ರಾಜಾ ಸಿಂಗ ಠಾಕೂರ ಅವರಿಗೆ ಜಾಮೀನು ಮಂಜೂರು

ಭಾಗ್ಯನಗರ – ಮೊಹಮ್ಮದ ಪೈಗಂಬರರ ಬಗ್ಗೆ ತಥಾಕಥಿತ ಟಿಪ್ಪಣೆಗೆ ಸಂಬಂಧಿಸಿದಂತೆ ಭಾಜಪದ ಅಮಾನತುಗೊಂಡ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ರಾಜಾ ಸಿಂಗ ಠಾಕೂರ ಅವರಿಗೆ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ತೆಲಂಗಾಣ ಪೊಲೀಸರು ಅವರನ್ನು ಪ್ರತಿಬಂಧಾತ್ಮಕ ತನಿಖೆ ಕಾಯ್ದೆಯಡಿ ಬಂಧಿಸಿದ್ದರು.

ಆಗಸ್ಟ್‌ನಲ್ಲಿ ರಾಜಾ ಸಿಂಗ ಅವರು ಮೊಹಮ್ಮದ ಪೈಗಂಬರರ ಬಗ್ಗೆ ಒಂದು ‘ಯೂಟ್ಯೂಬ್ ವಿಡಿಯೋ’ದಲ್ಲಿ ಕೆಲವು ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಲಾಗಿತ್ತು. ಇದರ ನಂತರ ಭಾಜಪವು ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಈ ವಿಡಿಯೋ ಹಾಸ್ಯ ಕಲಾವಿದ ಮುನಾವರ ಫಾರೂಕಿಯ ವ್ಯಂಗ್ಯಾತ್ಮಕ ಕಾರ್ಯಕ್ರಮಕ್ಕೆ ಅವರು ನೀಡಿದ್ದ ಪ್ರತಿಕ್ರಿಯೆಯಾಗಿತ್ತು ಎಂದು ಶಾಸಕ ರಾಜಾ ಸಿಂಗ ಹೇಳಿದ್ದರು.