ಅದು ಕುತುಬಮಿನಾರವಲ್ಲ, ಮೇರುಸ್ತಂಭ ಅಂದರೆ, ವರಾಹಮಿಹೀರರ ಅದ್ಭುತ ವೇಧಶಾಲೆ !

ಕುತುಬ್‌ಮಿನಾರ್‌

ದೆಹಲಿಯ ಸಾಕೆತ ನ್ಯಾಯಾಲಯದಲ್ಲಿ ಕುತುಬ್‌ಮಿನಾರ್‌ದ ಒಡೆತನದದ ಬಗ್ಗೆ ಒಂದು ಅರ್ಜಿಯನ್ನು ಸಲ್ಲಿಸಲಾಗಿದೆ. ವಾಸ್ತವದಲ್ಲಿ ಅನೇಕ ಬಾರಿ ಮುಸಲ್ಮಾನರು ಕುತುಬ್‌ಮಿನಾರ್‌ದ ಬಗ್ಗೆ ತಮ್ಮ ಒಡೆತನವನ್ನು ಹೇಳಿದ್ದಾರೆ; ಆದರೆ ಪ್ರತ್ಯಕ್ಷದಲ್ಲಿ ಕುತುಬ್‌ಮಿನಾರ್‌ನ್ನು ಯಾರು ಕಟ್ಟಿದರು ? ಅದು ನಿರ್ದಿಷ್ಟವಾಗಿ ಏನಾಗಿದೆ ? ಈ ಬಗೆಗಿನ ಮಾಹಿತಿಯ ವಿಚಾರವಿನಮಯ ಮಾಡುವ ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ.

ಆಚಾರ್ಯ ವರಾಹಮಿಹೀರರು ಅನೇಕ ವೇಧಯಂತ್ರ ಮತ್ತು ವೇಧಶಾಲೆಗಳನ್ನು ನಿರ್ಮಿಸಿದ್ದರು. ದೆಹಲಿಯ ಮಿಹರೌಲಿಯಲ್ಲಿರುವ ಮೇರುಸ್ತಂಭವು ವರಾಹಮಿಹೀರರ ಅದ್ಭುತ ವೇಧಾಲಯವಾಗಿತ್ತು ಎಂಬುದನ್ನು ಸಿದ್ಧ ಪಡಿಸಲು ಪ್ರಯತ್ನಿಸುತ್ತಿದ್ದೇವೆ. ಹಿಂದಿನ ಸಂಚಿಕೆಯಲ್ಲಿ ಮುದ್ರಣವಾದ ಲೇಖನದಲ್ಲಿ ಕ್ರೂರಕರ್ಮಿ ಕುತುಬುದ್ದೀನನು ಹಿಂದೂಗಳ ವಂಶವಿಚ್ಛೇದ ಮಾಡುವುದು ಮತ್ತು ದೇವಸ್ಥಾನಗಳನ್ನು ನಾಶ ಮಾಡಿ ಅಲ್ಲಿ ಮಸೀದಿಗಳನ್ನು ಕಟ್ಟುವುದು ಓದಿದೆವು. ಇಂದು ಅದರ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

ಜ್ಯೋತಿಷಿ ಡಾ. ಜಿತೇಂದ್ರ ವ್ಯಾಸ

೯. ಕ್ರಿ.ಶ ೧೪ ನೇ ಶತಮಾನದ ಅಂತ್ಯದ ವರೆಗೆ, ಅಂದರೆ ಫಿರೋಜಶಾಹ್ ತುಘಲಕ್‌ನ ಕಾಲದವರೆಗೆ ಕುತುಬ್‌ಮಿನಾರ್‌ನ್ನು ಹಿಂದೂಗಳ ಕಟ್ಟಡವೆಂದು ಪರಿಗಣಿಸಲಾಗುತ್ತಿತ್ತು

ಭಾರತ ಸರಕಾರದ ಪುರಾತತ್ತ್ವ ವಿಭಾಗದ ಈ ಒಂದು ಉದಾಹರಣೆಯು ಪೂರ್ಣ ಆಶ್ಚರ್ಯಕರ ಮತ್ತು ಮಹತ್ವಪೂರ್ಣವಾಗಿದೆ; ಏಕೆಂದರೆ ಈ ಶೋಧಪತ್ರವನ್ನು ಮುಂದೆ ಒಯ್ಯಲು ಅದು ದೀಪಸ್ತಂಭದ ಕಾರ್ಯವನ್ನು ಮಾಡುತ್ತಿದೆ. ಕುತುಬ್‌ಮಿನಾರ್‌ನ ಮೂರನೇಯ ಮಹಡಿಯ ಮೇಲೆ ಒಂದು ಅಭಿಲೇಖ ಕಂಡು ಬಂದಿದೆ. ಅದರಲಿ ‘ಪಿರಥೀ ನಿರಪ: ಸ್ತಮ್ಭ, ಮಲಿಕದೀನ ಕೀರತಿಸ್ತಮ್ಭ ಸುಲತ್ರಾಣ ಉಲ್ಲಾಉದ್ದೀನ ಕೀ ಜಯ ಸ್ತಮ್ಭ |’, ಎಂದು ಬರೆಯಲಾಗಿದೆ.

ಇಲ್ಲಿ ‘ಪಿರಥೀ ನಿರಪ: ಸ್ತಂಭ’ದಿಂದ ಕೇವಲ ಮಹಾರಾಜ ಪೃಥ್ವಿರಾಜ ಚೌಹಾನರ ಉಲ್ಲೇಖ ಬೇಕು. ಅವರ ಆಡಳಿತಕಾಲವು ೧೧೭೫ ರಿಂದ ೧೧೯೩ ರ ವರೆಗೆ ಇತ್ತು. ಈ ದಾಖಲೆಯು ಎಲ್ಲ ಮುಸಲ್ಮಾನ್ ಆಡಳಿತಗಾರರ ನಿರ್ಮಿತಿಯ ಸಂದರ್ಭದಲ್ಲಿ ಎಲ್ಲ ಹಕ್ಕುಗಳನ್ನು ನಿರಾಕರಿಸುತ್ತದೆ. ಸುಪ್ರಸಿದ್ಧ ಪುರಾತತ್ತ್ವಜ್ಞಾನಿ ಮತ್ತು ನ್ಯಾಯಾಧೀಶರಾದ ಆರ್.ವಿ. ಕಂವರ ಸೇನರ ಅಭಿಪ್ರಾಯಕ್ಕನುಸಾರ ಹಿಂದೂ ವಾಸ್ತುಶಿಲ್ಪ ಕಲೆಯ ಅನುಪಮ ಉದಾಹರಣೆಯ ‘ಜಯ ಸ್ತಂಭವನ್ನು ಚೌಹಾನ ವಂಶದ ರಾಜನಾದ ಸಮ್ರಾಟ ವಿಶಾಲದೇವ ವಿಗ್ರಹರಾಜನು ತನ್ನ ದೆಹಲಿಯ ವಿಜಯದ ಸಮಯದಲ್ಲಿ ನಿರ್ಮಿಸಿದ್ದನು. ಕುತುಬ್‌ಮಿನಾರ್‌ನ ೫ ನೇ ಮಹಡಿಯ ಪ್ರವೇಶದ್ವಾರದ ಮೇಲೆ ಒಂದು ಅಭಿಲೇಖ ಕಂಡು ಬರುತ್ತದೆ. ಅದು ಎಲ್ಲ ಮುಸಲ್ಮಾನ್ ಆಡಳಿತಗಾರರ ಸುಳ್ಳು ಹಕ್ಕನ್ನು ಖಂಡಿಸುತ್ತಾ ಈ ಕಟ್ಟಡದ ನಿಜವಾದ ಹೆಸರನ್ನೂ ಸಹ ಹೇಳುತ್ತದೆ. ಆದುದರಿಂದ ಅದು ಅತ್ಯಧಿಕ ಮಹತ್ವದ್ದಾಗಿದೆ. ಈ ಅಭಿಲೇಖವನ್ನು (ಬರಹ) ಇಂದಿಗೂ ಸ್ಪಷ್ಟವಾಗಿ ಓದಬಹುದು.

“ಓ ಸ್ವಸ್ತಿ ಶ್ರೀ ಸುರಿತ್ರಾಣ ಫೇರೋಜಶಾಹಿ ವಿಜಯರಾತೆ ಸಂವತ್ ೧೪೨೫ ವರಿಷ್ಠ ಫಾಲ್ಗುಣ ಸುದಿ ೫ ಶುಕ್ರದಿನೇ ಮುಕರೋ ಜೀರ್ಣೋದ್ಧಾರ ಕೃತಂ ಶ್ರೀ ವಿಶ್ವಕರ್ಮಾಪ್ರಾಸಾದೇ ಸುತ್ರಧಾರೀ ಚಾಹಡದೇವಪಾಲ ಸುತದೋಹಿತ್ರ ಸುತ್ರಪಾಲ: ಪ್ರತಿಷ್ಠಾ ನಿಷ್ಪಾತಿತ ಉದೈಗಜ ೯೨ ಈ ಲೇಖನದಲ್ಲಿ ಕುತುಬ್‌ಮಿನಾರ್ ಸ್ಥಂಭವನ್ನು ‘ವಿಶ್ವಕರ್ಮಾ ಪ್ರಾಸಾದ’ ಎಂದು ಸಂಬೋಧಿಸಲಾಗಿದೆ. ಇದರಲ್ಲಿ ಮುಂದಿನ ವಿಷಯವು ಸ್ಪಷ್ಟವಾಗಿದೆ, ಕ್ರಿ.ಶ ೧೪ ನೇ ಶತಮಾತನದ ಅಂತ್ಯದವರೆಗೆ, ಅಂದರೆ ಫಿರೋಜಶಾಹ್ ತುಘಲಕ್‌ನ ಕಾಲದವರೆಗೆ ಈ ವಿಶಾಲ ಕಟ್ಟಡವನ್ನು ಮುಸಲ್ಮಾನರ ಕೃತಿಯೆಂದು ತಿಳಿಯುತ್ತಿರಲಿಲ್ಲ, ಅದನ್ನು ಹಿಂದೂಗಳ ಕಟ್ಟಡವೆಂದು ತಿಳಿಯಲಾಗುತ್ತಿತ್ತು. ಚಾಹಡದೇವಪಾಲನ ಪುತ್ರನಾದ ಕೆದೊಹಿತ್ರನು ೧೪ ಫೆಬ್ರುವರಿ ೧೩೭೦ ಈ ದಿನದಂದು ಈ ಕಟ್ಟಡದ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನೆಯನ್ನು ಮಾಡಿದನು.

೧೦. ಕುತುಬ್‌ಮಿನಾರ್‌ದ ಮೇರುಪೃಷ್ಠಿಯ ಅಥವಾ ಶ್ರೀಯಂತ್ರದಂತಹ ಕಮಲದ ಪಕಳೆಗಳ ಶೋಭಿಸುವಂತಹ ನಿರ್ಮಾಣವು ಹಿಂದೂ ವಾಸ್ತುಕಲೆಯ ಅನುಪಮ ಉದಾಹರಣೆಯಾಗಿದೆ !

