ಧರ್ಮ ಜಾಗರಣ ಮಂಚ್‌ನ ದಾವೆ
ಜೈಪುರ (ರಾಜಸ್ಥಾನ) – ಇತ್ತಿಚೆಗೆ ಉತ್ತರ ಪ್ರದೇಶದ ಮೆರಠದಲ್ಲಿ ೪೦೦ ಹಿಂದೂಗಳ ಮತಾಂತರ ನಡೆಸಿರುವ ವಾರ್ತೆ ಬೆಳಕಿಗೆ ಬಂದಿತ್ತು. ‘ರಾಜಸ್ಥಾನದಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳ ಮತಾಂತರದ ಪಿತೂರಿ ನಡೆಸಲಾಗಿದೆ. ರಾಜ್ಯದಲ್ಲಿ ೧೨-೧೩ ಜಿಲ್ಲೆಗಳಲ್ಲಿನ ಕ್ರೈಸ್ತ ಮಿಶನರಿ ಸುಮಾರು ೩ ಲಕ್ಷ ಹಿಂದೂಗಳ ಸಂಪರ್ಕದಲ್ಲಿದ್ದು ಇವರು ಈ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದಾರೆ’, ಎಂದು ಧರ್ಮ ಜಾಗರಣ ಮಂಚ್ ಈ ಹಿಂದುತ್ವನಿಷ್ಠ ಸಂಘಟನೆಯಿಂದ ಹೇಳಲಾಗಿದೆ. ಕ್ರೈಸ್ತ ಮಶನರಿ ಮೂರ್ತಿ ಪೂಜೆಗೆ ವಿರೋಧ ವ್ಯಕ್ತಪಡಿಸಿ ಹಿಂದೂಗಳ ಬುದ್ಧಿಭ್ರಮಣೆ ಮಾಡುತ್ತಿದ್ದಾರೆ.
राजस्थान में मिशनरियों के टारगेट पर 3 लाख लोग, घूम-घूमकर मूर्ति पूजा पर हो रहा दुष्प्रचार: मध्य प्रदेश में धर्मांतरण करा रहे 8 गिरफ्तार#Rajasthan #MadhyaPradesh https://t.co/lPrrshSOCF
— ऑपइंडिया (@OpIndia_in) November 7, 2022
ಧರ್ಮ ಜಾಗರಣ ಮಂಚ್‌ನಿಂದ ಮಾಡಿರುವ ದಾವೇಯ ಪ್ರಕಾರ
೧. ರಾಜಧಾನಿ ಜೈಪುರದಿಂದ ಕೇವಲ ೨೨ ಕಿಲೋಮೀಟರ್ ಅಂತರದಲ್ಲಿ ಇರುವ ವಾಟಿಕಾ ಗ್ರಾಮದಲ್ಲಿರುವ ಢಾಣೆ ಭೈರವಾಲ ಇಲ್ಲಿಯ ಮಶನರಿಗಳು ಕಾರ್ಯನಿರತವಾಗಿದೆ. ಇಲ್ಲಿ ೪೦೦ ಹಿಂದೂ ಕುಟುಂಬದವರನ್ನು ಮತಾಂತರಿಸಲು ಪ್ರಯತ್ನಿಸಲಾಗುತ್ತಿದೆ.
೨. ಕ್ರೈಸ್ತ ಮಿಶನರಿ ಹಿಂದೂಗಳಿಗೆ ಮೂರ್ತಿ ಪೂಜೆ ನಿಲ್ಲಿಸುವುದು, ವ್ರತಗಳ ಪಾಲನೆ ಮಾಡದಿರುವುದು, ಹಿಂದೂ ದೇವರನ್ನು ನಂಬದೇ ಇರುವುದು ಈ ರೀತಿ ಮಾಡಲು ಹೇಳುತ್ತಾರೆ. ಯೇಸು ಕ್ರಿಸ್ತನ ಉಪಾಸನೆ ಮಾಡಿದರೆ, ಎಲ್ಲಾ ರೋಗಗಳ ಸಹಿತ ಇತರ ಎಲ್ಲಾ ಸಮಸ್ಯೆಗಳ ಪರಿಹಾರ ಆಗುತ್ತದೆ. ದೇವರ ಪೂಜೆ ಮಾಡಿದರೆ ಅನರ್ಥವಾಗುತ್ತದೆ, ಎಂದು ಅವರು ದಾವೆ ಮಾಡುತ್ತಾರೆ.
