ಭಿಂಡ (ಮಧ್ಯಪ್ರದೇಶ) ಇಲ್ಲಿಯ ಸ್ಮಶಾನಭೂಮಿಯಲ್ಲಿನ ದೇವಸ್ಥಾನದಲ್ಲಿನ ಘಂಟೆ ತನ್ನಷ್ಟಕ್ಕೆ ಬಾರಿಸಿತು !

ಭಿಂಡ (ಮಧ್ಯಪ್ರದೇಶ) – ಭಿಂಡ ನಗರದಲ್ಲಿನ ಧರ್ಮಪುರಿ ಮುಕ್ತಿಧಾಮ ಸ್ಮಶಾನ ಭೂಮಿಯಲ್ಲಿ ಮಹಾಕಾಲ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿರುವ ಘಂಟೆ ಸಾಯಂಕಾಲ ಅನಿರೀಕ್ಷಿತವಾಗಿ ತನ್ನಷ್ಟಕ್ಕೆ ಅಲುಗಾಡಿತು ಮತ್ತು ಬಾರಿಸಿತು. ಈ ಘಂಟೆಯ ಧ್ವನಿ ಕೇಳಿ ಸುತ್ತಮುತ್ತಲಿನ ಜನ ಸೇರಿದರು. ಈ ಘಟನೆ ನೋಡುವುದಕ್ಕಾಗಿ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದರು. ಸುಮಾರು ೪ ಗಂಟೆ ಈ ಘಂಟೆ ಬಾರಿಸುತ್ತಿತ್ತು. ಈ ವಿಷಯವಾಗಿ ಪ್ರಸ್ತುತ ಯಾವುದೇ ಕಾರಣ ತಿಳಿದು ಬಂದಿಲ್ಲ, ಆದರೆ ಜನರು ಈ ಘಟನೆ ಭೂತ ಅಥವಾ ದೈವಿಶಕ್ತಿಯ ದೃಷ್ಟಿಯಿಂದ ನೋಡುತ್ತಿದ್ದಾರೆ.