ಇರಾನಿನಲ್ಲಿ ನಡೆಯುತ್ತಿರುವ ಹಿಜಾಬ ವಿರೋಧಿ ಆಂದೋಲನದಲ್ಲಿ ಈಗ ಯುವತಿಯರು ಮೌಲಾನಾರ ತಲೆಯ ಮೇಲಿನ ಟೋಪಿಯನ್ನು ಬೀಳಿಸುತ್ತಿದ್ದಾರೆ !

(ಹಿಜಾಬ ಅಂದರೆ ಮುಸಲ್ಮಾನ ಮಹಿಳೆಯರ ತಲೆ ಹಾಗೂ ಕುತ್ತಿಗೆಯನ್ನು ಮುಚ್ಚುವ ಬಟ್ಟೆ)
(ಮೌಲಾನಾ ಅಂದರೆ ಇಸ್ಲಾಮಿನ ಅಧ್ಯಯನಕಾರ)

ತೆಹರಾನ (ಇರಾನ) – ಇರಾನಿನಲ್ಲಿ ಕಳೆದ ೨ ತಿಂಗಳುಗಳಿಂದ ಹಿಜಾಬಿನ ವಿರುದ್ಧ ಅಲ್ಲಿನ ಮಹಿಳೆಯರಿಂದ ಆಂದೋಲನ ನಡೆಯುತ್ತಿದೆ. ಸರಕಾರದಿಂದ ಈ ಆಂದೋಲನವನ್ನು ಹೊಸುಕಿಹಾಕುವ ಪ್ರಯತ್ನಗಳೂ ನಡೆಯುತ್ತಿವೆ. ಈಗ ಈ ಆಂದೋಲನದಲ್ಲಿ ಒಂದು ವಿಭಿನ್ನ ಪ್ರಯತ್ನ ನಡೆಯುತ್ತಿದೆ. ಇಲ್ಲಿನ ಹುಡುಗಿಯರು, ಯುವತಿಯರು ಹಾಗೂ ಯುವಕರು ರಸ್ತೆಯ ಮೇಲೆ ಹೋಗುವ ಮೌಲಾನಾರ ತಲೆಯ ಮೇಲಿನ ಪಗಡಿ, ಟೋಪಿ ಇತ್ಯಾದಿಗಳನ್ನು ಬೀಳಿಸಿ ಓಡಿ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿನ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗಿವೆ. ಕೆಲವು ಕಡೆಗಳಲ್ಲಿ ಬಿದ್ದಿರುವ ಪಗಡಿ, ಟೋಪಿಯನ್ನು ಅನಂತರ ಕಸದ ಬುಟ್ಟಿಯಲ್ಲಿ ಹಾಕಲಾಗುತ್ತಿದೆ.