ಹಿಂದೂ ಶಬ್ದ ವಿದೇಶಿಯಾಗಿದ್ದು ಇದರ ಅರ್ಥ ಬಹಳ ಅಶ್ಲೀಲವಾಗಿದೆ !(ಅಂತೆ)

ಕಾಂಗ್ರೆಸ್ಸಿನ ಕರ್ನಾಟಕ ಪ್ರದೇಶಾಧ್ಯಕ್ಷ ಸತೀಶ ಜಾರಕಿಹೊಳಿ ಇವರ ಸಂಶೋಧನೆ !

ಕಾಂಗ್ರೆಸ್ಸಿನ ಕರ್ನಾಟಕ ಪ್ರದೇಶಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ – ಹಿಂದೂ, ಇದು ಪರ್ಶಿಯನ ಶಬ್ದವಾಗಿದೆ. ಇದರ ಅರ್ಥ ಬಹಳ ಅಶ್ಲೀಲವಾಗಿದೆ. ನೀವು ಜಾಲತಾಣದಲ್ಲಿ ಇದರ ಬಗ್ಗೆ ಮಾಹಿತಿ ಪಡೆಯಬಹುದು. ಕೆಲವು ಜನರು ಈ ವಿದೇಶಿ ಶಬ್ದಗಳ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಅದು ಏಕೆ ಎಂದು ನನಗೆ ತಿಳಿಯುತ್ತಿಲ್ಲ. ಒಂದು ವಿದೇಶಿ ಶಬ್ದವನ್ನು ನಮ್ಮ ಮೇಲೆ ಏಕೆ ಹೇರುತ್ತಿದ್ದಾರೆ, ಈ ವಿಷಯದ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು, ಎಂಬ ಹೇಳಿಕೆ ಕಾಂಗ್ರೆಸ್ಸಿನ ಕರ್ನಾಟಕ ಪ್ರದೇಶಾಧ್ಯಕ್ಷ ಸತೀಶ ಜಾರಕಿಹೊಳಿ ಇವರು ನಿಪ್ಪಾಣಿಯ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ನೀಡಿದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

ಸಂಪಾದಕೀಯ ನಿಲುವು

ಯಾರು ಹೀನ ಗುಣಗಳ ನಾಶ ಮಾಡುತ್ತಾನೋ ಅವನು ಹಿಂದೂ, ಎಂದು ಭಾರತೀಯ ಧರ್ಮ ಗ್ರಂಥದಲ್ಲಿ ಹಿಂದೂ ಶಬ್ದದ ಅರ್ಥವನ್ನು ಹೇಳಲಾಗಿದೆ. ಇದನ್ನು ಸತೀಶ ಜಾರಕಿಹೊಳಿ ಇವರು ಅಭ್ಯಾಸ ಮಾಡಿಲ್ಲ ಎಂದು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ !