ಪಂಜಾಬನಲ್ಲಿ ಕ್ರೈಸ್ತ ಮಿಷನರಿಗಳಿಂದ ಲಕ್ಷಾಂತರ ಸಿಖ್ಖರ ಮತಾಂತರ !

೧೪ ವರ್ಷಗಳ ಹಿಂದೆ ಕೇವಲ ೩ ಸದಸ್ಯರು ಇದ್ದ ಚರ್ಚನಲ್ಲಿ ಇಂದು ೩ ಲಕ್ಷ ಸದಸ್ಯರು !

ಚಂಡೀಗಡ (ಪಂಜಾಬ) – ‘ಇಂಡಿಯಾ ಟುಡೆ’ ನಿಯತಕಾಲಿಕೆಯು ಪಂಜಾಬನಲ್ಲಿ ಅತಿವೇಗವಾಗಿ ನಡೆಯುತ್ತಿರುವ ಕ್ರೈಸ್ತ ಮತಾಂತರದ ವಿಷಯವನ್ನು ಬೆಳಕಿಗೆ ತಂದಿದೆ. ಪಂಜಾಬ ರಾಜ್ಯದಲ್ಲಿ ೬೫ ಸಾವಿರ ಪಾದ್ರಿಗಳು ರಾಜ್ಯದ ಎಲ್ಲ ೨೩ ಜಿಲ್ಲೆಗಳಲ್ಲಿ ಲಕ್ಷಾಂತರ ಸಿಖ್ಖರನ್ನು ಮತಾಂತರಿಸಿದ್ದಾರೆ. ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸುವಂತೆ ’ಅಕಾಲ ತಖ್ತ’ ಪಕ್ಷದ ಜತ್ಥೇದಾರ ಜ್ಞಾನಿ ಹರಪ್ರೀತ ಸಿಂಗ ಅವರು ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸಿದ್ದಾರೆ. ಜ್ಞಾನಿ ಹರಪ್ರೀತ ಸಿಂಗ ಅವರು, ಕ್ರೈಸ್ತ ಮಿಷನರಿಗಳು ತಥಾಕಥಿತ ಪವಾಡಗಳ ಮೂಲಕ ಉಪಚಾರ ಮಾಡಿ ರೋಗಿಗಳು ಗುಣಮುಖರಾಗುತ್ತಾರೆಂಬಂತೆ ತೋರಿಸುತ್ತಿದ್ದಾರೆ. ಈ ಮೂಲಕ ಸಿಖ ಮತ್ತು ಹಿಂದೂಗಳನ್ನು ವಂಚಿಸಿ ಮತಾಂತರ ಮಾಡಲಾಗುತ್ತಿದೆ. ಇದಕ್ಕಾಗಿ ವಿದೇಶದಿಂದ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತಿದೆ. ಸರಕಾರ ಮತಪೆಟ್ಟಿಗೆ ರಾಜಕಾರಣ ಮಾಡುತ್ತಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ.” ಎಂದು ಹೇಳಿದರು.

೧. ಜಾಲಂಧರ ಜಿಲ್ಲೆಯ ಖಾಂಬಡಾ ಗ್ರಾಮದಲ್ಲಿ ನಿರ್ಮಿಸಲಾಗಿರುವ ಚರ್ಚ್‌ಗೆ ಸಾವಿರಾರು ಜನರು ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಇದರ ಹಿಂದೆ ಪಾದ್ರಿ ಅಂಕುರ ನರುಲಾ ಅವರ ಕೈವಾಡವಿದ್ದು ಅವರು ಸ್ವತಃ ೨೦೦೮ ರಲ್ಲಿ ಮತಾಂತರಗೊಂಡಿದ್ದಾರೆ. ನಂತರ ಅವರು ಇತರರನ್ನು ಮತಾಂತರಿಸುವ ಜವಾಬ್ದಾರಿಯನ್ನು ವಹಿಸಿಕೊಂಡು ‘ಅಂಕುರ ನರುಲಾ ಮಿನಿಸ್ಟ್ರಿ’ಯನ್ನು ಸ್ಥಾಪಿಸಿದರು. ನಂತರ ‘ಚರ್ಚ್ ಆಫ್ ಸೈನ್ಸ್ ಅಂಡ ವಂಡರ್ಸ್’ ಕೂಡ ಪ್ರಾರಂಭಿಸಿದರು. ೨೦೦೮ ರಲ್ಲಿ ಕೇವಲ ೩ ಸದಸ್ಯರನ್ನು ಹೊಂದಿದ್ದ ಈ ಚರ್ಚ್ ಇಂದು ೩ ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ; ಅಂದರೆ, ಕಳೆದ ೧೪ ವರ್ಷಗಳಲ್ಲಿ ೩ ಲಕ್ಷಕ್ಕೂ ಹೆಚ್ಚು ಸಿಖ ಮತ್ತು ಹಿಂದೂಗಳನ್ನು ಮತಾಂತರ ಮಾಡಲಾಗಿದೆ. ‘ಮಾಝಾ’ ಮತ್ತು ‘ದೋಆಬಾ’ ಸೇರಿದಂತೆ ಮಾಲವಾದಲ್ಲಿನ ಫಿರೋಜಪುರ ಹಾಗೂ ಫಾಜಿಲ್ಕಾ ಇಲ್ಲಿನ ಗಡಿ’ ಪ್ರದೇಶಗಳಲ್ಲಿಯೂ ಈ ಸಂಸ್ಥೆಯು ಬಹಳ ಸಕ್ರಿಯವಾಗಿದೆ.

