ಬಲಾತ್ಕಾರಿಗಳಿಗೆ ನಡು ಬೀದಿಯಲ್ಲಿ ಗಲ್ಲು ಶಿಕ್ಷೆ ನೀಡಿ ಶವವನ್ನು ಹದ್ದಿನ ಮುಂದೆ ಬಿಸಾಕಿ !

ಮಧ್ಯಪ್ರದೇಶದ ಭಾಜಪ ಸರಕಾರದಲ್ಲಿನ ಸಂಸ್ಕೃತಿ ಸಚಿವೆ ಉಷಾ ಠಾಕೂರ ಇವರ ಒತ್ತಾಯ !

ಮಹೂ (ಮಧ್ಯಪ್ರದೇಶ) – ಅಪರಾಧಿಯು ಬಲಾತ್ಕಾರದ ಕೃತ್ಯ ಸಮಾಜದಲ್ಲಿ ಇದ್ದುಕೊಂಡೇ ಮಾಡುತ್ತಾನೆ; ಆದರೆ ಅವನಿಗೆ ಶಿಕ್ಷೆ ಮಾತ್ರ ಸೆರೆಮನೆಯ ನಾಲ್ಕು ಗೋಡೆಯ ಒಳಗೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ಅಪರಾಧಿಗಳಿಗೆ ಭಯ ಅನಿಸುವುದಿಲ್ಲ. ಆದ್ದರಿಂದ ಅಂತಹವರಿಗೆ ನಡು ಬೀದಿಯಲ್ಲಿ ಗಲ್ಲಿಗೇರಿಸಬೇಕು. ಇದರಿಂದ ಈ ರೀತಿಯ ಮಾನಸಿಕತೆ ಇರುವ ಜನರಲ್ಲಿ ಭಯ ನಿರ್ಮಾಣವಾಗುತ್ತದೆ. ಹಾಗೂ ಇಂತಹ ಅಪರಾಧಿಗಳ ಶವದ ಅಂತ್ಯ ಸಂಸ್ಕಾರ ಕೂಡ ಮಾಡಬಾರದು. ಅವರ ಶವವನ್ನು ಹದ್ದಿನ ಮುಂದೆ ಬಿಸಾಕಬೇಕು. ಇದರಿಂದ ಅಪರಾಧಿಗಳಲ್ಲಿ ಭಯ ನಿರ್ಮಾಣವಾಗುವುದು, ಎಂದು ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಇವರು ಅವರ ಕಠೋರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಇಲ್ಲಿಯ ಕೋದರಿಯ ಗ್ರಾಮದಲ್ಲಿನ ಒಂದು ಸಭೆಯಲ್ಲಿ ಮಾತನಾಡುತ್ತಿದ್ದರು.
ಉಷಾ ಠಾಕೂರ್ ಮಾತು ಮುಂದುವರೆಸುತ್ತಾ, ಇಂತಹ ಅಪರಾಧಿಗಳ ವಿರುದ್ಧ ಸಹಿ ಅಭಿಯಾನ ನಡೆಸಬೇಕು. ಪ್ರತಿಯೊಂದು ಮನೆಯಿಂದ ಮಾತೆಯರು-ಸಹೋದರಿಯರು ಇದರಲ್ಲಿ ಭಾಗವಹಿಸಬೇಕು.

ಇದರ ನಂತರ ಅಪರಾಧಿಗಳನ್ನು ನಡು ಬೀದಿಯಲ್ಲಿ ಗಲ್ಲು ಶಿಕ್ಷೆ ನೀಡಿ ಎಂದು ಒತ್ತಾಯಿಸುವ ಮನವಿ ಮುಖ್ಯಮಂತ್ರಿಗಳಿಗೆ ನೀಡಬೇಕು ಎಂದು ಹೇಳಿದರು. ಇಂತಹ ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಆಯೋಗವನ್ನು ನಿರ್ಲಕ್ಷಿಸಬೇಕು. ಇಂತಹ ನರಾಧಮಗಳಿಗೆ ಯಾವ ಮಾನವ ಅಧಿಕಾರ ಇದೆ ?