ಮೊಹಾಲಿ (ಪಂಜಾಬ) ಇಲ್ಲಿಯ ದುಷ್ಕರ್ಮಿಗಳಿಂದ ಮಹಂತರ ಹತ್ಯೆ

ಮೋಹಲಿ (ಪಂಜಾಬ) – ಇಲ್ಲಿಯ ಮಹಂತ ಶೀತಲ ದಾಸ (ವಯಸ್ಸು ೭೦ ವರ್ಷ) ಇವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಅವರು ಇಲ್ಲಿ ಒಂದು ಗುಡಿಸಲಲ್ಲಿ ವಾಸವಾಗಿದ್ದರು. ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಅವರ ಹತ್ಯೆಯ ಹಿಂದಿನ ಕಾರಣ ಮತ್ತು ಹಂತಕರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಸ್ಥಳೀಯರ ಅಭಿಪ್ರಾಯದ ಪ್ರಕಾರ, ಎಮ್ಮೆ ಕಳ್ಳತನ ಮಾಡುವ ಗುಂಪು ಅವರ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಪೊಲೀಸರು ಈ ಹತ್ಯೆಯ ತನಿಖೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಇಲ್ಲಿ ಎಮ್ಮೆ ಕಳ್ಳತನ ಮಾಡುವ ಕಳ್ಳನು ನುಗ್ಗಿದ್ದರು. ಅವರು ಒಬ್ಬ ರೈತನ ಎಮ್ಮೆ ಕಳ್ಳತನ ಮಾಡುತ್ತಿರುವುದುನ್ನು ನೋಡದ ಜನರು ಕೂಗಾಡಿದರು ಆಗ ಅವರು ಓಡಿ ಹೋಗಿದ್ದರು.

೧. ಶೀತಲದಾಸ್ ಇವರು ಕಳೆದ ೪೨ ವರ್ಷದಿಂದ ಮೊಹಾಲಿ ಹತ್ತಿರದ ಬುಢನಪುರ ಗ್ರಾಮದ ಸರಕಾರಿ ಶಾಲೆಯ ಹಿಂಭಾಗದಲ್ಲಿರುವ ಗುಡಿಸಿಲಲ್ಲಿ ವಾಸವಾಗಿದ್ದರು. ಅವರು ಮೂಲತಃ ಪಂಜಾಬನ ಫತೆಹಗಡ ಸಾಹಿಬ್ ಜಿಲ್ಲೆಯ ಒಂದು ಗ್ರಾಮದವರಾಗಿದ್ದಾರೆ. ಅಲ್ಲಿ ಅವರ ಸ್ವಲ್ಪ ಭೂಮಿ ಕೂಡ ಇತ್ತು.

೨. ಈ ಹತ್ಯೆಯ ಬಗ್ಗೆ ಬಹುಜನ ಸಮಾಜ ಪಕ್ಷದಿಂದ ರಾಜ್ಯದಲಿನ ಆಮ್ ಆದ್ಮಿ ಪಕ್ಷದ ಸರಕಾರವನ್ನು ಟೀಕಿಸಿದೆ. ಆಮ್ ಆದ್ಮಿ, ಪಕ್ಷದ ಸರಕಾರ ಬಂದ ನಂತರ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಸಂಪೂರ್ಣವಾಗಿ ಹಾಳಾಗಿದೆ. ‘ಪಂಜಾಬನಲ್ಲಿನ ಜನರ ಹತ್ಯೆ ನಡೆಯುವಾಗ ಮುಖ್ಯಮಂತ್ರಿ ಭಗವಂತ ಮಾನ ಇವರು ಗುಜರಾತ್‌ನಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ’, ಎಂದು ಬಹು ಜನ ಸಮಾಜ ಪಕ್ಷದ ಸಚಿವರಾದ ಜಗಜೀತ ಸಿಂಹ ಇವರು ಟೀಕಿಸಿದರು.

ಸಂಪಾದಕೀಯ ನಿಲುವು

ಪಂಜಾಬನಲ್ಲಿ ಸರಣಿಯಂತೆ ಜನರ ಹತ್ಯೆ ನಡೆಯುತ್ತಿದೆ. ಇದರಿಂದ ಪಂಜಾಬನಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಅಲ್ಲದೆ ಅಪರಾಧಿಗಳ ಮತ್ತು ಖಲಿಸ್ಥಾನಿವಾದಿಗಳ ಸರಕಾರ ಇರುವುದೆಂದು ಹೇಳಬಹುದು !

ಪಂಜಾಬನಲ್ಲಿ ಗಾಯಕ, ಹಿಂದುತ್ವ ನಿಷ್ಠ ಮತ್ತು ಈಗ ಮಹಂತರ ಹೀಗೆ ಒಬ್ಬರ ಹಿಂದೆ ಒಬ್ಬರಂತೆ ನಡೆಯುವ ಹತ್ಯೆ ಹಾಗೂ ಖಲಿಸ್ಥಾನಿವಾದಿಗಳ ಹೆಚ್ಚುತ್ತಿರುವ ಉಪಟಳ ನೋಡುತ್ತಿದ್ದರೆ ಕೇಂದ್ರ ಸರಕಾರ ಪಂಜಾಬನಲ್ಲಿ ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು !