ಕೇರಳದಲ್ಲಿ ಎನ್.ಐ.ಎ.ಯ ಅಧಿಕಾರಿಗೆ ಜೀವ ಬೆದರಿಕೆ

  • ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕನ ಹತ್ಯೆಯ ತನಿಖೆ ನಡೆಸುತ್ತಿದ್ದಾರೆ

  • ಹತ್ಯೆಯ ಪ್ರಕರಣದಲ್ಲಿ ಇಲ್ಲಿಯವರೆಗೆ ಪಿ.ಎಫ್.ಐ. ನ ೩೪ ಜನರನ್ನು ಬಂಧಿಸಲಾಗಿದೆ

ತಿರುವನಂತಪುರಂ (ಕೇರಳ) – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಎಸ್.ಕೆ. ಶ್ರೀನಿವಾಸನ್ ಇವರ ಹತ್ಯೆಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಳಾ ದಳದ ಅಧಿಕಾರಿ ಅನಿಲ ಕುಮಾರ ಇವರಿಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಫಲಕ್ಕಡ ಪೊಲೀಸರಲ್ಲಿ ದೂರು ದಾಖಲಿಸಲಾಗಿದ್ದೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀನಿವಾಸನ್ ಇವರ ಹತ್ಯೆ ಏಪ್ರಿಲ್ ೧೬, ೨೦೨೨ ರಂದು ಮಾಡಲಾಗಿತ್ತು. ಈ ಹತ್ಯೆಯ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (‘ಪಿ.ಎಫ್.ಐ.ನ) ರಾಜಕೀಯ ಶಾಖೆ ಇರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜನರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈ ಹತ್ಯೆಯ ಪ್ರಕರಣದಲ್ಲಿ ಇಲ್ಲಿಯವರೆಗೆ ಪಿ.ಎಫ್.ಐ.ನ ೩೪ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಪಿ.ಎಫ್.ಐ. ಮೇಲೆ ನಿಷೇಧ ಹೇರಿದ್ದರು ಕೂಡ ಈ ರೀತಿಯ ಚಟುವಟಿಕೆ ನಡೆಯುತ್ತಲೇ ಇರುವುದು, ಈ ರೀತಿಯ ಬೆದರಿಕೆಯಿಂದ ತಿಳಿದು ಬರುತ್ತದೆ. ಇದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಪಿ.ಎಫ್.ಐ. ಎಂಬು ಹುಳುವನ್ನು ಬೇರಸಹಿತ ನಷ್ಟ ಮಾಡಲು ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಬೇಕು !