ಗುಜರಾತ ಚುನಾವಣೆಯ ಮೊದಲು ಉಗ್ರ ನಿಗ್ರಹ ದಳದಿಂದ ೧೦೦ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ದಾಳಿ !

೭೧ ಕೋಟಿ ೮೮ ಲಕ್ಷ ರೂಪಯಿ ಜಪ್ತಿ ಹಾಗೂ ೬೫ ಜನರ ಬಂಧನ

ಕರ್ಣಾವತಿ (ಗುಜರಾತ) – ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಮುನ್ನ ಗುಜರಾತ ಉಗ್ರ ನಿಗ್ರಹ ದಳದಿಂದ ಸೂರತ, ಕರ್ಣಾವತಿ, ಜಾಮನಗರ, ಭರೂಚ, ಭಾವನಗರ ಮುಂತಾದರ ಜೊತೆಗೆ ೧೩ ಜಿಲ್ಲೆಗಳಲ್ಲಿ ೧೦೦ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಸಮಯದಲ್ಲಿ ೭೧ ಕೋಟಿ ೮೮ ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಹಾಗೂ ಇದರಲ್ಲಿ ಒಟ್ಟು ೬೫ ಜನರನ್ನು ಬಂಧಿಸಲಾಗಿದೆ. ದಳದಿಂದ ನವಂಬರ್ ೧೧ ರಾತ್ರಿಯಿಂದ ದಾಳಿಯ ಸರಣಿ ಆರಂಭಿಸಿತು. ಈ ಕಾರ್ಯಾಚರಣೆಯಲ್ಲಿ ಕೆಲವು ಅನುಮಾನಾಸ್ಪದ ದಾಖಲೆಗಳು ಸಿಕ್ಕಿವೆ. ಈ ಕಾರ್ಯಾಚರಣೆ ಅಂತರಾಷ್ಟ್ರೀಯ ಮಾರ್ಗದಿಂದ ನಡೆಯುವ ತೆರಿಗೆ ಕಳ್ಳತನ ಹಾಗೂ ಹಣದ ವ್ಯವಹಾರದ ವಿಚಾರಣೆ ನಡೆಸುವ ಮಾಹಿತಿ ಸೂತ್ರದಿಂದ ನೀಡಿದೆ.

ಗುಜರಾತ ವಿಧಾನಸಭೆಯ ಒಟ್ಟು ೧೮೨ ಸ್ಥಾನದಲ್ಲಿ ೮೭ ಸ್ಥಾನಕ್ಕಾಗಿ ಡಿಸೆಂಬರ ೧ ರಂದು ಮತ್ತು ಉಳಿದಿರುವ ೯೩ ಸ್ಥಾನಕ್ಕಾಗಿ ಡಿಸೆಂಬರ್ ೫ ರಂದು ಮತದಾನ ನಡೆಯಲಿದೆ.

ಸಂಪಾದಕೀಯ ನಿಲುವು

ಭಾರತದ ಚುನಾವಣೆಯ ಸಮಯದಲ್ಲಿ ಈ ರೀತಿ ಕೋಟ್ಯಾಂತರ ರೂಪಾಯಿ ದೊರೆಯುತ್ತದೆ, ಇದರಲ್ಲಿ ಆಶ್ಚರ್ಯವೇನು ಇಲ್ಲ ! ಅಂದರೆ ಈ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಸೀ ಬಳಿಯುವಂತೆ ಇದೆ. ಇದರ ಬಗ್ಗೆ ಹಿಂದೂ ರಾಷ್ಟ್ರದ ಸ್ಥಾಪನೆ ಇದು ಏಕೈಕ ಪರ್ಯಾಯವಾಗಿದೆ, ಇದನ್ನು ತಿಳಿದುಕೊಳ್ಳಿ !