೨. ೨೦೧೧ರ ಜನಗಣತಿಯ ಪ್ರಕಾರ ಪಂಜಾಬ ರಾಜ್ಯದಲ್ಲಿ ಕ್ರೈಸ್ತರ ಒಟ್ಟು ಜನಸಂಖ್ಯೆ ೩ ಲಕ್ಷ ೪೮ ಸಾವಿರ ಇತ್ತು. ಇಂದು ‘ನರುಲಾ ಮಿನಿಸ್ಟ್ರಿ’ಯ ಸದಸ್ಯರ ಸಂಖ್ಯೆಯೇ ೩ ಲಕ್ಷಕ್ಕೂ ಹೆಚ್ಚು ಇದೆ. ಕ್ರೈಸ್ತ ಮಿಷನರಿಗಳ ಬಲೆಗೆ ಬಿದ್ದಿರುವ ಕಾರಣ ಅವರನ್ನು ‘ಪಗಡಿವಾಲೆ ಕ್ರೈಸ್ತರು’ ಎಂದು ಸಂಬೋಧಿಸಲಾಗುತ್ತಿದೆ.

೩. ಈ ವರ್ಷದ ಆರಂಭದಲ್ಲಿ ಪಂಜಾಬನಲ್ಲಿ ನಡೆದ ಚುನಾವಣೆಗಳಲ್ಲಿ ತಮ್ಮನ್ನೇ ತಾವು ದಲಿತರು ಮತ್ತು ಕ್ರೈಸ್ತರು ಎಂದು ಹೇಳಿಕೊಳ್ಳುವವರ ದೊಡ್ಡ ಸಮೂಹವಿತ್ತು. ಮತಾಂತರದ ಜಾಲವು ಎಷ್ಟು ವಿಸ್ತಾರವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

೪. ‘ಯುನೈಟೆಡ್ ಕ್ರಿಶ್ಚಿಯನ್ ಫ್ರಂಟ್’ನ ಅಂಕಿಅಂಶಗಳ ಪ್ರಕಾರ, ಪಂಜಾಬದಲ್ಲಿನ ೧೨ ಸಾವಿರ ಗ್ರಾಮಗಳ ಪೈಕಿ ೮ ಸಾವಿರ ಗ್ರಾಮಗಳಲ್ಲಿ ಕ್ರೈಸ್ತರು ಸಮಿತಿಗಳನ್ನು ಸ್ಥಾಪಿಸಿದ್ದಾರೆ. ಅಮೃತಸರ ಮತ್ತು ಗುರುದಾಸಪುರ ಈ ಎರಡು ಜಿಲ್ಲೆಗಳಲ್ಲಿ ೬೦೦ ರಿಂದ ೭೦೦ ಚರ್ಚ್‌ಗಳಿವೆ. ಇವುಗಳಲ್ಲಿ ಶೇಕಡ ೬೦-೭೦ ರಷ್ಟು ಚರ್ಚ್‌ಗಳನ್ನು ಕಳೆದ ೫ ವರ್ಷಗಳಲ್ಲಿ ನಿರ್ಮಿಸಲಾಗಿದೆ.

೫. ೮೦-೯೦ರ ದಶಕಗಳಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ದಕ್ಷಿಣ ಭಾರತದ ರಾಜ್ಯಗಳ ಪರಿಸ್ಥಿತಿ ಹೀಗಿತ್ತು. ಪಂಜಾಬವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಪಂಜಾಬ ರಾಜ್ಯವು ಕ್ರೈಸ್ತರ ಮತಾಂತರಕ್ಕೆ ಹೊಸ ಪ್ರಯೋಗಾಲಯವಾಗಿದೆ !

