ಗಾಝಿಯಾಬಾದ(ಉತ್ತರಪ್ರದೇಶ)ನಲ್ಲಿ ರಸ್ತೆಯ ಮೇಲೆ ನಮಾಜುಪಠಣ ಮಾಡುವವರ ಮೇಲೆ ಅಪರಾಧ ದಾಖಲು

ಹಿಂದೂಗಳ ಸಂಘಟನೆಗಳ ವಿರೊಧದ ನಂತರದ ಕಾರ್ಯಾಚರಣೆ !

ಗಾಝಿಯಾಬಾದ (ಉತ್ತರಪ್ರದೇಶ) – ಇಲ್ಲಿನ ದೀಪಕ ವಿಹಾರ ಭಾಗದಲ್ಲಿ ರಸ್ತೆಯ ಮೇಲೆ ನಮಾಜು ಪಠಣಮಾಡುವುದರ ವಿರುದ್ಧ ಹಿಂದೂಗಳ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಇಮಾಮ (ಮಸೀದಿಯಲ್ಲಿ ಪ್ರಾರ್ಥನೆಯನ್ನು ಮಾಡಿಸಿಕೊಳ್ಳುವವರು) ಹಾಗೂ ಅಜ್ಞಾತ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ. ನಮಾಜುಪಠಣ ಮಾಡುವವರನ್ನು ಗುರುತಿಸಿ ಅವರ ಮೇಲೆ ಕಾರ್ಯಾಚರಣೆಯನ್ನು ನಡೆಸಲಾಗುವುದು.

೧. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಮಂತ್ರಿಗಳಾದ ವಿಕಾಸ ಮಿಶ್ರಾರವರು, ‘ನಾನು ಸ್ವತಃ ನಮಾಜುಪಠಣದ ವಿಡಿಯೋವನ್ನು ಟ್ವೀಟ್‌ ಮಾಡಿದ್ದೇನೆ. ಅಲ್ಲಿ ಮಸೀದಿಯಿದೆ. ಅಲ್ಲಿ ಮೊದಲು ಮದರಸಾ ನಡೆಸಲಾಗುತ್ತಿತ್ತು. ಈಗ ಅದನ್ನೇ ಮಸೀದಿಯಾಗಿ ರೂಪಾಂತರಿಸಲಾಗಿದೆ. ಹಿಂದೆ ಈ ಬಗ್ಗೆ ವಾದ ನಡೆದಿತ್ತು. ಆಗ ಮಸೀದಿಯನ್ನು ಕಟ್ಟಲು ಸಾಧ್ಯವಾಗಲಿಲ್ಲ. ಈ ಮಸೀದಿಯ ೫೦೦ ಮೀಟರ ಪರಿಸರದಲ್ಲಿ ಒಂದು ದೊಡ್ಡ ಮಸೀದಿಯೂ ಇದೆ. ಅಲ್ಲಿ ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿ ನಮಾಜುಪಠಣ ಮಾಡಬಹುದು; ಆದರೆ ಅವರು ಉದ್ದೇಶಪೂರ್ವಕವಾಗಿ ಹಿಂದೂಗಳ ಭಾಗಕ್ಕೆ ಬಂದು ನಮಾಜುಪಠಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಿಂದೂಗಳಿಗೆ ತೊಂದರೆ ಕೊಡಲೆಂದೇ ಹೀಗೆ ಮಾಡಲಾಗುತ್ತಿದೆ. ನನ್ನ ಟ್ವೀಟ್‌ನ ನಂತರ ಪೊಲೀಸ ಅಧೀಕ್ಷಕರು ಇದನ್ನು ಗಮನಿಸಿ ಅಪರಾಧವನ್ನು ದಾಖಲಿಸಿದ್ದಾರೆ. ಅವರು ಇನ್ನು ಮುಂದೆ ಈ ರಸ್ತೆಯ ಮೇಲೆ ನಮಾಜುಪಠಣವಾಗಲು ಬಿಡುವುದಿಲ್ಲ’ ಎಂದು ಆಶ್ವಾಸನೆಯನ್ನು ನೀಡಿದ್ದಾರೆ ಎಂದು ಹೇಳಿದರು.

೨. ಸ್ಥಳೀಯರು ‘ನಮಾಜುಪಠಣ ಮಾಡುವುದರಿಂದ ರಸ್ತೆ ತಡೆಯಾಗುತ್ತದೆ. ಇದರಿಂದ ಓಡಾಟ ಮಾಡಲು ಅಡಚಣೆಯಾಗುತ್ತದೆ. ಪೊಲೀಸರು ಇವರನ್ನು ತಡೆಯಬೇಕು ಹಾಗೂ ಜವಾಬ್ದಾರರ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕು’ ಎಂದು ಹೇಳುತ್ತಾರೆ.

ಸಂಪಾದಕೀಯ ನಿಲುವು

  • ಹಿಂದೂಗಳ ಸಂಘಟನೆಗಳಿಗೆ ಕಾಣುವ ಸಂಗತಿಯು ಎಲ್ಲ ವ್ಯವಸ್ಥೆಗಳು ಕೈಯಲ್ಲಿರುವ ಪೊಲೀಸ ಹಾಗೂ ಸರಕಾರಕ್ಕೆ ಏಕೆ ಕಾಣಿಸುವುದಿಲ್ಲ ?ಅಥವಾ ಅವರು ಕಂಡರೂ ಈ ಬಗ್ಗೆ ದುರ್ಲಕ್ಷ್ಯ ಮಾಡುತ್ತಾರೆಯೇ ? ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಸ್ಥಿತಿ ಇರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
  • ವಿರೋಧಿಸಿದಾಗ ಪೊಲೀಸರು ದೂರು ದಾಖಲಿಸಿಕೊಳ್ಳಬಹುದಾದರೆ ದೇಶದಲ್ಲಿನ ಇತರ ಭಾಗಗಳಲ್ಲಿಯೂ ರಸ್ತೆಗಳ ಮೇಲೆ ನಮಾಜುಪಠಣ ಮಾಡುತ್ತಿರುವಾಗ ಪೊಲೀಸರು ದೂರನ್ನು ನೋಂದಾಯಿಸಿ ಸಂಬಂಧಿತರ ಮೇಲೇಕೆ ಕಾರ್ಯಾಚರಣೆಯನ್ನು ಮಾಡುವುದಿಲ್ಲ ?