೩. ಸ್ಥಳೀಯ ಜನರು ನೀಡಿರುವ ಮಾಹಿತಿಯ ಪ್ರಕಾರ ಕ್ರೈಸ್ತ ಮಿಶನರಿಗಳು ಹಿಂದೂಗಳಿಗೆ ಉದ್ಯೋಗದ ಆಮೀಷವಡ್ಡಿ ದೇವತೆಗಳ ಮೂರ್ತಿ ನದಿ ಅಥವಾ ಸರೋವರದಲ್ಲಿ ಎಸೆಯಲು ಅಥವಾ ಆಲದ ಮರದ ಕೆಳಗೆ ಇಡಲು ಹೇಳುತ್ತಾರೆ.
ಸಂಪಾದಕೀಯ ನಿಲುವುಹಿಂದೂಗಳಲ್ಲಿ ಧರ್ಮಶಿಕ್ಷಣ ಅಭಾವದಿಂದ ಅವರು ಕ್ರೈಸ್ತರ ಆಪಮಿಷಕ್ಕೆ ಸುಲಭವಾಗಿ ಬಲಿಯಾಗುತ್ತಾರೆ. ಆದ್ದರಿಂದ ಅವರಿಗೆ ಧರ್ಮ ಶಿಕ್ಷಣ ನೀಡುವ ಹಾಗೂ ಕೇಂದ್ರ ಸರಕಾರದಿಂದ ರಾಷ್ಟ್ರಾದ್ಯಂತ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸುವುದು ಅವಶ್ಯಕವಾಗಿದೆ ! ಈ ದಾವೆಯಲ್ಲಿ ಸತ್ಯ ಇದ್ದರೆ, ಕಾಂಗ್ರೆಸ್ಸಿನ ರಾಜ್ಯದಲ್ಲಿ ಕ್ರೈಸ್ತರಿಗೆ ಅನುಕೂಲ ವಾತಾವರಣ ಸಿಕ್ಕಿರುವುದು ಇದರಲ್ಲಿ ಆಶ್ಚರ್ಯವೇನು ? |
ಸಿವನಿ (ಮಧ್ಯಪ್ರದೇಶ) ಇಲ್ಲಿಯ ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸುವ ೮ ಕ್ರೈಸ್ತರ ಬಂಧನ !ಮಧ್ಯಪ್ರದೇಶದ ಸಿವನಿ ಜಿಲ್ಲೆಯ ಡಾಲಾ ಎಂಬ ಗ್ರಾಮದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸುವ ೮ ಕ್ರೈಸ್ತರನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಸೋಹನಲಾಲ ನಾಗೇಶ ಎಂಬ ವ್ಯಕ್ತಿಯ ಮನೆಯಲ್ಲಿ ಹಿಂದೂಗಳ ಮತಾಂತರ ನಡೆಯುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಈ ಸಮಯದಲ್ಲಿ ಮತಾಂತರದ ಬದಲು ಅವರಿಗೆ ಆರ್ಥಿಕ ಪರಿಹಾರ ನೀಡುವುದರ ಬಗ್ಗೆ ಹೇಳಲಾಗಿತ್ತು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಪ್ರಾಂತಿಯ ಅಧ್ಯಕ್ಷ ಶುಭಂ ಸಿಂಹಾ ಇವರು, ಸಿವನಿ, ಬಾಲಾಘಾಟ, ಛಿಂದವಾಡಾ ಮತ್ತು ಅಕ್ಕಪಕ್ಕದ ಪ್ರದೇಶದಲ್ಲಿ ಮತ್ತೆ ಮತ್ತೆ ಮತಾಂತರದ ಘಟನೆ ನಡೆಯುತ್ತಿರುತ್ತವೆ ಎಂದು ಹೇಳಿದರು. |