ವಾಸ್ತುಕಲೆಯ ದೃಷ್ಟಿಯಿಂದ ಒಂದು ಪಕ್ಷಿಯಂತೆ ಕುತುಬ್‌ಮಿನಾರ್‌ನ ಕೊನೆಯ ಮಹಡಿಯ ಮೇಲೆ ಕಬ್ಬಿಣದ ಕಂಬದ ಮೇಲೆ ಏರಿ ಕೆಳಗೆ ನೋಡಿದರೆ ಕುತುಬ್‌ ಮಿನಾರ್‌ನ ನಿರ್ಮಿತಿಯು ಸ್ಪಷ್ಟವಾಗಿ ಮೇರುಪೃಷ್ಟಿಯ ಅಥವಾ ಶ್ರೀಯಂತ್ರದಂತಹ ಕಮಲದ ಪಕಳೆಗಳಂತೆ ಶೋಭಿಸುತ್ತದೆ. ಎಲ್ಲಕ್ಕಿಂತ ಕೆಳಗೆ ೧೬ ಗಜ ಆಳ ಮತ್ತು ೧೬ ಗಜ ಅಗಲದ ಸುತ್ತಳತೆ ಇರುವ ಕಮಲಹೃತ್ಕರ್ಣ ಇದೆ. ನಂತರ ಒಂದು ಕಮಲದಲ್ಲಿ ಎರಡನೇಯ, ಮೂರನೇಯ, ನಾಲ್ಕನೇಯ ಮತ್ತು ಐದನೇ ಕಮಲಗಳು ಹೊರಗೆ ಬರುವುದು ಕಾಣಿಸುತ್ತದೆ. ಇದು ಹಿಂದೂ ವಾಸ್ತುಶಿಲ್ಪದ ಅತ್ಯಮೂಲ್ಯ ಉದಾಹರಣೆಯಾಗಿದೆ. ಮಿನಾರ್‌ನ ೧೨ ದಿಕ್ಕುಗಳಿಗೆ ೧೨ ರಾಶಿಗಳು ಮತ್ತು ೭ ಖಂಡಗಳು ೭ ಸ್ವರ್ಗಗಳನ್ನು ತೋರಿಸುತ್ತವೆ. ಕೆಲವು ವಿದ್ವಾನರು ಭಾಗವತ್ ಮಹಾಪುರಾಣಕ್ಕನುಸಾರ ಈ ಕುತುಬ್‌ಮಿನಾರವನ್ನು ಮೇರುಪರ್ವತದ ಮಾದರಿಯಂತೆ ನಿರ್ಮಿಸಿದ್ದಾರೆ ಮತ್ತು ಶ್ಲೋಕದಲ್ಲಿ ‘ಯೋಜನ’ಯ ವರ್ಣನೆಯನ್ನು ‘ಗಜ’ಗಳ ಅಳತೆಯಲ್ಲಿ ಅಳೆಯಲಾಗಿದೆ.

೧೧. ಮುಸಲ್ಮಾನರ ಸ್ವರೂಪವನ್ನು ನೀಡಲು ಮೇರುಸ್ತಂಭದ ನಾಲ್ಕೂ ಬದಿಗಳಲ್ಲಿ ಕುರಾನದ ಆಯತೆಗಳನ್ನು ಕೊರೆಯುವುದು

