ ಮಾಡುವ ಅವರ ವೃತ್ತಿಯಿಂದಾಗಿ ಅವರು ನಿರ್ಮಿಸಿರುವ ದೇವತೆಗಳ ಮೂರ್ತಿಗಳು, ಆ ಸ್ಥಳ ಮುಂತಾದವುಗಳೆಲ್ಲ ಚೈತನ್ಯಮಯವಾಗಿವೆ. ದೇವರ ಮೇಲಿನ ದೃಢ ಶೃದ್ಧೆ ಹಾಗೂ ಧ್ಯಾನ, ಮನಸ್ಸು ಮತ್ತು ಕನಸಿನಲ್ಲಿಯೂ ಕೇವಲ ಮೂರ್ತಿಕಲೆಯದ್ದೇ, ಅಂದರೆ ಭಗವಂತನದ್ದೇ ಧ್ಯಾಸವಿರುವುದರಿಂದ ಗುರೂಜಿಯವರ ಆಧ್ಯಾತ್ಮಿಕ ಉನ್ನತಿಯಾಗುತ್ತಿದ್ದು ಇಂದಿನ ಶುಭದಿನದಂದು ಅವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ‘ಶ್ರೀ ಸಿದ್ಧಿವಿನಾಯಕನ ಕೃಪೆಯಿಂದ ಪೂ. ನಂದಾ ಆಚಾರಿ ಗುರೂಜಿಯವರ ಮುಂದಿನ ಪ್ರಗತಿಯೂ ಶೀಘ್ರಗತಿಯಲ್ಲಿ ಆಗಲಿದೆ, ಎಂಬುದು ನನಗೆ ಖಚಿತವಾಗಿದೆ.
– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ)