ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಪೂಜೆ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನವೆಂಬರ್ ೧೪ ರಂದು ತೀರ್ಪು !

ವಾರಣಾಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಪೂಜೆ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನವೆಂಬರ್ ೮ ರಂದು ನೀಡಲಾಗುವ ತೀರ್ಪನ್ನು ಈಗ ನವೆಂಬರ್ ೧೪ ವರೆಗೆ ಮುಂದೂಡಲಾಗಿದೆ. ಇಲ್ಲಿಯ ಶೀಘ್ರ ನ್ಯಾಯಾಲಯದಿಂದ ಇದರ ಬಗ್ಗೆ ತೀರ್ಪು ನೀಡಲಿದೆ.

ಜ್ಞಾನವಾಪಿಯಲ್ಲಿ ವಜುಖಾನ್‌ನ ಒಳಗೆ ಪತ್ತೆಯಾದ ಸಂರಚನೆ ಇದು ‘ಶಿವಲಿಂಗ’ವಾಗಿದೆ. ಆದ್ದರಿಂದ ಅದರ ಪೂಜೆ ಮಾಡಲು ಅನುಮತಿ ನೀಡಬೇಕು, ಸಂಪೂರ್ಣ ಜ್ಞಾನವಾಪಿ ಸಂಕಿರಣ ಹಿಂದೂಗಳ ವಶಕ್ಕೆ ನೀಡಬೇಕು, ಹಾಗೂ ಸಂಕಿರಣದಲ್ಲಿ ಮುಸಲ್ಮಾನರ ಪ್ರವೇಶ ನಿಷೇಧಿಸಬೇಕು, ಎಂದು ಹಿಂದೂಗಳು ಅರ್ಜಿಯ ಮೂಲಕ ಒತ್ತಾಯಿಸಿದೆ. ಇಲ್ಲಿ ಪ್ರಸ್ತುತ ಮುಸಲ್ಮಾನರಿಂದ ನಮಾಜ್ ಮಾಡಲಾಗುತ್ತಿದೆ. ಅಕ್ಟೋಬರ್‌ನಲ್ಲಿ ನಡೆದ ವಿಚಾರಣೆಯ ವೇಳೆ ಜಿಲ್ಲಾ ನ್ಯಾಯಾಲಯವು ಶಿವಲಿಂಗದ ವೈಜ್ಞಾನಿಕ ಪರಿಶೀಲನೆ ನಡೆಸಲು ಅನುಮತಿ ನಿರಾಕರಿಸಿತ್ತು.