ಅರಬಿ ಭಾಷೆಯಲ್ಲಿ ಧ್ರುವಕ್ಕೆ ‘ಕುತುಬ್’ ಮತ್ತು ಸ್ತಂಭಕ್ಕೆ ‘ಮಿನಾರ್’ ಎಂದು ಹೇಳುತ್ತಾರೆ. ಸಂಸ್ಕೃತ ಭಾಷೆಯಲ್ಲಿ ‘ಧ್ರುವ’ಕ್ಕೆ ‘ಮೇರು’ ಎಂದೂ ಹೇಳುತ್ತಾರೆ. ಕೊನೆಗೆ ಕುತುಬ್‌ಮಿನಾರ್ ಇದು ಮೇರುಸ್ತಂಭದ ಅರಬಿ ಅನುವಾದವಾಗಿದೆ. ಇದಕ್ಕೆ ಮುಸಲ್ಮಾನರ ಕೃತಿಯೆಂದು ಸಿದ್ಧಮಾಡಲು ಮುಸಲ್ಮಾನರು ಮೇರುಸ್ತಂಭದ ನಾಲ್ಕೂ ಬದಿಗಳಲ್ಲಿ ಕುರಾನನಲ್ಲಿನ ಆಯತೆಗಳನ್ನು ಮತ್ತು ಇತರ ಮುಸಲ್ಮಾನ ಸುಲ್ತಾನರ ಸುಳ್ಳು ಪ್ರಶಂಸೆಗಳನ್ನು ಕೊರೆದರು. ಮುಸಲ್ಮಾನ ಇತಿಹಾಸಕಾರ ಸರ ಸೈಯ್ಯದ್ ಇವನು ಪ್ರಾಮಾಣಿಕತನದಿಂದ ‘ಅಸರ್-ಉಸ್-ಸಂದ್ದಿ’ಯಲ್ಲಿ ‘ಈ ಮಿನಾರ್‌ವು ಮುಸಲ್ಮಾನರ ನಿರ್ಮಿತಿಯಾಗಿರದೇ ರಾಜಪೂತರ ಕಾಲದಲ್ಲಿ ಕಟ್ಟಲಾದ ಒಂದು ಹಿಂದೂ ಭವನವಾಗಿದೆ ಎಂದು ಬರೆದಿದ್ದಾನೆ. ಹಿಂದೂ ವಾಸ್ತುಕಲೆಗನುಸಾರ ಪ್ರತಿಯೊಂದು ದೇವಸ್ಥಾನದ ಪ್ರವೇಶದ್ವಾರವು ಪೂರ್ವಕ್ಕಿರುತ್ತದೆ. ಯಾವ ದಿಶೆಯಲ್ಲಿ ಸೂರ್ಯನು ಉದಯಿಸುತ್ತಾನೆಯೋ, ಅದೇ ದಿಶೆಯಲ್ಲಿ ದೇವತೆಗಳ ಮೂರ್ತಿಗಳಿರುತ್ತವೆ. ಮುಸಲ್ಮಾನ್‌ರ ವಾಸ್ತುಶಿಲ್ಪದ ಕಲೆಗನುಸಾರ ಮಸೀದಿಯ ಪ್ರವೇಶದ್ವಾರವು ಪಶ್ಚಿಮಾಭಿಮುಖವಾಗಿರುತ್ತದೆ, ಹಾಗೆಯೇ ಓರ್ವ ಮುಸಲ್ಮಾನ್ ಕಾಬಾದ ಕಡೆಗೆ (ಪಶ್ಚಿಮ ದಿಶೆಗೆ) ಮುಖ ಮಾಡಿಯೇ ನಮಾಜಪಠಣವನ್ನು ಮಾಡುತ್ತಾನೆ ಇದು ಇಸ್ಲಾಮಿಕ್ ವಾಸ್ತುಕಲೆಯ ಅನಿವಾರ್ಯ ಬಂಧನವಾಗಿದೆ; ಆದರೆ ಕುತುಬ್‌ಮಿನಾರ್‌ವು ಪಶ್ಚಿಮಾಭಿಮುಖವಾಗಿಲ್ಲ.

೧೨. ವೇಧಶಾಲೆ ಮತ್ತು ಛಾಯಾಪ್ರಮಾಣ ಇವುಗಳಿಗನುಸಾರ ಮೇರುಸ್ತಂಭವಿರುವುದು ಸಿದ್ಧವಾಗುವುದು

ಇಲ್ಲಿಯವರೆಗೆ ಅದು ಇಸ್ಲಾಮಿಕ್ ಕಟ್ಟಡವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಸ್ಥಳದಲ್ಲಿ ಉತ್ಕೃಷ್ಟ ದೇವಸ್ಥಾನದ ಲಕ್ಷಣಗಳು ಕಾಣಿಸುತ್ತವೆ. ರಾತ್ರಿಯಲ್ಲಿ ದಿಶೆಯ ಬೋಧವನ್ನು ಪಡೆಯಲು, ಸಪ್ತರ್ಷಿಗಳಿಗೆ ನೋಡಲು, ಗ್ರಹ ಮತ್ತು ಉಚಿತ ನಿಶ್ಚಿತಕಾಲವನ್ನು ಯೋಗ್ಯ ರೀತಿಯಲ್ಲಿ ತಿಳಿದುಕೊಳ್ಳಲು ನಮಗೆ ಮೊತ್ತಮೊದಲು ಧ್ರುವ ನಕ್ಷತ್ರದ ಆಶ್ರಯವನ್ನು ಪಡೆಯಬೇಕಾಗುತ್ತದೆ, ಇಂತಹ ಸ್ಥಿತಿಯಲ್ಲಿ ಜ್ಯೋತಿಷ್ಯ ನಿಯಮಿಗಳಿಗನುಸಾರ ಎಲ್ಲ ವೇಧಶಾಲೆಗಳ ಪ್ರವೇಶದ್ವಾರಗಳು ಮತ್ತು ಕಿಂಡಿಗಳು ಉತ್ತರಾಭಿಮುಖವಾಗಿರುತ್ತವೆ. ಈ ಮಿನಾರ್‌ವೂ ಸಹ ಉತ್ತರಾಭಿಮುಖವಾಗಿದೆ, ಅಂದರೆ ಇದು ಒಂದು ವೇಧಶಾಲೆಯಾಗಿದೆ.

ಜ್ಯೋತಿಷ್ಯ ಸಿದ್ಧಾಂತಕ್ಕನುಸಾರ ಪ್ರಾಚೀನ ಜಂತರಮಂತರ್ ಮತ್ತು ದೆಹಲಿಯಲ್ಲಿನ ಕರ್ಮ-ಕ್ಲಯ ಯಂತ್ರದಂತೆ ಈ ಮಿನಾರ್‌ದ ಒಲವು ದಕ್ಷಿಣದ ಕಡೆಗಿದೆ. ಇದರ ಮುಖ್ಯ ಕಾರಣವೆಂದರೆ, ವರ್ಷದ ಅತ್ಯಂತ ದೊಡ್ಡ ದಿನವಾಗಿರುವ ಜೂನ್ ೨೧ ರಂದು ಈ ಬೃಹತ್ ಮಿನಾರ್‌ದ ನೆರಳು ಮಧ್ಯಾಹ್ನ ೧೨ ಗಂಟೆಗೆ ನೆಲದ ಮೇಲೆ ಬೀಳುವುದಿಲ್ಲ. ತಜ್ಞರು ಇದರ ಬಗ್ಗೆ ಸಂಶೋಧನೆಯನ್ನು ಮಾಡಿದಾಗ ೨೧ ಜೂನ್ ೧೯೭೦ ಈ ದಿನದಂದು ವಿವಿಧ ಪ್ರಖ್ಯಾತ ಪರ್ತಕರ್ತರು ಮತ್ತು ಜ್ಯೋತಿಷ್ಯ ತಜ್ಞರ ಒಂದು ಸಮೂಹವು ವ್ಯಾವಹಾರಿಕ ದೃಷ್ಟಿಯಿಂದ ಇದರ ಪರೀಕ್ಷಣೆಯನ್ನು ಮಾಡಿದಾಗ ಅದರಲ್ಲಿ ತಥ್ಯವಿರುವುದು ಗಮನಕ್ಕೆ ಬಂದಿತು. ಈ ವಾರ್ತೆಯು ಅನೇಕ ವಾರ್ತಾಪತ್ರಿಕೆಗಳಲ್ಲಿ ಪ್ರಕಟವಾಗಿದೆ.

೨೧ ಜೂನ್ ಈ ದಿನದಂದು ಪೃಥ್ವಿಯ ಮೇಲೆ ಅದರ ನೆರಳು ಬೀಳದಿರುವುಕ್ಕೆ ಕಾರಣವೇನೆಂದರೆ, ೨೧ ಜೂನ್ ರಂದು ಸೂರ್ಯನು ಮಧ್ಯರೇಖೆಯಿಂದ ೨೩-೩೦ ಡಿಗ್ರಿ ಉತ್ತರಕ್ಕೆ ಇರುತ್ತಾನೆ. ಮೇರುಸ್ತಂಭದ ಅಕ್ಷಾಂಶ ೨೮-೩೦-೩೮ ಡಿಗ್ರಿ ಇದೆ. ಮಧ್ಯರೇಖೆಯ ನಿರ್ಮಾಣಕಾಲದಲ್ಲಿ ಅದು ೫-೧-೨೮ ಡಿಗ್ರಿ ದಕ್ಷಿಣದ ಕಡೆಗೆ ವಾಲಿದೆ ಎಂದು ಹೇಳಲಾಗಿದೆ. ಆದುದರಿಂದ ಅದರ ನೆರಳು ಆ ದಿನ ಪೃಥ್ವಿಯ ಮೇಲೆ ಬೀಳುವುದಿಲ್ಲ. ಎಲ್ಲಕ್ಕಿಂತ ಸಣ್ಣ ದಿನವೆಂದರೆ ೨೩ ಡಿಸೆಂಬರ್, ಈ ದಿನದಂದು ಈ ಮಿನಾರ್‌ದ ನೆರಳು ಮೂರು ಪಟ್ಟಿನಷ್ಟು ಅತ್ಯಧಿಕ ಉದ್ದ ಕಾಣಿಸುತ್ತದೆ. ಈ ದಿನ ಈ ನೆರಳಿನ ಅಳತೆಯನ್ನು ೨೮೦ ಅಡಿ ಎಂದು ನೋಂದಾಯಿಸಲಾಗಿದೆ. ಈ ಪುರಾವೆಯಿಂದ, ಕುತುಬ್ ಮಿನಾರ್ ಇದು ಪ್ರಾಚೀನ ‘ಪಂಚಸಿದ್ಧಂತಿಕಾದ ಶೈಲಿಯಲ್ಲಿ ನಿರ್ಮಿಸಿದ ವರಾಹಮಿಹೀರರ ವೇಧಶಾಲೆಯೇ ಆಗಿದೆ ಮತ್ತು ಬೇರೆ ಯಾವುದೂ ಇಲ್ಲ’ವೆಂದು ಸ್ಪಷ್ಟವಾಗುತ್ತದೆ.

೧೩. ಮೇರುಸ್ತಂಭದ (ತಥಾಕಥಿತ ಕುತುಬ್ ಮಿನಾರ್‌ನ) ಜೊತೆಗೆ ವರಾಹಮಿಹೀರರ ವಿವಿಧ ರೀತಿಯ ಸಂಬಂಧವಿರುವುದು