ಪವಿತ್ರ ಸುವರ್ಣ ಮಂದಿರವಿರುವ ಅಮೃತಸರದ ಸೆಹಂಸರಾ ಕಲಾಂ ಗ್ರಾಮವು ಕ್ರೈಸ್ತ ಮತಾಂತರದ ಪ್ರಮುಖ ಕೇಂದ್ರವಾಗಿದೆ. ಗುರ್ನಾಮ ಸಿಂಗ ಎಂಬ ವ್ಯಕ್ತಿ ಇಲ್ಲಿಯ ಪಾದ್ರಿಯಾಗಿದ್ದು, ಅವನಿಂದಾಗಿ ಅಸಂಖ್ಯಾತ ಜನರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ. ಗುರ್ನಾಮ ಸಿಂಗ ಅವರು ಒಬ್ಬ ಪೊಲೀಸ ಸಿಬ್ಬಂದಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮಿಷನರಿಗಳಲ್ಲಿ ಅಮೃತ ಸಂಧು, ಕಾಂಚನ ಮಿತ್ತಲ, ರಾಮನ ಹಂಸ, ಗುರ್ನಾಮ ಸಿಂಗ ಖೇಡಾ, ಹರ್ಜಿತ ಸಿಂಗ, ಸುಖಪಾಲ ರಾಣಾ, ಫಾರಿಸ ಮಸಿಹ ಇವರಂತಹ ದೊಡ್ಡ ಹೆಸರುಗಳಿವೆ. ಇವರೆಲ್ಲರೂ ವೃತ್ತಿಯಲ್ಲಿ ಆಧುನಿಕ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಪೊಲೀಸರು ಅಥವಾ ಉದ್ಯಮಿಗಳು ಆಗಿದ್ದಾರೆ. ಇವರೆಲ್ಲರೂ ಮೂಲತಃ ಸಿಖ್ಖರು ಮತ್ತು ‘ಪಗಡಿವಾಲೆ ಕ್ರೈಸ್ತ’ರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಬಹು ದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಅವರು ಅನೇಕ ಶಾಖೆಗಳನ್ನು ಹೊಂದಿದ್ದಾರೆ ಹಾಗೂ ‘ಯೂಟ್ಯೂಬ’ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು (ಫೊಲೊವರ್ಸ್) ಹೊಂದಿದ್ದಾರೆ.

ಕಪುರಥಲಾ ಜಿಲ್ಲೆಯ ಖೋಜೆವಾಲ ಗ್ರಾಮದ ‘ಓಪನ್ ಡೋರ್ ಚರ್ಚ್’ನ ಪಾದ್ರಿ ಹರಪ್ರೀತ ದೆವೊಲ ಜಾಟ ಸಿಖ್ಖರಾಗಿದ್ದಾರೆ. ಬಟಾಲಾ ಎಂಬಲ್ಲಿಯ ಹರಪುರಾ ಗ್ರಾಮದ ಶಸ್ತ್ರಚಿಕಿತ್ಸಕ (ಸರ್ಜನ್) ಆಗಿರುವ ಪಾದ್ರಿ ಗುರ್ನಾಮ ಸಿಂಗ ಖೇಡಾ ಕೂಡ ಜಾಟ ಸಿಖ್ಖರಾಗಿದ್ದಾರೆ.

ಪಟಿಯಾಲದಲ್ಲಿನ ಬನೂರ ಎಂಬಲ್ಲಿನ ‘ಚರ್ಚ್ ಆಫ್ ಪೀಸ್’ನ ಪಾದ್ರಿ ಮಿತ್ತಲ ಇವರು ಬನಿಯಾ ಜಾತಿಯವರಾಗಿದ್ದಾರಾದರೆ ಚಮಕೌರ ಸಾಹಿಬನ ಪಾದ್ರಿ ರಮನ ಹಂಸ ಇವರು ಕೂಡ ಸಿಖ್ಖರಾಗಿದ್ದಾರೆ.

ಸಂಪಾದಕೀಯ ನಿಲುವು

ಆಮ್ ಆದಮಿ ಪಕ್ಷದ ಆಡಳಿತದ ಅವಧಿಯಲ್ಲಿ ಕ್ರೈಸ್ತ ಮಿಷನರಿಗಳಿಗೆ ಮುಕ್ತ ಅವಕಾಶ ಸಿಗುತ್ತಿದೆ ಎಂಬ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪಂಜಾಬ್‌ನಲ್ಲಿ ಖಲಿಸ್ತಾನವಾದಿಗಳ ಉದ್ರೇಕ, ಹಿಂದೂತ್ವನಿಷ್ಠರ ಹತ್ಯೆಗಳು, ಸಿಖ್ಕರ ಮತ್ತು ಹಿಂದೂಗಳ ಮತಾಂತರ ಇವೆಲ್ಲವುಗಳನ್ನು ಗಮನಿಸಿದರೆ ಕೇಂದ್ರ ಸರಕಾರವು ಈಗ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವ ಅವಶ್ಯಕತೆಯಿದೆ !

ಮತಾಂತರದ ಘಟನೆಗಳನ್ನು ತಡೆಗಟ್ಟಿ ಕ್ರೈಸ್ತ ಮಿಷನರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು, ಕೇಂದ್ರ ಸರಕಾರವು ಈಗ ಮತಾಂತರ ವಿರೋಧಿ ಕಾನೂನನ್ನು ಮಾಡುವುದು ಅವಶ್ಯಕ !

ತಥಾ ಕಥಿತ ಸಿಖ್ಖಪ್ರೇಮ ಇರುವ ಖಲಿಸ್ತನವಾದಿಗಳ ಸಹಾಯದಿಂದಲೇ ಈ ಕ್ರೈಸ್ತ ಮಿಷನರಿಗಳು ತಮ್ಮ ಬಲೆಗಳನ್ನು ನೇಯುತ್ತಿರಬಹುದಲ್ಲವೇ ? ಈ ಬಗ್ಗೆಯೂ ತನಿಖೆ ನಡೆದು ಸತ್ಯಾಂಶ ಜನರ ಮುಂದೆ ಬರಬೇಕು !