೧೩ ಅ. ಮಿಹರೌಲಿ ಅಂದರೆ ಆಚಾರ್ಯ ವರಾಹಮಿಹೀರರಿರುವ ಸ್ಥಾನ ! : ಮೇರುಸ್ತಂಭವು ಮಿಹರೌಲಿಯಲ್ಲಿದೆ. ಮಿಹರೌಲಿಯು ಅಪಭ್ರಂಶ ಶಬ್ದವಾಗಿದೆ. ಶುದ್ಧ ಶಬ್ದ, ‘ಮಿಹಿರ+ಆಲಯ = ಮಿಹಿರಾಲಯ’ ಆಗಿದೆ. ಅಂದರೆ ಆಚಾರ್ಯ ವರಾಹಮಿಹೀರರಿರುವ ಸ್ಥಾನಕ್ಕೆ ‘ಮಿಹಿರಾಲಯ’ ಎಂದು ಹೇಳಲಾಗಿದೆ. ಡಾ. ಡಿ.ಎಸ್. ತ್ರಿದೇವಿಯವರ ವ್ಯಾಖ್ಯೆಯು ಇದಕ್ಕಿಂತ ಬೇರೆಯೇ ಆಗಿದೆ. ಅವರು ‘ಮಿಹಿರಾವಲಿ’ಯನ್ನು ಶುದ್ಧ ಶಬ್ದ ಎಂದು ನಂಬುತ್ತಾರೆ. ಮಿಹೀರದ ಅರ್ಥ ಸೂರ್ಯ ಮತ್ತು ಅವಲಿಯ ಅರ್ಥ ಬಣ್ಣ ಎಂದಿದೆ. ಯಾವ ರೀತಿ ದೀಪ+ಅವಲಿ = ದೀಪಾವಳಿ ಎಂದಾಗುತ್ತದೆಯೋ ಅದರಂತೆ ಮಿಹಿರಾವಲಿಯ ಅರ್ಥವಾಗುತ್ತದೆ, ‘ಸೂರ್ಯಾದಿ ನಕ್ಷತ್ರಗಳನ್ನು ನೋಡುವ ವೇಧಶಾಲೆ (ವೀಕ್ಷಣಾಲಯ) ಮತ್ತು ಇಲ್ಲಿ ಇದೇ ಅರ್ಥವು ಅಪೇಕ್ಷಿತವಾಗಿದೆ. ಇದರಲ್ಲಿ ಇನ್ನೂ ಆಳಕ್ಕೆ ಹೋದರೆ ವಿಶ್ಲೇಷಕರಾದ ಭರತ ಇವರಿಗನುಸಾರ ಸೂರ್ಯನಂತೆ ತೇಜಸ್ವಿ ಬುದ್ಧಿ ಇರುವ ವ್ಯಕ್ತಿಯನ್ನು ‘ಮಿಹೀರ’ ಎಂದು ಕರೆಯುತ್ತಾರೆ. ಜಗತ್ತಿನಲ್ಲಿನ ಅದ್ಭುತ ಹಿಂದೂ ವಾಸ್ತುಶಿಲ್ಪದಿಂದ ತುಂಬಿ ತುಳುಕುತ್ತಿರುವ ಈ ಗೌರವಶಾಲಿ ವೇಧಶಾಲೆಯ ನಿರ್ಮಿತಿಯ ಹಿಂದೆಯೂ ಜಗತ್ತಿನಲ್ಲಿನ ಅದ್ವಿತೀಯ ಮತ್ತು ಅಸಾಮಾನ್ಯ ಮೆದುಳು ಇದ್ದಿರಬಹುದು.

೧೩ ಆ. ಮೇರುಸ್ತಂಭವನ್ನು ವರಾಹಮಿಹೀರರ ಹೊರತಾಗಿ ಇತರ ಯಾರೂ ನಿರ್ಮಿಸದಿರುವುದು : ೨೧ ಜೂನ್ ೧೯೮೪ ರಂದು ನನ್ನ ಗುರುದೇವರಾದ ಡಾ. ಭೋಜರಾಜ ಮತ್ತು ಅವರಷ್ಟೇ ವಿದ್ವಾನ ಸಹಕಾರಿ ಪಂಡಿತರಾದ ಜಗನ್ನಾಥ ಭಸೀನ, ಪಂಡಿತ ಜಗನ್ನಾಥ ಭಾರದ್ವಾಜ, ಪಂಡಿತ ಸತ್ಯವೀರ ಶಾಸ್ತ್ರೀ ಮತ್ತು ಮಹಾನ್ ವೀರ ಥುಲ್ಲಿ ಇವರೊಂದಿಗೆ ಕುತುಬ್‌ಮಿನಾರ್‌ದ ವೀಕ್ಷಣೆಯನ್ನು ಮಾಡಲು ಹೋಗಿದ್ದರು. ಆ ಎಲ್ಲರಿಗೂ ಮಿನಾರ್‌ದ ನಾಲ್ಕೂ ಬದಿಗಳಲ್ಲಿ ಒಣಗಿದ ಕೆರೆಯಂತಹ ವಿಶಾಲ ಅಂಗಳಗಳು ಕಾಣಿಸಿದವು. ವಾಸ್ತವದಲ್ಲಿ ಒಂದು ಅತ್ಯಂತ ದೊಡ್ಡ ಕೆರೆಯ ಮಧ್ಯದಲ್ಲಿ ಈ ಸ್ತಂಭವನ್ನು ನಿರ್ಮಿಸಲಾಗಿತ್ತು. ಇದರಿಂದ ರಾತ್ರಿ ಕೆರೆಯ ನಿರ್ಮಲ ನೀರಿನಲ್ಲಿ ಗ್ರಹ-ನಕ್ಷತ್ರಗಳ ಸ್ಪಷ್ಟ ಪ್ರತಿಬಿಂಬಗಳು ಕಾಣಿಸಬಹುದು, ಹಾಗೆಯೇ ದಿನದಲ್ಲಿ ಸೂರ್ಯನ ಪ್ರತಿಬಿಂಬದ ಆಧಾರದಲ್ಲಿ ಕಣ್ಣುಗಳ ಮೇಲೆ ಒತ್ತಡವನ್ನು ಹಾಕದೇ ಸೂರ್ಯನನ್ನು ವೀಕ್ಷಿಸಬಹುದು. ಖಂಡಿತವಾಗಿಯೂ ಈ ನಿಯೋಜನೆ ಮಿಹಿರಾಚಾರ್ಯರ ಹೊರತಾಗಿ ಬೇರೆ ಯಾರದ್ದೂ ಆಗಲು ಸಾಧ್ಯವೇ ಇಲ್ಲ. ಪಂಡಿತ ಮಾಯಾರಾಮ ಇವರು, ಈ ವೇಧಶಾಲೆ ವರಾಹಮಿಹೀರರದ್ದೇ ಆಗಿತ್ತು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

೧೩ ಇ. ಮೇರುಸ್ತಂಭವೇ ವರಾಹಮಿಹೀರರ ವಿಶ್ವವಿದ್ಯಾಲಯ ಮತ್ತು ವೇಧಶಾಲೆ  :  ಉದಯಾಸ್ತದ ನಿಶ್ಚಿತ ಸಮಯವನ್ನು ನೋಡಲು, ಸೂರ್ಯ-ಚಂದ್ರಾದಿ ಗ್ರಹಗಳ ನಿರ್ಧಿಷ್ಟ ಉದಯ-ಅಸ್ತಕಾಲದ ಸಮಯಗಳ ಗಣನೆಗಾಗಿ, ಗ್ರಹಗಳ ಯುತಿ,  ಪ್ರತಿ-ಯುತಿ, ಶ್ರಂಗೊನ್ನತಿ ಮತ್ತು ಪರಸ್ಪರರ ಯುದ್ಧಗಳನ್ನು ನೋಡಲು ಆ ನಗರದ ಎಲ್ಲಕ್ಕಿಂತ ಎತ್ತರದ ಬೈಲು ಪ್ರದೇಶಕ್ಕೆ ಹೋಗಿ ನೋಡಬೇಕಾಗುತ್ತದೆ. ಕುತುಬಮಿನಾರ್‌ದ ಎತ್ತರ ೧೦೬ ಅಡಿ ಇರುವುದರ ಕಾರಣ ಇದೇ ಆಗಿದೆ. ಒಂದು ವೇಳೆ ಇದನ್ನು ಕುತೂಹಲಕ್ಕಾಗಿ ಅಥವಾ ವಿಲಾಸಕ್ಕೆ (ಸುಖಕ್ಕೆ) ನಿರ್ಮಿಸಲಾಗಿದ್ದರೆ ಖಂಡಿತವಾಗಿಯೂ ಈ ರೀತಿಯ ಅನುಕೂಲಕ್ಕಾಗಿ ಮತ್ತು ಆನಂದಕ್ಕಾಗಿ ಒಂದು ಸ್ಥಾನ ಇರುತ್ತಿತ್ತು, ಆದರೆ ಅಲ್ಲಿ ಹಾಗೇನು ಇಲ್ಲ. ಇದರ ಅರ್ಥ ಈ ಮೇರುಸ್ತಂಭವೇ ವರಾಹಮಿಹೀರರ ವಿಶ್ವವಿದ್ಯಾಲಯ ಮತ್ತು ವೇಧಶಾಲೆಯಾಗಿದೆ. ಬೃಹತ್ ಸಂಹಿತೆಯಲ್ಲಿನ ವ್ರಜಲೇಪಾಧ್ಯಾಯದ ೫೭ ರಲ್ಲಿನ ಶ್ಲೋಕ ೧ ರಿಂದ ೮ ರ ಅಂತರ್ಗತ ಧಾತುಸಂಘ ಮತ್ತು ವ್ರಜಲೇಪದ ವಿಧಿಯನ್ನು ಹೇಳಲಾಗಿದೆ, ಅದರಲ್ಲಿ ದೇವಪ್ರಾಸಾದ, ಪ್ರತಿಮೆ, ಕಂಬ ಮತ್ತು ಬಾವಿಗಳನ್ನು ೧ ಕೋಟಿ ವರ್ಷಗಳವರೆಗೆ ಹಾಳಾಗಲು ಬಿಡುತ್ತಿರಲಿಲ್ಲ. ಬಹುತೇಕ ಇದೇ ತಂತ್ರಜ್ಞಾನವನ್ನು (ಗರುಡಧ್ವಜ) ಕಬ್ಬಿಣದ ಸ್ತಂಭದಲ್ಲಿ ಉಪಯೋಗಿಸಿರಬಹುದು.

೧೩ ಈ. ಮೇರುಸ್ತಂಭದ ನಿರ್ಮಿತಿಯಲ್ಲಿ ವರಾಹಮಿಹೀರರು ವಿವಿಧ ತಂತ್ರಗಳ ಉಪಯೋಗವನ್ನು ಮಾಡುವುದು : ಪಂಚಸಿದ್ಧಾಂತಿಕಾ ಅಧ್ಯಾಯ ೧೩ ರಲ್ಲಿನ ಶ್ಲೋಕ ೧೦ ಮತ್ತು ೧೧ ರಲ್ಲಿ ವರ್ಷದ ೬ ದೊಡ್ಡ ದಿನಗಳಲ್ಲಿ ಮಧ್ಯಾಹ್ನ ೧೨ ಗಂಟೆಗೆ ಸೂರ್ಯನು ಕ್ಷಿತಿಜದ ಸರ್ವೋತ್ತಮ ಎತ್ತರದಲ್ಲಿರುವನು, ಆಗ ಎತ್ತರವಿರುವ ಕಟ್ಟಡಗಳ ನೆರಳು ಪೃಥ್ವಿಯ ಮೇಲೆ ಬೀಳುವುದಿಲ್ಲ. ಅದರಂತೆಯೇ ಅವು ೫ ಅಂಶ ದಕ್ಷಿಣದ ಕಡೆಗೆ ವಾಲಿರುತ್ತವೆ. ಕಟ್ಟಡಗಳ ನೆರಳಿನಿಂದ ವರ್ಷದ ಎಲ್ಲಕ್ಕಿಂತ ದೊಡ್ಡ ದಿನದ ಅಧ್ಯಯನವನ್ನು ವ್ಯಾವಹಾರಿಕ ಪರೀಕ್ಷಣೆಯ ಆಧಾರದಲ್ಲಿ ಮಾಡಲಾಗುತ್ತಿತ್ತು. ಈ ಅಂಶಗಳ ವರ್ಣನೆ ವರಾಹಮಿಹೀರರನ್ನು ಬಿಟ್ಟು ಯಾವುದೇ ಪ್ರಾಚೀನ ಗ್ರಂಥದಲ್ಲಿ, ಉದಾ ನಾರದಸಂಹಿತಾ, ಗರ್ಗಸಂಹಿತಾ, ಬೃಹತ್ ಪರಾಶರ, ಹೋರಾಶಾಸ್ತ್ರ, ಭೃಗುಸಂಹಿತಾ, ಆರ್ಯಭಟ್ಟಿಯ, ಸತ್ಯಜಾತಕಮ್, ಬೃಹದ್ಯವನಜಾತಕ ಇತ್ಯಾದಿಗಳಲ್ಲಿ ದೊರಕು ವುದಿಲ್ಲ. ವರಾಹಮಿಹೀರರು ಈ ತಂತ್ರದ ಬಳಕೆಯನ್ನು ಮೇರು ಸ್ತಂಭದ ನಿರ್ಮಿತಿಯಲ್ಲಿ ಸಂಪೂರ್ಣ ಮಾಡಿದ್ದಾರೆ ಇದು ಪ್ರತ್ಯಕ್ಷ ಮಾಡಿದ ಪರೀಕ್ಷಣೆಗಳಿಂದ ಸಿದ್ದವಾಗಿದೆ.

೧೪. ಮಿಹರೌಲಿಯಲ್ಲಿರುವ ಮೇರುಸ್ತಂಭವೇ ಈ ವರಾಹಮಿಹೀರರ ವೇಧಶಾಲೆ ಆಗಿದೆ

‘ಪಂಚಸಿದ್ಧಾಂತಿಕಾದಲ್ಲಿ ವರಾಹಮಿಹೀರರು ಪುನಃ ಪುನಃ ‘ಮೇರುಪರ್ವತದ ವರ್ಣನೆಯನ್ನು ಮಾಡಿದ್ದಾರೆ. ಈ ಮೇರುಪರ್ವತವು ಮೇರುಸ್ತಂಭವೇ ಆಗಿರಬಹುದು. ಬೃಹತ್ ಸಂಹಿತೆಯಲ್ಲಿ ಪ್ರಾಸಾದ ಲಕ್ಷಣದ ಅಧ್ಯಾಯದಲ್ಲಿಯೂ ವರಾಹಮಿಹೀರರ ಎಲ್ಲಕ್ಕಿಂತ ಮೊದಲು ‘ಮೇರುಪ್ರಾಸಾದ’ ನಿರ್ಮಿಸುವ ವಿಧಿಯನ್ನು ನೀಡಲಾಗಿದೆ. ವಾಸ್ತುಶಾಸ್ತ್ರದಲ್ಲಿ ಪ್ರಖರ ಜ್ಞಾನವಿರುವ ಗುಪ್ತಕಾಲ ಇವರೂ ‘ವರಾಹಮಿಹೀರ’ರಂತಹ ಬೇರೆ ಯಾರೂ ಆಗಿಲ್ಲ. ಈ ಸ್ತಂಭವು ಕ್ರಿಸ್ತಪೂರ್ವದ ನಿರ್ಮಿತಿಯಾಗಿದೆ ಮತ್ತು ವರಾಹಮಿಹೀರರು ಖಂಡಿತವಾಗಿಯೂ  ಅದರ ಮೊದಲೇ ಇದ್ದರು. ಕೊನೆಯದಾಗಿ ಈ ಮೇರುಸ್ತಂಭದ ಮಾಧ್ಯಮದಿಂದ ನಮಗೆ ವರಾಹಮಿಹೀರರ ನಿವಾಸಸ್ಥಾನ, ಅವರ ಕಾರ್ಯಕ್ಷೇತ್ರ, ತಂತ್ರ, ಅವರ ಪ್ರತಿಭೆ ಮತ್ತು ಅವರ ಕಾಲದ ಪ್ರಬಲ ಸಂಕೇತ ಸಿಗುತ್ತದೆ. ಈ ಎಲ್ಲ ಪ್ರಬಲ ಪುರಾವೆಗಳಿಂದ, ಮಿಹರೌಲಿಯಲ್ಲಿರುವ ಮೇರುಸ್ತಂಭ ವರಾಹಮಿಹೀರರ ವೇಧಶಾಲೆಯಾಗಿತ್ತು, ಎಂಬುದು ಸಿದ್ಧವಾಗುತ್ತದೆ.

– ಜ್ಯೋತಿಷಿ ಡಾ. ಜಿತೇಂದ್ರ ವ್ಯಾಸ, ಜೋಧಪುರ, ರಾಜಸ್ಥಾನ. (೧ ಅಕ್ಟೋಬರ್ ೨೦೧೨) (‘ಕಾಶ್ಮೀರ ವಿದ್ಯಾಪೀಠ, ಶ್ರೀನಗರದಲ್ಲಿ ಅಕ್ಟೋಬರ್ ೨೦೧೨ ರಲ್ಲಿ ನಡೆದ ೪೬ ನೇ ‘ಆಲ್ ಇಂಡಿಯಾ ಓರಿಯೆಂಟಲ್ ಕಾನಫರನ್ಸ್’ನಲ್ಲಿ ಮಂಡಿಸಿದ ಶೋಧಪ್ರಬಂಧ)